ಬನ್ನಿ #ಸ್ವಚ್ಛಸುಳ್ಯ ದ ಭಾಗಿಗಳಾಗೋಣ….

ಸುಳ್ಯ: ಸ್ವಚ್ಛ ಸುಳ್ಯದ ಅಭಿಯಾನ ಆರಂಭವಾಗಿದೆ. ಇಡೀ ಸುಳ್ಯವನ್ನು ಸ್ವಚ್ಛ ನಗರವನ್ನಾಗಿಸುವ ಉದ್ದೇಶದಿಂದ ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ನೇತೃತ್ವದಲ್ಲಿ ನಗರ ಪಂಚಾಯತ್ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸ್ವಚ್ಛತಾ ಅಭಿಯಾನ ಭಾನುವಾರ ನಡೆಯಿತು.
ನಿರಂತರ ನಡೆಯುವ ಅಭಿಯಾನದ ಏಳನೇ ವಾರದ ಸ್ವಚ್ಛತಾ ಕಾರ್ಯಕ್ಕೆ ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ಚಾಲನೆ ನೀಡಿದರು. ಹಳೆಗೇಟು ಪೆಟ್ರೋಲ್ ಪಂಪ್‍ನಿಂದ ಆರಂಭಗೊಂಡು ಜ್ಯೋತಿ ವೃತ್ತದ ವರೆಗೆ ನಡೆದ ಸ್ವಚ್ಛತಾ ಅಭಿಯಾನದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ನಗರ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಲಯನ್ಸ್ ಕ್ಲಬ್ ಅಧ್ಯಕ್ಷ ಜಗನ್ನಾಥ ರೈ, ಗೃಹರಕ್ಷಕ ದಳದ ಜಯಂತ ರೈ, ವಿನೋದ್ ಲಸ್ರಾದೋ, ಗೌತಂ ಭಟ್, ಕೆ.ಟಿ.ವಿಶ್ವನಾಥ, ಎ.ಎಂ.ಭಟ್. ಮನಮೋಹನ್, ದೊಡ್ಡಣ್ಣ ಬರೆಮೇಲು, ಲೋಕೇಶ್ ಗುಡ್ಡೆಮನೆ, ಹಸೈನಾರ್ ಜಯನಗರ, ಶರೀಫ್ ಜಟ್ಟಿಪಳ್ಳ, ಹಾಜಿ ಅಬ್ದುಲ್ ಸಮದ್, ಸತೀಶ್, ಕಿಶನ್, ಡಿ.ಎಸ್.ಗಿರೀಶ್, ನ.ಪಂ.ಆರೋಗ್ಯಾಧಿಕಾರಿ ರವಿಕೃಷ್ಣ ಮತ್ತಿತರರು ಭಾಗವಹಿಸಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಬನ್ನಿ #ಸ್ವಚ್ಛಸುಳ್ಯ ದ ಭಾಗಿಗಳಾಗೋಣ…."

Leave a comment

Your email address will not be published.


*