ಪ್ರತಿ ಮನೆಗೆ ಗೆಲುವಿನ ಸಿಹಿ ಹಂಚಿ ಸಂಭ್ರಮಿಸಿದ ಪಕ್ಷೇತರ ಸದಸ್ಯ ಉಮ್ಮರ್

June 7, 2019
10:41 PM

ಸುಳ್ಯ: ತನ್ನ ವಾರ್ಡ್ ನ ಪ್ರತಿ ಮನೆಗೂ ಲಡ್ಡು ಹಂಚಿ ಗೆಲುವಿನ ಸಿಹಿ ಸಂಭ್ರಮವನ್ನು ಹಂಚಿದ್ದಾರೆ ನ.ಪಂ.ಚುನಾವಣೆಯಲ್ಲಿ 17ನೇ ವಾರ್ಡ್ ಬೋರುಗುಡ್ಡೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಜಯಶಾಲಿಯಾದ ಕೆ.ಎಸ್‌.ಉಮ್ಮರ್.

ಶುಕ್ರವಾರ ತನ್ನ ಬೆಂಬಲಿಗರೊಂದಿಗೆ ವಾರ್ಡ್ ನ ಎಲ್ಲಾ ಮನೆಗಳಿಗೂ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಉಮ್ಮರ್ ಮನೆ ಮಂದಿಗೆ ಸಿಹಿ ತಿಂಡಿ ನೀಡಿದರು. ಕೆಲವು ಮನೆಗಳಲ್ಲಿ ನೂತನ ಸದಸ್ಯರನ್ನು ಜನತೆ ಹೂ ಹಾರ ಹಾಕಿ ಸ್ವಾಗತಿಸಿದರು. ವಾರ್ಡ್ ನ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡುವಂತೆ ಹಿರಿಯರು ಆಶಯ ವ್ಯಕ್ತಪಡಿಸಿದರು.
ನ.ಪಂ.ಚುನಾವಣೆಯಲ್ಲಿ ಅತ್ಯಂತ ಪೈಪೋಟಿ ನಡೆದ ಬೋರುಗುಡ್ಡೆ ವಾರ್ಡ್ ನಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಉಮ್ಮರ್ ಜಯಗಳಿಸಿದ್ದರು. ಕಳೆದ ಬಾರಿ ಎಸ್.ಡಿ.ಪಿ.ಐ ಸದಸ್ಯನಾಗಿದ್ದ ಉಮ್ಮರ್ ಈ ಬಾರಿ ಪಕ್ಷದಿಂದ ದೂರ ಸರಿದು ಪಕ್ಷೇತರನಾಗಿ ಸ್ಪರ್ಧಿಸಿದ್ದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಭಜನಾ ಮಂಡಳಿ ಉದ್ಘಾಟನೆ
February 24, 2026
6:51 AM
by: ಮಿರರ್‌ ಡೆಸ್ಕ್
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
January 28, 2026
3:48 PM
by: ಮಿರರ್‌ ಡೆಸ್ಕ್
ಸುಳ್ಯದಲ್ಲಿ 265 ಅರ್ಹ ರೈತರಿಗೆ ಕೃಷಿ ಸವಲತ್ತುಗಳ ವಿತರಣೆ
January 20, 2026
6:24 AM
by: ದ ರೂರಲ್ ಮಿರರ್.ಕಾಂ
ಜನವರಿ 23 ರಿಂದ ಕದ್ರಿ ಫಲಪುಷ್ಪ ಪ್ರದರ್ಶನ
January 3, 2026
9:25 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror