ಬರಕ್ಕೆ ನಲುಗಿದ ಸುಳ್ಯ : “ನೀರು ಕುಡಿಯುವ ಮನೆ”ಯಲ್ಲೂ ನೀರಿಲ್ಲ…!

Advertisement

ಸುಳ್ಯ: ಸುಳ್ಯ ಹಿಂದೆಂದೂ ಕಾಣದ ಭೀಕರ ಬರಕ್ಕೆ ನಲುಗಿ ಹೋಗಿದೆ. ಪೂರ್ವ ಮುಂಗಾರು ಕೊರತೆ ಹಾಗೂ ಬಿರು ಬಿಸಿಲಿನ ತಾಪಕ್ಕೆ ಜಲಾಶ್ರಯ ಗಳು ಬತ್ತಿ ಹೋಗಿದ್ದು ಎಲ್ಲೆಡೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಹಿಂದೆಂದೂ ಬತ್ತದೇ ಇದ್ದ ನೀರಿನ ಮೂಲಗಳು ಬತ್ತುತ್ತಿದ್ದು ಜನತೆ ಆಕಾಶದತ್ತ ನೋಡುವಂತಾಗಿದೆ.

Advertisement

ಸುಳ್ಯದ ಬೂಡು ಪರಿಸರದ ಗಣೇಶ್ ಆಚಾರ್ಯ ಎಂಬವರ ಮನೆಯ ಸನಿಹ ಸುರಂಗ ಬಾವಿಯೊಂದಿದೆ. ಈ ಬಾವಿ ಕಳೆದ ಎಂಭತ್ತ್ತು ವರ್ಷಗಳಿಂದ ಪರಿಸರದ ಜನರ ದಾಹ ತೀರಿಸುತ್ತಿದೆ. ದಾರಿಹೋಕರು ಹಾಗೂ ಸುತ್ತಲಿನ ಪರಿಸರದ ಜನ ಕುಡಿಯುವ ನೀರಿಗಾಗಿ ಇದೇ ಸುರಂಗ ಬಾವಿಯನ್ನು ಆಶ್ರಯಿಸಿದ್ದರು. ಸ್ಥಳೀಯರೆಲ್ಲರಿಗೂ ನೀರನ್ನು ಪೂರೈಸುವ ಈ ಮನೆಯನ್ನು ‘ನೀರು ಕುಡಿಯುವ ಮನೆ‘ ಎಂದೇ ಕರೆಯುತ್ತಿದ್ದರು. ಗಣೇಶ್ ಆಚಾರ್ಯರ ತಂದೆ ಮಂಜುನಾಥ ಆಚಾರ್ಯ ಹಾಗೂ ಅಜ್ಜ ರಾಮಯ್ಯ ಆಚಾರ್ಯರು ಈ ಸುರಂಗ ಬಾವಿಯನ್ನು 80 ವರ್ಷಗಳ ಹಿಂದೆ ನಿರ್ಮಿಸಿದ್ದು ಈ ಬಾವಿ ಅಲ್ಲಿಂದ ಇಲ್ಲಿಯವರೆಗೆ ಹಲವರ ನೀರು ದಾಹವನ್ನು ತೀರಿಸಿದೆ. ಬಾಯಾರಿ ಬಂದವರಿಗೆ ದಣಿವಾರಿಸಿ ಕೊಳ್ಳಲು ನೀರು ನೀಡುತ್ತಿದ್ದ ಈ ಬಾವಿಯಲ್ಲಿ ಈ ಬಾರಿಯ ಬಿಸಿಲು ಹಾಗೂ ಬರದಿಂದಾಗಿ ಒಂದು ಹನಿಯೂ ನೀರು ಲಭ್ಯವಿಲ್ಲ.

Advertisement
Advertisement

ಕಟ್ಟಡ ನಿರ್ಮಾಣಕ್ಕೂ ಬಳಕೆ: ಬೂಡುವಿನಲ್ಲಿ ನಿರ್ಮಾಣಗೊಂಡ ಕೆ.ಇ.ಬಿ ಸಿಬ್ಬಂದಿಗಳ ವಸತಿ ಗೃಹದ ನಿರ್ಮಾಣಕ್ಕೂ ಈ ಬಾವಿ ನೀರನ್ನು ಬಳಸಲಾಗಿತ್ತು. ಅಲ್ಲದೇ ಸ್ಥಳೀಯ ಪರಿಸರದಲ್ಲಿ ನಿರ್ಮಾಣಗೊಂಡ ಬಹುತೇಕ ಕಟ್ಟಡಗಳಿಗೆ ಇದೇ ಬಾವಿಯ ನೀರನ್ನು ಬಳಸಲಾಗಿತ್ತು. ಯಥೇಚ್ಛವಾಗಿ ದೊರೆಯುತ್ತಿದ್ದ ನೀರು ಇದೀಗ ಬತ್ತಿರುವುದು ಸ್ಥಳೀಯ ನಿವಾಸಿಗಳಿಗೆ ಬೇಸರ ಜೊತೆಗೆ ಆಶ್ಚರ್ಯವನ್ನು ಉಂಟುಮಾಡಿದೆ.

ನೀರು ಕೇಳಿದಾಗ ಇಲ್ಲ ಎನ್ನಬಾರದು: ಬಾವಿ ತೊಡಿದ ದಿ|ರಾಮಯ್ಯ ಆಚಾರ್ಯರವರು ಮಕ್ಕಳಿಗೆ ಯಾರೂ ನೀರು ಕೇಳಿದರೂ ಇಲ್ಲ ಎನ್ನಬಾರದು ಎಂದು ಹೇಳಿದ್ದರು. ಅಲ್ಲಿಂದ ಇಲ್ಲಿಯವರೆಗೆ ಯಾರೊಬ್ಬರಿಗೂ ನೀರು ಇಲ್ಲ ಎಂದು ಹೇಳದೆ ಬೇಕಾದಷ್ಟು ನೀರನ್ನು ಕೊಡಲಾ
ಗಿತ್ತು. ಆದರೆ ಈಗ ಬಾವಿಯಲ್ಲಿ ನೀರು ಬತ್ತಿರುವುದರಿಂದ ನೀರು ಇಲ್ಲ ಎಂದು ಹೇಳಲು ಸಂಕಟವಾಗುತ್ತಿದೆ ಎನ್ನುತ್ತಾರೆ ಗಣೇಶ್ ಆಚಾರ್ಯ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಬರಕ್ಕೆ ನಲುಗಿದ ಸುಳ್ಯ : “ನೀರು ಕುಡಿಯುವ ಮನೆ”ಯಲ್ಲೂ ನೀರಿಲ್ಲ…!"

Leave a comment

Your email address will not be published.


*