ಪ್ಲಾಸ್ಟಿಕ್ ಮುಕ್ತ ಸುಳ್ಯ ಜಾಗೃತಿ ಜಾಥಾ

August 31, 2019
4:57 PM

ಸುಳ್ಯ: ಸೆ.1ರಿಂದ ಸುಳ್ಯ ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಗೆ ಬರಲಿದೆ. ಈ ಹಿನ್ನಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಠಿಯಿಂದ ಪ್ಲಾಸ್ಟಿಕ್ ಮುಕ್ತ ಸುಳ್ಯ ಜಾಗೃತಿ ಅಭಿಯಾನ ನಗರದಲ್ಲಿ ನಡೆಯಿತು. ಸುಳ್ಯ ಹಳೆಗೇಟ್ ಭಾರತ್ ಪೆಟ್ರೋಲ್ ಪಂಪ್ ಬಳಿಯಿಂದ ಗಾಂಧೀನಗರ ಪೆಟ್ರೋಲ್ ಪಂಪ್ ವರೆಗೆ ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ನೇತೃತ್ವದಲ್ಲಿ  ನಗರ ಪಂಚಾಯತ್ ನ ಸಹಭಾಗಿತ್ವದಲ್ಲಿ ಜಾಗೃತಿ ಜಾಥಾ  ನಡೆಯಿತು. ಪ್ಲಾಸ್ಟಿಕ್ ನಿಷೇಧ ಜಾರಿ ಮಾಡುವ ಹಿನ್ನಲೆಯಲ್ಲಿ ವರ್ತಕರು ಪ್ಲಾಸ್ಟಿಕ್ ಮಾರಾಟ ಮಾಡದಂತೆ ಮತ್ತು ಸಾರ್ವಜನಿಕರು ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

 

ಸುಳ್ಯ ವರ್ತಕರ ಸಂಘ, ಸ್ವಚ್ಚ ನಗರ ಸುಳ್ಯ ತಂಡ, ಲಯನ್ಸ್ ಸಂಸ್ಥೆ, ರೋಟರಿ ಸಂಸ್ಥೆ, ಇನ್ನರ್ ವೀಲ್ ಕ್ಲಬ್, ನಗರದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವ  ರೆಡ್ ಕ್ರಾಸ್, ಸ್ಕೌಟ್ಸ್, ಗೈಡ್ಸ್, ರೋವರ್ಸ್, ಎನ್.ಎಸ್‌.ಎಸ್ ಮತ್ತಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಈ ಆಂದೋಲನ ನಡೆಯಿತು.

ತಹಶೀಲ್ದಾರ್ ಎ‌ನ್.ಎ.ಕುಂಞಿ ಅಹಮ್ಮದ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ, ನ.ಪಂ.ಸದಸ್ಯರಾದ ವಿನಯಕುಮಾರ್ ಕಂದಡ್ಕ, ಬಾಲಕೃಷ್ಣ ರೈ, ಸುಧಾಕರ ಕುರುಂಜಿಭಾಗ್, ಸರೋಜಿನಿ ಪೆಲ್ತಡ್ಕ, ಕಿಶೋರಿ ಶೇಟ್, ಬಾಲಕೃಷ್ಣ ಭಟ್, ಶಶಿಕಲಾ ನೀರಬಿದಿರೆ, ಶೀಲಾ ಅರುಣ ಕುರುಂಜಿ, ವಾಣಿಶ್ರೀ, ಸುಶೀಲಾ ಜಿನ್ನಪ್ಪ, ಪೂಜಿತಾ ಕೆ.ಯು,  ಕೆ.ವಿ.ಜಿ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎ‌.ಜ್ಞಾನೇಶ್, ಕ.ಸಾ.ಪ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ, ಪ್ರಮುಖರಾದ ಡಾ.ಬಿ.ಎನ್.ಶ್ರೀಕೃಷ್ಷ, ಅಶೋಕ್ ಎಡಮಲೆ, ಕೆ.ಎಲ್.ಪ್ರದೀಪ್ ಕುಮಾರ್, ಡಿ.ಎಸ್.ಗಿರೀಶ್, ಕೆ.ಆರ್.ಮನಮೋಹನ, ಭೀಮರಾವ್ ವಾಸ್ಟರ್, ಮಲ್ಲೇಶ್ ಬೆಟ್ಟಂಪಾಡಿ, ಸಂಜೀವ ಕುದ್ಪಾಜೆ, ಡಾ.ಅನುರಾಧಾ ಕುರುಂಜಿ, ಡಾ.ಕೆ.ಜಿ.ಪುರುಷೋತ್ತಮ, ಹರ್ಷಿತಾ ಪುರುಷೋತ್ತಮ, ಲೋಕೇಶ್ ಗುಡ್ಡೆಮನೆ, ವಿನೋದ್ ಲಸ್ರಾದೋ, ವಿಖ್ಯಾತ್ ಬಾರ್ಪಣೆ, ರಫೀಕ್ ಪಡು ಮತ್ತಿತರರು ಭಾಗವಹಿಸಿದ್ದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 29-03-2026 | ಕರ್ನಾಟಕದಲ್ಲಿ ಮತ್ತೆ ಮಳೆ…! ನಿಮ್ಮ ಜಿಲ್ಲೆಯಲ್ಲಿ ಮಳೆ ಇದೆಯಾ..?
March 29, 2026
2:48 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 28-03-2026 | ಎಪ್ರಿಲ್ 4 ರವರೆಗೆ ಕರಾವಳಿ–ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ಸೂಚನೆ..!
March 28, 2026
2:03 PM
by: ಸಾಯಿಶೇಖರ್ ಕರಿಕಳ
ಬೀದಿ ನಾಯಿಗಳ ಸಮಸ್ಯೆ | 27,481 ನಾಯಿ ಕಡಿತ ಪ್ರಕರಣಗಳು ವರದಿ..!
March 28, 2026
11:07 AM
by: ಮಿರರ್‌ ಡೆಸ್ಕ್
ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ
March 28, 2026
7:38 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror