ಬಳ್ಪದ ಕಲ್ಲೇರಿಯಲ್ಲಿ ಚಿರತೆ ದಾಳಿಗೆ ಕರು ಬಲಿ

Advertisement

ಬಳ್ಪ: ಬಳ್ಪ ಗ್ರಾಮದ ಕಲ್ಲೇರಿಯ ಸುಬ್ರಹ್ಮಣ್ಯ ಭಟ್ ಅವರ ಹಟ್ಟಿಗೆ ದಾಳಿ ಮಾಡಿದ ಚಿರತೆ ಕರುವನ್ನು ತಿಂದ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.

Advertisement

ಕಳೆದ ಕೆಲವು ಸಮಯಗಳಿಂದ ಬಳ್ಪ ಗ್ರಾಮದ ಎಣ್ಣೆಮಜಲು, ಕಲ್ಲೇರಿ, ಆಲ್ಕಬೆ, ತುಂಬತ್ತಾಜೆ ಪ್ರದೇಶದಲ್ಲಿ  ಚಿರತೆ ಓಡಾಟ ಇತ್ತು. ಕೆಲವು ಮನೆಗಳಿಂದ ನಾಯಿಯನ್ನು  ಈಗಾಗಲೇ ಕೊಂದು ತಿಂದಿದೆ. ಕೆಲವು ಕಡೆ ನಾಯಿ ಬೊಬ್ಬೆ ಕೇಳಿ ಮನೆಯವರು ಬಂದಾಗ ಚಿರತೆ ಓಡಿದ ಬಗ್ಗೆಯೂ ಜನರು ಮಾಹಿತಿ ನೀಡುತ್ತಾರೆ.

Advertisement
Advertisement

ಮಂಗಳವಾರ ರಾತ್ರಿ ಬಳ್ಪದ ಮೆಕ್ಯಾನಿಕ್ ಒಬ್ಬರು ರಾತ್ರಿ ಮನೆಗೆ ತೆರಳುವಾಗ ಚಿರತೆ ಕಂಡುಬಂದಿತ್ತು. ಅದೇ ದಿನ ರಾತ್ರಿ ಕಲ್ಲೇರಿಯಲ್ಲಿ ಕರುವನ್ನು  ಕೊಂದು ತಿಂದಿದೆ. ಬಳ್ಪ ಗ್ರಾಮದಲ್ಲು ತೊಂದರೆ ನೀಡುತ್ತಿರುವ ಚಿರತೆ ನ್ನು ಹಿಡಿಯಲು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು
ಚಿರತೆ ದಾಳಿ ಮಾಡಿದ   ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯತ್ ಸದಸ್ಯರಾದ ರಮಾನಂದ ಎಣ್ಣೆಮಜಲು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಬಳ್ಪದ ಕಲ್ಲೇರಿಯಲ್ಲಿ ಚಿರತೆ ದಾಳಿಗೆ ಕರು ಬಲಿ"

Leave a comment

Your email address will not be published.


*