ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ

August 30, 2019
7:00 PM

ಮಂಗಳೂರು:  ಕೇಂದ್ರ ಸರಕಾದಿಂದ ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ವೃದ್ಧಾಪ್ಯ ಪಿಂಚಣಿ ಯೋಜನೆಯನ್ನು 18 ರಿಂದ 40 ವರ್ಷದೊಳಗಿನ ಸಣ್ಣ ಮತ್ತು ಅತಿಸಣ್ಣ ರೈತರಿಗಾಗಿ ಜಾರಿಗೆ ತರಲಾಗಿದೆ.

Advertisement

ಈ ಯೋಜನೆಯಡಿ ಪ್ರವೇಶ ಪಡೆಯುವ ಸಣ್ಣ ಮತ್ತು ಅತಿಸಣ್ಣ ರೈತರು – ಪ್ರತಿ ತಿಂಗಳಿಗೆ ನಿಗದಿಪಡಿಸಿದ ವಿಮಾಕಂತು ರೂ.55 ರಿಂದ ರೂ.200 ರವರೆಗೆ ಪಾವತಿಸಬೇಕು. 60 ವರ್ಷ ದಾಟಿದ ನಂತರ ಪ್ರತಿ ತಿಂಗಳು ಕನಿಷ್ಠ ಪಿಂಚಣಿ ರೂ.3000 ದೊರೆಯುವುದು. ಪ್ರೀಮಿಯಂ ಮೊತ್ತದಲ್ಲಿ 50% ಪಾಲಿನ ಮೊತ್ತವನ್ನು ಕೇಂದ್ರ ಸರಕಾರ ಪಾವತಿಸುತ್ತದೆ. ಪಿಂಚಣಿಯನ್ನು ಪಾವತಿಸುವ ಜವಾಬ್ದಾರಿ ಎಲ್.ಐ.ಸಿ.ಯದ್ದಾಗಿರುತ್ತದೆ.

ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್  ವೃದ್ಧಾಪ್ಯ ಪಿಂಚಣಿ ಯೋಜನೆಯು ರೈತ ಸಮುದಾಯಕ್ಕೆ ಉಪಯುಕ್ತವಾದ ಯೋಜನೆಯಾಗಿರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡು ಸದರಿ ಯೋಜನೆಯ ಲಾಭವನ್ನು ಪಡೆಯಲು ಕೋರಿದೆ. ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲಿ ಉಚಿತವಾಗಿ ದಾಖಲಾತಿ ಮಾಡುವ ಮೂಲಕ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ  , ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಜಂಟಿ ಕೃಷಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 24-02-2026 | ತುಂತುರು ಮಳೆ, ಮೋಡದ ವಾತಾವರಣ ಮುಂದುವರಿಕೆ | ಮಾರ್ಚ್ ಮೊದಲ ವಾರದಿಂದ ಬಿಸಿಲು ಹೆಚ್ಚಳ ಸಾಧ್ಯತೆ
February 24, 2026
2:05 PM
by: ಸಾಯಿಶೇಖರ್ ಕರಿಕಳ
ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಭಜನಾ ಮಂಡಳಿ ಉದ್ಘಾಟನೆ
February 24, 2026
6:51 AM
by: ಮಿರರ್‌ ಡೆಸ್ಕ್
ಔಷಧ ಕ್ಷೇತ್ರದಲ್ಲಿ ಭಾರತದ ಐತಿಹಾಸಿಕ ಸಾಧನೆ | ಲಸಿಕೆ ತಯಾರಿಕೆಯಲ್ಲಿ ಜಾಗತಿಕ ಮುಂಚೂಣಿ
February 24, 2026
6:46 AM
by: ಮಿರರ್‌ ಡೆಸ್ಕ್
ಮುಂದಿನ ವರ್ಷದಿಂದ 1–10ನೇ ತರಗತಿಗೆ ‘ನೈತಿಕ ವಿಜ್ಞಾನ’ ಪಠ್ಯ ಪರಿಚಯ | ಸಚಿವ ಮಧು ಬಂಗಾರಪ್ಪ ಘೋಷಣೆ
February 24, 2026
6:39 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror