ಬದಲಾಗುತ್ತಿರುವ ಕೊರೋನಾ ವೈರಸ್‌ ನ ರೋಗಲಕ್ಷಣಗಳು | 11 ಹೊಸ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವಾಲಯ

July 19, 2020
2:18 PM

ನವದೆಹಲಿ: ಕೊರೋನಾ ವೈರಸ್‌ ಪ್ರಪಂಚದಾದ್ಯಂತ ಬಹುದೊಡ್ಡ ತಲೆನೋವಿನ ಸಂಗತಿಯಾಗಿದೆ. ಕೇವಲ 4  ಲಕ್ಷಣಗಳ ಮೂಲಕ ಬೆಳಕಿಗೆ ಬಂದ ಕೊರೋನಾ ವೈರಸ್‌ ಇದೀಗ  11 ಲಕ್ಷಣಗಳನ್ನು ಹೊಂದಿರುವ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

Advertisement
Advertisement
Advertisement
Advertisement
ಪ್ರಪಂಚದಾದ್ಯಂತ ಕೊರೋನಾ ವೈರಸ್‌ ವ್ಯಾಪಕವಾಗಿದೆ. ಇದರ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಲೇ ಇದೆ. ಲಸಿಕೆಗಳ ಪ್ರಯೋಗವೂ ನಡೆಯುತ್ತಿದೆ. ಚೀನಾದ ವುಹಾನ್ ನಲ್ಲಿ  ಕಂಡುಬಂದ ಕೊರೋನಾ ವೈರಸ್‌ ಮಾನದ ದೇಹಕ್ಕೆ ಅಂಟಿದ ಬಳಿಕ ಆರಂಭದಲ್ಲಿ 4 ಲಕ್ಷಣಗಳು ಕಂಡುಬಂದಿತ್ತು. ಬಳಿಕ ಪ್ರಪಂಚದಾದ್ಯಂತ ಹರಡಿದ ಕೊರೋನಾ ವೈರಸ್‌ ತನ್ನ ರುದ್ರ ರೂಪವನ್ನು  ತೋರಿಸಿದೆ. ಇದೀಗ  ರೋಗ ಲಕ್ಷಣಗಳು 4 ಮಾತ್ರವಲ್ಲ ಒಟ್ಟು 11 ಲಕ್ಷಣಗಳನ್ನೂ ಗಮನಿಸಬೇಕಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ರೋಗ  ಲಕ್ಷಣಗಳು ನಿರಂತರವಾಗಿ ಬದಲಾಗುತ್ತಿವೆ. ಹೊಸ ಲಕ್ಷಣಗಳು ಕಂಡುಬರುತ್ತಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು  ಮಾಹಿತಿ ನೀಡಿದೆ.
ಕೊರೋನಾ ವೈರಸ್‌ ಹರಡಿದ ಆರಂಭದಲ್ಲಿ 4 ರೋಗ ಲಕ್ಷಣಗಳು ಪ್ರಮುಖವಾಗಿದ್ದವು  ವಿಪರೀತ ಜ್ವರ , ಒಣ ಕೆಮ್ಮು, ಗಂಟಲು ಕೆರತ ಹಾಗೂ  ಉಸಿರಾಟದಲ್ಲಿ ತೊಂದರೆ.
ಆದರೆ ಇದೀಗ  ಕೊರೋನಾದಿಂದ ಬಳಲುತ್ತಿರುವ ರೋಗಿಗಳ ಪರಿಶೀಲನೆ ಬಳಿಕ ವಿಪರೀತ ಜ್ವರ , ಒಣ ಕೆಮ್ಮು, ಗಂಟಲು ಕೆರತ ಹಾಗೂ  ಉಸಿರಾಟದಲ್ಲಿ ತೊಂದರೆ ರೋಗ ಲಕ್ಷಣಗಳ ಜೊತೆಗೆ  ತೀವ್ರ ದೇಹದ ನೋವು,  ನಿರಂತರ ತಲೆನೋವು,  ತುಂಬಾ ಶೀತದಿಂದ ನಡುಗುತ್ತದೆ, – ವಾಕರಿಕೆ,  ವಾಂತಿ,  ಹೊಟ್ಟೆಯಲ್ಲಿ ಸಂಕಟ, ಅತಿಸಾರ,  ಕೆಮ್ಮುವ ಸಮಯದಲ್ಲಿ ಲೋಳೆಯ ರಕ್ತಸ್ರಾವ ಇತ್ಯಾದಿಗಳೂ ಕಂಡುಬಂದಿವೆ.
ಇದಕ್ಕೂ ಮುನ್ನ ವಿಶ್ವ ಆರೋಗ್ಯ ಸಂಸ್ಥೆಯು ಕೊರೋನಾ ರೋಗ ಲಕ್ಷಣದಲ್ಲಿ ವಾಸನೆ ತಿಳಿಯದಿರುವುದು ಮತ್ತು ರುಚಿ ಗೊತ್ತಾಗದಿರುವುದೂ ಸಹ  ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ ಎಂದು ಹೇಳಿತ್ತು.
ಮುಂಜಾಗ್ರತೆ ಏನು ? :ಕೊರೋನಾ ವೈರಸ್‌ ನಿಂದ ಪಾರಾಗಲು ಆರೋಗ್ಯ ಸಚಿವಾಲಯವು ಸದಾ ಎಚ್ಚರಿಕೆಯನ್ನು  ನೀಡುತ್ತಿದೆ. ಪ್ರಮುಖವಾಗಿ ಸಾಮಾಜಿಕ ಅಂತರ ಕಾಪಾಡುವುದು ,  ಸಾರ್ವಜನಿಕ ಸ್ಥಳದಲ್ಲಿ ಕನಿಷ್ಠ 6 ಅಡಿ ದೂರವಿರುವುದು, ಕಣ್ಣು, ಮೂಗು ಮತ್ತು ಬಾಯಿಯನ್ನು ಪದೇ ಪದೇ ಕೈಗಳಿಂದ ಮುಟ್ಟದಿರುವುದು, ಆಗಾಗ್ಗೆ ಸೋಪಿನಿಂದ ಕೈ ತೊಳೆಯುವುದು,  ಯಾವುದೇ ಸ್ಥಳವನ್ನು ಮುಟ್ಟುವ ಮೊದಲು ಅದನ್ನು ಸ್ವಚ್ಛಗೊಳಿಸುವುದು,  ಅಗತ್ಯವಿದ್ದಾಗ ಮಾತ್ರ ಪ್ರವಾಸ ಮಾಡುವುದು, ಜನಸಂದಣಿ ಇರುವ ಸ್ಥಳಕ್ಕೆ ಹೋಗದಿರುವುದು, ಸಾರ್ವಜನಿಕ ಸ್ಥಳದಲ್ಲಿ ಉಗುಳದಿರುವುದು ಹೀಗೇ ವಿವಿಧ ಮಾಹಿತಿಯನ್ನು ಸಚಿವಾಲಯ ನೀಡುತ್ತಿದೆ.

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇಂದ್ರ ಬಜೆಟ್‌ | ರೈತರಿಗೆ ಕಿಸಾನ್ ಕಾರ್ಡ್ ನಿಂದ ಪ್ರಯೋಜನ | ಕೃಷಿ ವಲಯಕ್ಕೆ 137757 ಕೋಟಿ ಅನುದಾನ |
February 6, 2025
7:40 AM
by: The Rural Mirror ಸುದ್ದಿಜಾಲ
ಆನೆಗಳ ಚಲನ ವಲನಗಳ ಬಗ್ಗೆ ಸ್ವದೇಶಿ ನಿರ್ಮಿತ ರೇಡಿಯೊ ಕಾಲರ್ ಅಳವಡಿಕೆ | ಅರಣ್ಯ ಸಚಿವ ಈಶ್ವರ್ ಖಂಡ್ರೆ
February 6, 2025
7:33 AM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ
February 5, 2025
6:45 AM
by: The Rural Mirror ಸುದ್ದಿಜಾಲ
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ  ಬೆಳೆಗಳಿಗೆ ರಾಸಾಯನಿಕ ಬಳಸಬೇಡಿ
February 5, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror