ಬದಿಯಡ್ಕದಲ್ಲಿ ಇಂದು ಹಲಸು ಮೇಳದ ಗೌಜಿ : ಪುತ್ತೂರಿನಲ್ಲಿ ಜೂ.15 ರಂದು ಹಲಸು ಸಾರ ಮೇಳ

Advertisement

ಸುಳ್ಯ: ಬಡಿಯಡ್ಕದಲ್ಲಿ ಇಂದು ಹಲಸು ಮೇಳದ ಗೌಜಿ ನಡೆಯಲಿದೆ. ಇಂದು ಇಡೀ ದಿನ ಹಲಸಿನದ್ದೇ ಮಾತುಕತೆ ನಡೆಯಲಿದೆ. ಇಲ್ಲಿ  ವಿಶೇಷವಾಗಿ ಗೋವಿಗಾಗಿ ಹಲಸು ಮೇಳ ನಡೆಯುತ್ತಿರುವುದು  ವಿಶೇಷವಾಗಿದೆ. ಗೋವಿಗೆ ಹಲಸನ್ನೇ ಗೋಗ್ರಾಸ ನೀಡುವ ಬಗ್ಗೆಯೂ ಇಲ್ಲಿ  ಮಾತುಕತೆ ನಡೆಯುತ್ತಿದೆ. ಹೀಗಾಗಿ ಹಲಸು ಈ ಬಾರಿ ಅತ್ಯಂತ ಜನಪ್ರತಿಯವಾಗುತ್ತಿದೆ.

Advertisement

ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠ ಇಂದು ಬೆಳಗ್ಗಿನಿಂದ ಸಂಜೆಯವರೆಗೆ ಹಲಸು ಮೇಳ ನಡೆಯುತ್ತದೆ. ಹಲಸು ಮೌಲ್ಯ ವರ್ಧನೆ, ಹಲಸು ಮಾತುಕತೆ , ತಿಂಡಿಗಳ ಪ್ರದರ್ಶನ ಇಲ್ಲಿರುತ್ತದೆ.

Advertisement
Advertisement

ಹಲಸು ಮೇಳದಲ್ಲಿ ಏನೇನಿದೆ?…..

ಹಲಸಿನ ಕಾಯಿ ದೋಸೆ, ಹಣ್ಣಿನ ದೋಸೆ, ಹಲಸಿನ ಹಣ್ಣಿನ ಕೊಟ್ಟಿಗೆ, ಗೆಣಸಲೆ , ಹಲಸಿನ ಹಣ್ಣಿನ, ಕಾಯಿಯ ಗುಳಿ ಅಪ್ಪ, ಹಲಸಿನ ಹಣ್ಣಿನ, ಕಾಯಿ ಸೇಮಿಗೆ,
ಹಲಸಿನ ಇಡ್ಲಿ, ಹಲಸಿನ ಬೀಜದ ಹೋಳಿಗೆ, ಹಲಸಿನ ಹಣ್ಣಿನ ಹಲ್ವ, ಹಲಸಿನ ಬೀಜದ ಹಲ್ವ, ಉಂಡ್ಲಕಾಳು, ಚಿಪ್ಸ್, ಹಪ್ಪಳಗಳು, ಹಲಸಿನ ಕಾಯಿಸೊಳೆ, ಹಣ್ಣಿನ ಸೊಳೆ, ಹಲಸಿನ ಹಣ್ಣಿನ ಡ್ರೈ ಸೊಳೆ, ಹಲಸಿನ ಹಣ್ಣಿನ ಕೇಕ್, ಹಲಸಿನ ಬೀಜದ ಬಿಸ್ಕತ್ತು, ವಡೆ, ಹಲಸಿನ ಸೊಳೆಯ ರೊಟ್ಟಿ, ಹಲಸಿನ ಹಣ್ಣಿನ ಜ್ಯೂಸ್
ಹಲಸಿನ ಹಣ್ಣಿನ ಜೆಲ್ಲಿ ಜಾಮ್, ಹಲಸಿನ ಕೇಕ್,  ಪಾಯಸಗಳು , ಬೇಳೆಯ ಪಾಯಸ, ಪೆರಟಿ ಪಾಯಸ, ಜೆರಡಿ ಪಾಯಸ, ಹಣ್ಣಿನ ಪಾಯಸ, ಹಲಸಿನ ಚಿಳ್ಳೆಯಲ್ಲಿ ಪಾಯಸ, ಹಲಸಿನ ಕಾಯಿ ಚಿಪ್ಸ್, ಹಲಸಿನ ಬೀಜದ ರಸಂ ಪುಡಿ, ಹಲಸಿನ ಐಸ್ ಕ್ರೀಂ, ಹಲಸಿನ ಐಸ್ ಕ್ಯಾಂಡಿಗಳು, ಹಲಸಿನ ಗುಜ್ಜೆ ಮಂಚೂರಿ, ಹಲಸಿನ ಗುಜ್ಜೆ ಕಬಾಬ್, ವಿವಿಧ ನಮೂನೆಯ ಸಮೂಸಗಳು, ಹಲಸಿನ ಗುಜ್ಜೆ ಪಲಾವು ಇದ್ದರೆ.  ವಿವಿಧ ಜಾತಿಯ ಹಲಸಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ಹಲವು ರೀತಿಯ ಹಲಸಿನ ವಿವಿಧ ರೀತಿಯ ತಿಂಡಿ ತಿನಸುಗಳು, ಉತ್ಪನ್ನಗಳು ಮೇಳದಲ್ಲಿ  ಮಾರಾಟಕ್ಕೂ ಲಭ್ಯವಿದೆ.

Advertisement

ಇಲ್ಲಿ  ವಿಶೇಷ ಎಂದರೆ ಹಬ್ಬದಲ್ಲಿ  ಮಾರಾಟವಾಗುವ ಹಲಸು ಉತ್ಪನ್ನಗಳಲ್ಲಿ  ಒಮದು ಪಾಲು ಗೋಶಾಲೆಯ ಅಭಿವೃದ್ಧಿಗೂ ಬಳಕೆಯಾಗುತ್ತದೆ.

 

Advertisement

ಜೂ.15 ಹಾಗೂ 16 ರಂದು ಪುತ್ತೂರಿನಲ್ಲಿ :

ಜೂನ್.15 ಹಾಗೂ 16 ರಂದು ಪುತ್ತೂರಿನಲ್ಲಿ  ಹಲಸು ಸಾರ ಮೇಳ ನಡೆಯಲಿದೆ. ಹಲಸು ಸ್ನೇಹಿ ಕೂಟದ ವತಿಯಿಂದ ನಡೆಯುವ ಹಲಸು ಸಾರ ಮೇಳ ಕೂಡಾ ವಿಶೇಷ ರೀತಿಯಲ್ಲಿ  ನಡೆಯಲಿದೆ. ವಿಶೇಷವಾಗಿ ಐ ಐ ಎಚ್ ಆರ್ ಬೆಂಗಳೂರು ಸಂಸ್ಥೆ ಕೂಡಾ ಆಗಮಿಸಿ ಮಾಹಿತಿ ನೀಡಲಿದೆ.

Advertisement

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಬದಿಯಡ್ಕದಲ್ಲಿ ಇಂದು ಹಲಸು ಮೇಳದ ಗೌಜಿ : ಪುತ್ತೂರಿನಲ್ಲಿ ಜೂ.15 ರಂದು ಹಲಸು ಸಾರ ಮೇಳ"

Leave a comment

Your email address will not be published.


*