ಸವಣೂರು : ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪದಸ್ವೀಕಾರ ಪಡೆದುಕೊಂಡ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಹುಟ್ಟೂರಿನವರ ಪರವಾಗಿ ಸವಣೂರಿನ ತಂಡ ಬೇಟಿಯಾಗಿ ಅಭಿನಂದನೆ ಸಲ್ಲಿಸಿತು.
ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಕುಂಜಾಡಿ ನಳಿನ್ ಕುಮಾರ್ ಅವರ ಹುಟ್ಟೂರು.ಈ ಸಂದರ್ಭ ತಮ್ಮನ್ನು ಬೇಟಿಯಾದ ಗುರು ಆರ್.ಎಸ್.ಎಸ್.ನ ಹಿರಿಯ ಕಾರ್ಯಕರ್ತ ಬಿ.ಕೆ.ರಮೇಶ್ ಬಂಬಿಲ ಅವರ ಆಶೀರ್ವಾದ ಪಡೆದುಕೊಂಡರು.
ತಂಡದಲ್ಲಿ ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷಬಿ.ಕೆ.ರಮೇಶ್, ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ,ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ,ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಉಪಾಧ್ಯಕ್ಷ ರವಿಕುಮಾರ್,ಸದಸ್ಯರಾದ ಗಿರಿಶಂಕರ ಸುಲಾಯ, ಪ್ರಕಾಶ್ ಕುದ್ಮನಮಜಲು,ಸತೀಶ್ ಬಲ್ಯಾಯ ಕೆ,ರಾಜೀವಿ ಶೆಟ್ಟಿ,ಗಾಯತ್ರಿ ಬರೆಮೇಲು,ಮಾಜಿ ಸದಸ್ಯ ಬಾಳಪ್ಪ ಪೂಜಾರಿ ಬಂಬಿಲದೋಳ,ಬಂಬಿಲ ಹಾಲು ಉತ್ಪಾದಕರ ಸಹಕಾರಸಂಘದ ನಿರ್ದೆಶಕ ವಿಠಲ ಶೆಟ್ಟಿ ಬಂಬಿಲ,ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ , ಗ್ರಾಮ ವಿಕಾಸ ಸಮಿತಿಯ ಪೂರ್ವಾಧ್ಯಕ್ಷ ಸುದಾಕರ ರೈ ಕುಂಜಾಡಿ,ಚೆನ್ನಾವರ ಮುಹಿಯ್ಯದೀನ್ ಜುಮಾಮಸೀದಿಯ ಅಧ್ಯಕ್ಷ ಕರೀಂ ಹಾಜಿ,ಇಸ್ಮಾಯಿಲ್ ಕಾನಾವು,ಸಂದೀಪ್ ಕುಂಜಾಡಿ ,ಜಗದೀಶ್ ಬತಡ್ಕ ,ಪ್ರಶಾಂತ್ ಚೆನ್ನಾವರ ಇದ್ದರು.