ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಗೌಜಿಯಲ್ಲಿ ನಡೆದ `ಹಲಸುಮೇಳ’

June 9, 2019
1:00 PM

ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ `ಹಲಸು ಮೇಳ’ ನಡೆಯಿತು.  ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವಿನ ಮೇವಿಗಾಗಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಹಮ್ಮಿಕೊಂಡ ಹಲಸುಮೇಳಕ್ಕೆ ಸಾವಿರಾರು ಮಂದಿ ಆಗಮಿಸಿದ ಗ್ರಾಮೀಣ ಹಲಸಿನ ತಿಂಡಿ ತಿನಿಸುಗಳನ್ನು ಸೇವಿಸಿ ಮೆಚ್ಚುಗೆಯನ್ನು ಸೂಚಿಸಿದರು.

Advertisement

ಹಲಸಿನ ವೈವಿಧ್ಯಮಯ ತಿಂಡಿಗಳು, ದೋಸೆ, ಇಡ್ಲಿ, ಪಾಯಸ, ಐಸ್ ಕ್ರೀಂ, ಐಸ್ ಕ್ಯಾಂಡಿ, ಮಂಚೂರಿ ಹಾಗೂ ಇನ್ನೂ ಹತ್ತು ಹಲವಾರು ಬಗೆಗಳಲ್ಲದೆ ಸುಮಾರು 65000 ಕ್ಕೂ ಮಿಕ್ಕ ಹಪ್ಪಳಗಳು ಮಧ್ಯಾಹ್ನ 3 ಗಂಟೆ ವೇಳೆಗೇ ಖಾಲಿಯಾದವು. ಮೇಳದಲ್ಲಿ ಒಟ್ಟು 2500 ಕ್ಕೂ ಹೆಚ್ಚು ಮಂದಿ  ನೋಂದಾವಣೆ ಮಾಡಿಸಿದ್ದರು.  ಕಳೆದ ಒಂದು ತಿಂಗಳಿನಿಂದ ಪ್ರತಿಯೊಂದು ಮನೆಯಿಂದ 100  ಹಪ್ಪಳದಂತೆ ಗೋವಿಗೆ ಸಮರ್ಪಣೆ ಮಾಡಬೇಕು ಎನ್ನುವ ಉದ್ದೇಶದಿಂದ ನಿರಂತರ ಸೇವೆಗೈದಿದ್ದರು.

 

 

ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳ ಮೇವಿನ ಉದ್ದೇಶದಿಂದ ಮುಳ್ಳೇರಿಯ ಹವ್ಯಕ ಮಂಡಲದ  ನೇತೃತ್ವದಲ್ಲಿ, ಗೋಭಕ್ತರ ಹಾಗೂ ಬದಿಯಡ್ಕ ಮಹಿಳೋದಯದ ಸಹಕಾರದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆದ ಹಲಸು ಮೇಳವನ್ನು ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿ “ಕೃಷಿಕರ ಪಾಲಿನ ಆಪತ್ಭಾಂದವನಾದ ಹಲಸು ಇಂದು ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತದೆ. ಇಂತಹ ಕಾರ್ಯಕ್ರಮಗಳು ಔಚಿತ್ಯಪೂರ್ಣವಾಗಿದೆ” ಎಂದರು.

 

 

ಸಭೆಯಲ್ಲಿ ನಿವೃತ್ತ ಸಬ್ ರಿಜಿಸ್ಟ್ಟ್ರಾರ್ ಮುಹಮ್ಮದಾಲಿ ಪೆರ್ಲ, ಶ್ರೀರಾಮಚಂದ್ರಾಪುರಮಠದ ಗೋಕರ್ಣ ಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು,  ಮುಳ್ಳೇರಿಯ ಹವ್ಯಕ ಮಂಡಲ ದಿಗ್ದರ್ಶಕ ಬಿ.ಜಿ. ರಾಮಭಟ್ ಗೋಳಿತ್ತಡ್ಕ, ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ.ಶ್ರೀಕೃಷ್ಣ ಭಟ್, ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ, ಡಾ| ವೈ.ವಿ.ಕೃಷ್ಣಮೂರ್ತಿ, ಕುಸುಮ ಪೆರ್ಮುಖ, ಜಯಪ್ರಕಾಶ ಪಜಿಲ, ಕಾಸರಗೋಡು ಸಿಪಿಸಿಆರ್‌ಐಯ ವಿಜ್ಞಾನಿ ಡಾ| ಸರಿತಾ ಹೆಗ್ಡೆ, ವೆಂಕಟಕೃಷ್ಣ ಶರ್ಮ ಮುಳಿಯ ಉಪಸ್ಥಿತರಿದ್ದರು.

 

 

ಹಲಸು ಮೇಳದ ಅಧ್ಯಕ್ಷ ಶಿವಪ್ರಸಾದ ವರ್ಮುಡಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೆರಡಾಲ ವಲಯ ಅಧ್ಯಕ್ಷ ಹರಿಪ್ರಸಾದ ಪೆರ್ಮುಖ ಧನ್ಯವಾದವನ್ನಿತ್ತರು. ಶಂಕರ ಪ್ರಸಾದ ಕುಂಚಿನಡ್ಕ, ಗುರುಮೂರ್ತಿ ನಾಯ್ಕಾಪು, ಚಂದ್ರಶೇಖರ ಏತಡ್ಕ, ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ನಿರೂಪಣೆಗೈದರು.

 

ಬಗೆಬಗೆಯ ತಿಂಡಿಗಳು :

ಮೇಳದ ವಿವಿಧ ಸ್ಟಾಲ್‌ಗಳಲ್ಲಾಗಿ ಹಲಸಿನ ಕಾಯಿ ದೋಸೆ, ಹಣ್ಣಿನ ದೋಸೆ, ಹಣ್ಣಿನ ಕೊಟ್ಟಿಗೆ, ಗೆಣಸಲೆ, ಹಣ್ಣು ಹಾಗೂ ಕಾಯಿಯ ಗುಳಿ ಅಪ್ಪ, ಸೇಮಿಗೆ, ಹಲಸಿನ ಇಡ್ಲಿ, ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹಲ್ವ, ಬೀಜದ ಹಲ್ವ, ಉಂಡ್ಲಕಾಳು, ಚಿಪ್ಸ್, ಹಪ್ಪಳಗಳು, ಕಾಯಿಸೊಳೆ, ಹಣ್ಣಿನ ಸೊಳೆ, ಹಲಸಿನ ಹಣ್ಣಿನ ಡ್ರೈ ಸೊಳೆ, ಹಲಸಿನ ಹಣ್ಣಿನ ಕೇಕ್, ಹಲಸಿನ ಬೀಜದ ಬಿಸ್ಕತ್ತು, ವಡೆ, ಹಲಸಿನ ಸೊಳೆಯ ರೊಟ್ಟಿ, ಹಲಸಿನ ಹಣ್ಣಿನ ಜ್ಯೂಸ್, ಹಲಸಿನ ಹಣ್ಣಿನ ಜೆಲ್ಲಿ ಜಾಮ್, ಹಲಸಿನ ಕೇಕ್, ಹಲಸಿನ ಬೀಜದ ಪಾಯಸ, ಪೆರಟಿ ಪಾಯಸ, ಜೆರಡಿ ಪಾಯಸ, ಹಣ್ಣಿನ ಪಾಯಸ, ಕಾಯಿ ಚಿಪ್ಸ್, ಬೀಜದ ರಸಂ ಪುಡಿ, ಹಲಸಿನ ಐಸ್ ಕ್ರೀಂ, ಐಸ್ ಕ್ಯಾಂಡಿಗಳು, ಹಲಸಿನ ಗುಜ್ಜೆ ಮಂಚೂರಿ, ಗುಜ್ಜೆ ಕಬಾಬ್ ವಿವಿಧ ನಮೂನೆಯ ಸಮೂಸಗಳು, ಗುಜ್ಜೆ ಪಲಾವು ಅಲ್ಲದೆ ಇನ್ನೂ ಹಲವು ರೀತಿಯ ಹಲಸಿನ ವಿವಿಧ ರೀತಿಯ ತಿಂಡಿ ತಿನಸುಗಳು, ಉತ್ಪನ್ನಗಳನ್ನು ಮೇಳದಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಆಗಮಿಸಿದ ಅತಿಥಿಗಳಿಗೆ ಹಲಸಿನ ಬೀಜದ ಕಷಾಯವನ್ನು ಪಾನೀಯವಾಗಿ ನೀಡಲಾಗಿತ್ತು. ವಿವಿಧ ಜಾತಿಯ ಹಲಸಿನ ಗಿಡಗಳನ್ನು ಅನೇಕರು ಖರೀದಿಸಿದರು.

 

 

ಬೆಳಗ್ಗೆ ಆರಂಭದ ಸಂದರ್ಭದಲ್ಲಿಯೇ ಜನದಟ್ಟಣೆಯಿಂದ ಕೂಡಿದ್ದು ಮಧ್ಯಾಹ್ನ ವೇಳೆಗೆ ಹೆಚ್ಚಿನ ಸ್ಟಾಲ್‌ಗಳು ಖಾಲಿಯಾಗಿದ್ದವು. 20 ಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ಹಲಸಿನ ನಾನಾ ಬಗೆಯ ಚಿತ್ರಣಗಳು ಅನಾವರಣಗೊಂಡಿದ್ದವು. ಒಂದೆಡೆ ದೋಸೆ, ರೊಟ್ಟಿ ತಿನ್ನಲು ಜನರು ಮುಗಿಬೀಳುತ್ತಿದ್ದರೆ ಮಹಿಳೋದಯದ ಸ್ಟಾಲ್‌ನಲ್ಲಿ ಹಪ್ಪಳ ಖರೀದಿಗಾಗಿ ಜನರು ಕಾಯುತ್ತಿದ್ದರು. ಬಿಸಿ ಬಿಸಿಯಾದ ಹೋಳಿಗೆ, ಹಲಸಿನ ಹಣ್ಣಿನ ಬನ್ಸ್, ಹಲಸಿನ ಐಸ್ ಕ್ರೀಂ, ಕ್ಯಾಂಡಿಗಳನ್ನು ತಿಂದ ಜನರು ಹಲಸಿನ ಚಿಳ್ಳೆಯಲ್ಲಿ ಪಾಯಸವನ್ನು ಕುಡಿದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

 

 

 

 

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದ ಕೃಷಿಯಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಆದ್ಯತೆ |
March 24, 2025
9:44 PM
by: ದ ರೂರಲ್ ಮಿರರ್.ಕಾಂ
ಕೃಷಿ ತಂತ್ರಜ್ಞಾನಗಳು ಪ್ರಯೋಗಾಲಯಗಳಿಂದ ಶೀಘ್ರವಾಗಿ ಕೃಷಿ ಭೂಮಿಗೆ ವರ್ಗಾವಣೆಯಾಗಬೇಕು
March 24, 2025
8:52 PM
by: ದ ರೂರಲ್ ಮಿರರ್.ಕಾಂ
ಕುಡಿಯುವ ನೀರಿನ ಸಮಸ್ಯೆ | ಮುನ್ನೆಚ್ಚರಿಕೆ ವಹಿಸಲು ದಕ  ಜಿ.ಪಂ ಸಿಇಓ ಸೂಚನೆ
March 24, 2025
8:05 PM
by: ದ ರೂರಲ್ ಮಿರರ್.ಕಾಂ
ಅಡಿಕೆ ತಳಿ ಮತ್ತು ಅಡಿಕೆ ಬೆಳೆಯಲ್ಲಿ ಉತ್ತಮ ಬೇಸಾಯ ಕ್ರಮ | ತರಬೇತಿ ಕಾರ್ಯಕ್ರಮ
March 24, 2025
7:32 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror