ಬಾಂಗ್ಲಾಕ್ಕೆ ಅಪ್ಪಳಿಸಿದ ಚಂಡಮಾರುತ : 14 ಮಂದಿ ಬಲಿ

(ಇಂಟರ್ನೆಟ್ ಚಿತ್ರ )
Advertisement
ಢಾಕಾ: ಒಡಿಶಾದಿಂದ ಬಾಂಗ್ಲಾ ಕಡೆಗೆ ತಿರುಗಿದ್ದ ಫೋನಿ ಚಂಡಮಾರುತದ ಪ್ರಭಾವದಿಂದ
 ಬಾಂಗ್ಲಾದಲ್ಲಿ 14 ಮಂದಿ ಬಲಿಯಾಗಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿದೆ.
ಒಡಿಸ್ಸಾದಿಂದ ಪಶ್ಚಿಮ ಬಂಗಾಳ ಮೂಲಕವಾಗಿ ಸಾಗಿ  ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ಫೋನಿ ಚಂಡಮಾರುತದ ಅಬ್ಬರಕ್ಕೆ 14 ಮಂದಿ ಬಲಿಯಾಗಿದ್ದು  60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Advertisement

Advertisement
Advertisement

ಒಡಿಶಾದಲ್ಲಿ  12 ಜನರ ಬಲಿಗೆ ಕಾರಣವಾದ  ಫೊನಿ ಚಂಡಮಾರುತ ಶನಿವಾರ ಬಾಂಗ್ಲಾ ದೇಶದಲ್ಲಿ ಪ್ರತಾಪತೋರಿದೆ. ಬಾಂಗ್ಲಾದೇಶದ ಕರಾವಳಿ ಪ್ರದೇಶಗಳಾದ ನೊವಾಖಲಿ, ಭೋಲಾ ಮತ್ತು ಲಕ್ಷ್ಮಿಪುರ್‌ ಸೇರಿದಂತೆ 8 ಜಿಲ್ಲೆಗಳಲ್ಲಿ ಭಾರಿ ಅನಾಹುತ ಸೃಷ್ಟಿ ಮಾಡಿದೆ.
ಮುನ್ನೆಚ್ಚರಿಕಾ ಕ್ರಮವಾಗಿ  ಕರಾವಳಿ ತೀರದ  ಸುಮಾರು 16 ಲಕ್ಷ ಜನರನ್ನು 4,000 ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಿದೆ. ನೂರಾರು ಹಳ್ಳಿಗಳಿಗೆ ನೀರು ನುಗ್ಗಿದೆ.
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಬಾಂಗ್ಲಾಕ್ಕೆ ಅಪ್ಪಳಿಸಿದ ಚಂಡಮಾರುತ : 14 ಮಂದಿ ಬಲಿ"

Leave a comment

Your email address will not be published.


*