ಪುತ್ತೂರು: ಆಭರಣದಲ್ಲಿ ಹೊಸತಾಗಿ ಆವಿಷ್ಕಾರಗೊಂಡ ಆಭರಣವೆಂದರೆ “ಅಡಿಕೆ ಸರ” . ಸ್ವಾದಿಷ್ಟವಾದ ಅಡಿಕೆಯನ್ನು ಆಭರಣವನ್ನಾಗಿ ಧರಿಸಬಹುದೇ ಎಂದು ಮೂಗಿನ ಮೇಲೆ ಬೆರಳಿಟ್ಟು ನೋಡುವಂತಹ ಸುಂದರ, ಫ್ಯಾಶನ್ ಪ್ರಿಯರಿಗಾಗಿ ಮಾಡಿದ ಸರವಾಗಿದೆ. ಶಿವನಿಗೆ ರುದ್ರಾಕ್ಷಿ ಸರ ಪ್ರಿಯವಾದರೆ, ಸನ್ಮಾನ, ಬಹುಮಾನ ಕೊಡುವಾಗ ಹಾಕಲು ಯೋಗ್ಯವಾದ ಸರ ಇದಾಗಿದೆ. ಚಿನ್ನ ಮತ್ತು ಬೆಳ್ಳಿಯಲ್ಲಿ ನೈದ ವಿನ್ಯಾಸದಲ್ಲಿದೆ. ಫ್ಲೆಕ್ಸಿಬಲ್ ಆಗಿದೆ. ಪುರುಷರಿಗೆ ದಕ್ಷಿಣ ಕನ್ನಡದ ಅಡಿಕೆಯನ್ನು ಬಳಸಿದರೆ, ಹೆಂಗಳೆಯರಿಗೆ ಸಿಂಗಾಪುರ ಅಡಿಕೆಯಲ್ಲಿ ತಯಾರು ಮಾಡಲಾಗಿದೆ. ಅಡಿಕೆ ಹಾರವನ್ನು ಪ್ರಥಮವಾಗಿ ತಯಾರಿಸಿದ ಹೆಗ್ಗಳಿಕೆ ಪುತ್ತೂರಿನ ಮುಳಿಯ ಸಂಸ್ಥೆಗೆ ಸಲ್ಲುತ್ತದೆ. ಚಿನ್ನದ ಸಿಂಗಾಪುರ ಅಡಿಕೆ ಸರದಲ್ಲಿ 27 ಪೀಸ್ ಅಡಿಕೆ ಇದ್ದು 22.690 ಗ್ರಾಂ ಚಿನ್ನ ಬಳಕೆ ಮಾಡಲಾಗಿದ್ದು ಸರದ ಅಂದಾಜು ಮೌಲ್ಯ 86,680 ರೂಪಾಯಿ . ಬೆಳ್ಳಿಯ ಸಿಂಗಾಪುರ ಅಡಿಕೆ ಸರದಲ್ಲಿ 23 ಪೀಸ್ ಅಡಿಕೆ ಬಳಸಲಾಗಿದೆ. ಬಳಸಿದ ಬೆಳ್ಳಿಯ ತೂಕ 22.210 ಗ್ರಾಂ. ಸರದ ಅಂದಾಜು ಮೌಲ್ಯ- 2,270 ರೂಪಾಯಿ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬಳಸಿ ಮಾಡಿರುವ ಬೆಳ್ಳಿಯ ಸರಕ್ಕೆ 4,330 ರೂಪಾಯಿ ವೆಚ್ಚ ತಗಲುತ್ತದೆ.
ಬಂದಿದೆ ಹೊಸತು ಅಡಿಕೆ ಸರ….!

Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Be the first to comment on "ಬಂದಿದೆ ಹೊಸತು ಅಡಿಕೆ ಸರ….!"