ಬಳ್ಪದಲ್ಲಿ ಹೆಚ್ಚಿದ ಚಿರತೆ ಕಾಟ : ಕರುವಿನ ಮೇಲೆ ಧಾಳಿ

July 30, 2019
5:47 PM

ಬಳ್ಪ: ಸುಳ್ಯ ತಾಲೂಕಿನ  ಬಳ್ಪ ಪರಿಸರದಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ಎರಡು ತಿಂಗಳ ಹಿಂದಷ್ಟೇ ಹಟ್ಟಿಯಲ್ಲಿದ್ದ ದನದ ಮೇಲೆ ಧಾಳಿ ನಡೆಸಿ ಕೊಂದಿದ್ದ ಚಿರತೆ ಇದೀಗ ಇನ್ನೊಂದು ಕರುವಿನ ಮೇಲೆ ಧಾಳಿ ನಡೆಸಿ ಕೊಂದಿದೆ. ಹೀಗಾಗಿ ಜನತೆ ಭಯಗೊಂಡಿದ್ದಾರೆ.

Advertisement
Advertisement

ಬಳ್ಪ ಪರಿಸರದ ಕಾಡಂಚಿನ ಪ್ರದೇಶ ಹಾಗೂ ಎಣ್ಣೆಮಜಲು , ಏನೆಕಲ್ಲು , ಬಾನಡ್ಕ, ತುಂಭತ್ತಾಜೆ ಸೇರಿದಂತೆ ವಿವಿಧ ಕಡೆಗಳಲ್ಲಿ  ಚಿರತೆ ಹಾವಳಿ ಹೆಚ್ಚಾಗಿದೆ. ಮನೆಗಳಿಂದ ನಾಯಿಗಳನ್ನು ಹಿಡಿಯುತ್ತಿದ್ದ ಚಿರತೆ ಇದೀಗ ದನಗಳ ಮೇಲೂ ಧಾಳಿ ನಡೆಸಲು ಆರಂಭಿಸಿದೆ. ಎರಡು ತಿಂಗಳ ಹಿಂದೆ ಎಣ್ಣೆಮಜಲಿನಲ್ಲಿ  ಹಟ್ಟಿಗೇ ನುಗ್ಗಿದ್ದ ಚಿರತೆ ಇದೀಗ ಬಳ್ಪ ಪ್ರದೇಶದ ಮೂಡ್ನೂರು ಎಂಬಲ್ಲಿ ಕಾಡಿನ ಬದಿಯಲ್ಲಿ  ಸಂಚರಿಸುತ್ತಿದ್ದ  ಸ್ಥಳೀಯ ಕೃಷಿಕರೊಬ್ಬರ ಹೋರಿ ಕರುವಿನ ಮೇಲೆ ಚಿರತೆ ಧಾಳಿ ನಡೆಸಿ ಕೊಂದು ಹಾಕಿದೆ. ಇದೀಗ ಜನತೆಯ ಆತಂಕ ಹೆಚ್ಚಾಗಿದೆ. ತಕ್ಷಣವೇ ಚಿರತೆಯನ್ನು ಹಿಡಿದು ಜನತೆಯ ಭಯ ನಿವಾರಣೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೊಸರುಚಿ | ಹಲಸಿನ ಕಾಯಿ ಬೋಂಡಾ ರೆಸಿಪಿ – ಇದು ರುಚಿಕರ ಗ್ರಾಮೀಣ ಸ್ನ್ಯಾಕ್
February 15, 2026
6:32 AM
by: ದಿವ್ಯ ಮಹೇಶ್
ಜೀವನಪ್ರೀತಿ
February 15, 2026
6:21 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಗೋವಾದಲ್ಲಿ ಗೇರು ಕೃಷಿಗೆ ಕೋತಿಗಳ ಉಪಟಳ | ಕರಾವಳಿ ಕರ್ನಾಟಕದ ಗೇರು ಕೃಷಿಗೆ ಮುನ್ನೆಚ್ಚರಿಕೆಯ ಸಂದೇಶ ?
February 15, 2026
6:13 AM
by: ಮಿರರ್‌ ಡೆಸ್ಕ್
ಅಂಕದ “ಸುರಕ್ಷತೆ”ಯಾ? ಬದುಕಿನ “ಸುರಕ್ಷತೆ”ಯಾ? – ಗ್ರಾಮೀಣ ಶಿಕ್ಷಣದ ಮಣ್ಣಿನ ಸತ್ವ ಕಳೆದುಕೊಳ್ಳದಿರೋಣ
February 15, 2026
5:54 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror