ಬೆಳಕನು ಕಾಣಲು ಹಂಬಲಿಸಿ
ಕತ್ತಲೆಯ ಜಗದಿಂದ ಹೊರಬಂದೆ
ಬೆನ್ನ ಹಿಂದೆಯೇ ಮತ್ತಾವುದೋ ಕರಿ ಛಾಯೆ
ನನ್ನ ಹಿಂಬಾಲಿಸಲೆಂದೇ ಬಂದಂತಿದೆ
ಎಲ್ಲರೂ ಅಪರಿಚಿತರು ಕಂಡೊಮ್ಮೆ ಬೆರಗಾದೆ
ಅಮ್ಮ , ಅಪ್ಪ ,ಅಜ್ಜ ,ಅಜ್ಜಿ ಎಂದವರು ಪರಿಚಯಿಸಿದರು
ಹೌದು! ಅಪರಿಚಿತರಲ್ಲ ಇವರು ನನ್ನವರು
ಸದಾ ನನ್ನ ಬೆನ್ನತ್ತಿರುವ ಆ ವ್ಯಾಘ್ರ ರೂಪ ಯಾರದು?
ಹೆಜ್ಜೆ ಕಲಿತೆ, ಓಡಲರಿತೆ ಬಿಡಲಿಲ್ಲ ಮಾಯೆ
ಹೋದಲೆಲ್ಲಾ ನನ್ನನ್ನೇ ಕೈ ಬೀಸಿ ಕರೆಯುತಿದೆ
ಭಕ್ತಿಯಿಂದ ಬೇಡಿದೆ, ಕೈಯಲ್ಲಿದ್ದ ಹಣ ಸುರಿದೆ
ಇಲ್ಲ ಅದು ಹಿಂಬಾಲಿಸಿದುದು ನನ್ನನ್ನೇ!
ಏಕೋ ಹಿಂತಿರುಗಿ ಮಾತನಾಡಬೇಕೆಸಿತು
ಇದು ನಿನ್ನ ಮನೆಯಲ್ಲ ಎಂದು ಮತ್ತೆ ಕರೆಯಿತು
ಇಲ್ಲಿರುವವರು ನನ್ನವರು ನಾ ಬರಲೊಲ್ಲೆ ಎಂದೆ
ಮತ್ತದೇ ದನಿ “ಅಲ್ಲಿದೆ ನಿನ್ನ ಮನೆ”
ಮಾಯೆಯ ಕಣ್ತಪ್ಪಿಸಿ ಓಡಿ ಸೋತು ಹೋದೆ
ನಾನೇ ಮನೆಯ ದಾರಿ ಹುಡುಕಿ ಮಾಯೆಯ ಕರೆದೆ…
ಬರಲಿಲ್ಲ ಅವಳು ಬಲು ಮಾಟಗಾತಿ..
ಅತ್ತು ಕರೆದು ದಾರಿ ತೋರೆಂದೆ ಬಗ್ಗಲಿಲ್ಲ ಅವಳು
ಮತ್ತೋಮ್ಮೆ ಅವಳೇ ಬಂದಳು ನನ್ನದು ಮೊಂಡುತನ
ಬರಲಿಲ್ಲವೆಂದರೂ ಬಿಡಲಿಲ್ಲ ಅವಳು
ಕೈ ಹಿಡಿದು ಆ ಮನೆಯ ದಾರಿ ತೋರಿದಳು
ಮತ್ತೆಂದು ಈ ಮನೆಗೆ ದಾರಿ ಸಿಗದಂತೆ ಮಾಯ ಮಾಡಿದಳು..
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel