ಬಿಸಿಲ ಹಾಳು ಮಾಡ ಬೇಡವೇ ಗೆಳತಿ

May 1, 2019
5:10 PM
ಹಳ್ಳಿಗಳಲ್ಲಿ ಮಹಿಳೆಯರಿಗೆ ಬೇಸಿಗೆಯಲ್ಲಿ ಕೈತುಂಬಾ ಕೆಲಸ . ಮಳೆಗಾಲದ ಸ್ವಾಗತಕ್ಕೆ ಪೂರ್ವ ತಯಾರಿ . ಉಪ್ಪಿನಕಾಯಿ ತಯಾರಿ, ಹಪ್ಪಳ, ಸಂಡಿಗೆ, ವಿವಿಧ ಶರಬತ್ತು ಸ್ಕ್ವ್ಯಾಷ್ ಗಳು,ಬಾಳೆಹಣ್ಣು ತುಂಡು ಮಾಡಿ ಒಣಗಿಸುವುದು, ಅರಶಿನ, ಮೆಣಸು, ಬೆಲ್ಲ ಗಳನ್ನೆಲ್ಲಾ ಒಣಗಿಸಿ ಹಾಳಾಗದಂತೆ ತೆಗೆದಿಡುವುದು. ಅಂಟುವಾಳ ಕಾಯಿ ಸೀಗೆ, ಬಾಗೆ ಗಳನ್ನು ಕುಟ್ಟಿ ಪುಡಿ‌ಮಾಡಿ ಇಟ್ಟು ಕೊಳ್ಳುವುದು ಹೀಗೆ   ಒಂದೇ ಎರಡೇ ಕೈತುಂಬಾ ಕೆಲಸ. ದಿನದ 24 ಗಂಟೆಯೂ ಕಮ್ಮಿಯೇ.
ಬಾಳೆಹಣ್ಣು ಹೆಚ್ಚು ದಿನ ಉಳಿಯುವುದಿಲ್ಲ. ಹಣ್ಣಾದ ಕೂಡಲೇ ಉಪಯೋಗಿಸಿ ಬಿಡಬೇಕು. ಬೇಸಿಗೆಯ ಬಿಸಿಲಿಗೆ ಬಾಳೆಹಣ್ಣು ಗಳನ್ನು ಒಣಗಿಸಿ ಇಟ್ಟರೆ ಬಹು ಕಾಲ‌ ಹಾಳಾಗದಂತೆ ಸಂರಕ್ಷಿಸಿ ಇಡಬಹುದು. ಬಾಳೆಹಣ್ಣಿನ ಸಿಪ್ಪೆ ತೆಗೆದು ನಾಲ್ಕು ಹೋಳು ಮಾಡಿ 10 ದಿನ ಒಳ್ಳೆ ಬಿಸಿಲಿಗೆ  ಒಣಗಿಸಿದರೆ 1 ವರ್ಷದ ವರೆಗೂ ಬಾಳೆಹಣ್ಣುಗಳನ್ನು ಕಾಪಿಡಬಹುದು. ಹಸಿ ಹಣ್ಣುಗಳನ್ನು ತಿನ್ನಲು ಇಷ್ಟಪಡದ ಮಕ್ಕಳೂ ಒಣಗಿಸಿದ  ಹಣ್ಣು ಗಳನ್ನು ಆಸೆಪಟ್ಟು ತಿನ್ನುತ್ತಾರೆ.
ಮಾವಿನ ಹಣ್ಣುಗಳ ಕಾಲದಲ್ಲಿ ಉಪಯೋಗಿಸು ವುದಕ್ಕಿಂತ ಹಾಳಾಗುವುದೇ ಹೆಚ್ಚು. ಈ ಹಣ್ಣು ಗಳನ್ನು ಹಲವು ರೀತಿಯಲ್ಲಿ ಮೌಲ್ಯವರ್ಧನೆ ಮಾಡಬಹುದು. ಮಾವಿನಹಣ್ಣುಗಳ ರಸವನ್ನು ತೆಗೆದು ಚಾಪೆಯಲ್ಲಿ, ಒಣ ಹಾಳೆಯಲ್ಲಿ ತೆಳ್ಳಗೆ ಹಾಕಿ  ಬಿಸಿಲಿಗೆ ಒಣಗಿಸ ಬೇಕು. ಒಂದು ಪದರ ಒಣಗಿದ ಮೇಲೆ ಮತ್ತೆ ಪುನಃ ಅದರ ಮೇಲೆ ಮಾವಿನ ಹಣ್ಣಿನ ರಸವನ್ನು ಹಾಕಿ ಹರಡ ಬೇಕು. ಅದು ಒಣಗಿದ ಮೇಲೆ ಮತ್ತೆ ಹಿಂಡಿ ದ ರಸವನ್ನು ಅದರ ಮೇಲೆ ಹರಡಬೇಕು. ( ಮಾವಿ ನ ಹಣ್ಣಿನ ರಸ ವನ್ನು ಒಮ್ಮೆ ಮಿಕ್ಸಿಗೆ ಹಾಕಿ 1 ನಿಮಿಷ ತಿರುಗಿಸಬೇಕು. ಆಮೇಲೆ ಅದನ್ನು ಉಪಯೋಗಿಸಬೇಕು.) 1 ಇಂಚು ದಪ್ಪ ಆಗುವವ ರೆಗೆ ಹೀಗೆ ಮಾವಿನ ಹಣ್ಣಿನ ರಸವನ್ನು  ಒಣಗಿದ ಮಾಂಬಳದ ಮೇಲೆ ಹಾಕುತ್ತಾ ಇರಬೇಕು. ಇದನ್ನು ಒಳ್ಳೆ ಬಿಸಿಲಿಗೆ ಅಡಿ ಮೇಲೆ ಮಾಡಿ ಒಣಗಿಸಬೇಕು. ಇದು ಹಾಳಾಗದಂತೆ ಬಹುಕಾಲ ಉಳಿಯುತ್ತದೆ. ಇದನ್ನು ಗೊಜ್ಜು, ರಸಾಯನ, ಸಾರು, ಮೆಣಸ್ಕಾಯಿ ಗಳಲ್ಲಿ   ವರ್ಷವಿಡೀ ಬಳಸಬಹುದು.  ಮಾವಿನ ಹಣ್ಣಿನ ರಸಕ್ಕೆ ಸಕ್ಕರೆ ಹಾಕಿ ಬಿಸಿಲಿನಲ್ಲಿ ಒಣಗಿಸಿ ಸ್ಕ್ವ್ಯಾಷ್ ಕೂಡ ಮಾಡಿಡಬಹುದು. ಜ್ಯೂಸ್ ಯಾವಾಗ ಬೇಕಾದರೂ ಮಾಡಿ ಕುಡಿಯಬಹುದು.
ಮಾವಿನಕಾಯಿಗಳನ್ನು ಸಣ್ಣ ಸಣ್ಣ ತುಂಡುಗಳನ್ನು ಮಾಡಿ ಬಿಸಿಲಿನಲ್ಲಿ ಒಣಗಿಸಿಟ್ಟರೆ ಹುಳಿಯ ಬದಲಿಗೆ ಉಪಯೋಗ ವಾಗುತ್ತದೆ.
ಮುರುಗದ ಹುಳಿ( ಪುನರ್ಪುಳಿ)  ಸಿಪ್ಪೆಯನ್ನು ಸಕ್ಕರೆ ಹಾಕಿ  ಒಣಗಿಸಿ ಸ್ಕವಾಷ್ ಮಾಡಿ ಇಟ್ಟುಕೊಳ್ಳ ಬಹುದು. ಸಿಪ್ಪೆಯನ್ನು ಜ್ಯೂಸ್ ಮಾಡಿ ಬಳಸ ಬಹುದು  . ಸಾರು ತಂಬುಳಿ ಮಾಡಲು ಬಳಕೆಯಾಗುತ್ತವೆ. ಬೇಸಿಗೆಯಲ್ಲಿ ಹೇರಳವಾಗಿ ದೊರೆಯುವ ಸೌತೆ ತೊಂಡೆಕಾಯಿಗಳನ್ನು ಒಣಗಿಸಿಟ್ಟು ಸಂಡಿಗೆ, ಉಪ್ಪಿನಕಾಯಿ ಗಳನ್ನು ಮಾಡಲು ಬಳಸಲಾಗುವುದು.
ಹೀಗೆ ಮನೆಬಳಕೆಗೆ ಅಗತ್ಯ ವಾದವುಗಳು ದೊರೆಯವಾಗ ಸಂರಕ್ಷಿಸಿಡುವುದನ್ನು ಕಲಿತರೆ ಆರೋಗ್ಯಕ್ಕೂ ಒಳ್ಳೆಯದು, ಜೇಬಿಗೂ ಒಳ್ಳೆಯದು.
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..
May 18, 2024
12:36 PM
by: ವಿವೇಕಾನಂದ ಎಚ್‌ ಕೆ
ಸಮಾಜಕ್ಕೆ ಸೇವೆ ಮಾಡುವುದು ಎಂದರೆ ಹಲವು ಆಯಾಮಗಳಿವೆ | ಹವಾಮಾನ ಹೇಳುವುದೂ ಒಂದು ಸೇವೆ |
May 17, 2024
11:12 AM
by: ದ ರೂರಲ್ ಮಿರರ್.ಕಾಂ
ಮಲೆನಾಡ ಗಿಡ್ಡ ಗೋತಳಿಗಳನ್ನು ಉಳಿಸಿ ಸಂವರ್ಧಿಸಬೇಕು ಏಕೆ..?
May 15, 2024
2:29 PM
by: ಮುರಲೀಕೃಷ್ಣ ಕೆ ಜಿ
ಶಂಕರರ ಆಕ್ರೋಶಕ್ಕೆ ಹೊರಹೊಮ್ಮಿದ ಭಜಗೋವಿಂದಂ
May 15, 2024
11:34 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror