ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲೆಗೆ ಬಂದರು ಮಕ್ಕಳು…!

June 4, 2019
2:00 PM

ಬೆಳ್ಳಾರೆ: ಬೆಳ್ಳಾರೆಯ ಸರಕಾರಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಸಂಸ್ಥೆ ಇದೀಗ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಬದಲಾವಣೆಗೊಂಡಿದೆ. ಸರಕಾರದ ಆದೇಶದಂತೆ 2019-20ನೇ ಶೈಕ್ಷಣಿಕ ವರ್ಷದಿಂದ ಒಂದೇ ಭೌಗೋಳಿಕ ಸ್ಥಳದಲ್ಲಿ ಎಲ್.ಕೆ.ಜಿ, ಪ್ರಾಥಮಿಕ, ಪ್ರೌಢ, ಹಾಗೂ ಪದವಿ ಪೂರ್ವ ಶಿಕ್ಷಣ ಒಟ್ಟುಗೂಡಿಸಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತಿಸಲಾಗಿದೆ.

Advertisement
Advertisement
Advertisement

ಈ ಶೈಕ್ಷಣಿಕ ವರ್ಷದಿಂದಲೇ ಪೂರ್ವ ಪ್ರಾಥಮಿಕ ಶಿಕ್ಷಣದಡಿಯಲ್ಲಿ ಎಲ್.ಕೆ.ಜಿ ಮತ್ತು 1ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮವು ಆರಂಭಗೊಂಡಿದೆ. ಶಿಕ್ಷಕರನ್ನು ನುರಿತರ ಮೂಲಕ ತರಬೇತಿಗೊಳಿಸಿ ಸಜ್ಜುಗೊಳಿಸಲಾಗಿದೆ.

Advertisement

ಸುತ್ತಮುತ್ತಲಿನ ತಾಲೂಕಿನ ಕೆಪಿಎಸ್ ಶಾಲೆಗಳಿಗೆ ಹೋಲಿಸಿದರೆ ಬೆಳ್ಳಾರೆಯ ಶಾಲೆಯು ಉತ್ತಮ ದರ್ಜೆಯ ಹಲವು ವ್ಯವಸ್ಥೆಗಳು ಇದೆ. ತರಗತಿಗಳಿಗೆ ಗುಣಮಟ್ಟದ ಕಟ್ಟಡಗಳ ವ್ಯವಸ್ಥೆಯಿದೆ. ವಿದ್ಯಾರ್ಥಿಗಳಿಗೆ ಜೀವದಲ್ಲಿ ಉಪಯುಕ್ತವಾಗುವ ವಿಶೇಷ ವೃತ್ತಿ ಕೌಶಲ್ಯ ತರಬೇತಿ, ನೂತನವಾಗಿ ಈ ವರ್ಷದಿಂದ 9ನೇ ತರಗತಿ ವಿದ್ಯಾರ್ತಿಗಳಿಗೆ ತೃತೀಯ ಭಾಷೆಯಾಗಿ ಬಾಲಕರಿಗೆ ಜೆ.ಒ.ಸಿ ಮತ್ತು ಬಾಲಕಿಯರಿಗೆ ಫ್ಯಾಶನ್ ಡಿಸೈನಿಂಗ್‍ನ್ನು ಆರಂಭಿಸಲಾಗುತ್ತಿದೆ. ವಿಶೇಷವೆಂದರೆ
ಈ ಶಾಲೆಯಲ್ಲಿ ಏಕಕಾಲಕ್ಕೆ 4 ಸ್ಮಾರ್ಟ್ ಕ್ಲಾಸ್‍ಗಳನ್ನು ನಡೆಸುವಷ್ಟು ಸೌಲಭ್ಯಗಳಿವೆ. 12ಮಂದಿ ಖಾಯಂ ಹಾಗು 2 ಮಂದಿ ಪ್ರಭಾರದಂತೆ ಒಟ್ಟು 14 ಶಿಕ್ಷಕರನ್ನು ಶಾಲೆ ಹೊಂದಿದೆ. ದೊಡ್ಡ ವಿಸ್ತೀರ್ಣವುಳ್ಳ ಕ್ರೀಡಾಂಗಣ ಶಾಲೆಯ ಆವರಣದೊಳಗಿದೆ.

ಹಲವು ವ್ಯವಸ್ಥೆಗಳು  ಬಾಕಿಯಿದೆ:
ಇನ್ನು ಸಣ್ಣಪುಟ್ಟ ಸುಧಾರಣೆಗಳು, ವ್ಯವಸ್ಥೆಗಳು ಬೆಳ್ಳಾರೆ ಕೆಪಿಸ್ ಶಾಲೆಗೆ ಆಗಬೇಕಿದೆ. 50000 ಸಾವಿರ ರೂಪಾಯಿಗಳ ಬಜೆಟಿನಲ್ಲಿ ಪೈಂಟಿಂಗ್, ಹಲವು ದುರಸ್ಥಿ ಕಾರ್ಯಗಳು ಸೇರಿದಂತೆ ಅನೇಕ ಸುಧಾರಣೆ ಕೆಲಸಗಳು ಇನ್ನೂ ನಡೆಯಬೇಕಿದೆ. ಕಳೆದ ವರ್ಷದ ಅನುದಾನದಲ್ಲಿ 5ಲಕ್ಷ ನಿರ್ವಹಣೆ ಹಾಗು 12 ಲಕ್ಷ ಇತರಕ್ಕೆಂದು ಒಟ್ಟು 17 ಲಕ್ಷ ಕಳೆದ ಬಾರಿ ಬೆಳ್ಳಾರೆ ಶಾಲೆಗೆ ದೊರೆತಿತ್ತು. ಆದರೆ ಈ ಬಾರಿ ನಿರ್ವಹಣಾ ಅನುದಾನ 5 ಲಕ್ಷ ಮಾತ್ರ ದೊರೆತಿದೆ.
ಶಾಲೆಯೂ ಕೂಡ ಇದೀಗ ದಾನಿಗಳ ಹುಡುಕಾಟದಲ್ಲಿದ್ದು, ಕೊಡುಗೆ ರೂಪದಲ್ಲಿ ಶಾಲೆಗೆ ಅಗತ್ಯವಿರುವ ಮರದ ಪೀಠೋಪಕರಣದ ನಿರೀಕ್ಷೆಯಲ್ಲಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್‍ಗೆ ರಾತ್ರಿ ಪಾಳಿನ ಕಾವಲಿಗೆ ಹೋಮ್‍ಗಾರ್ಡ್ ಅಗತ್ಯವಿದ್ದು, ಶಾಲೆಯ ಎಸ್‍ಡಿಎಂಸಿ ವತಿಯಿಂದ ಈಗಾಗಲೆ ಪೊಲೀಸ್ ಇಲಾಖೆಗೆ ಮನವಿ ನೀಡಿಯಾಗಿದೆ.

Advertisement

ಪ್ರಸಕ್ತ ವರ್ಷದ ದಾಖಲಾತಿ ಪ್ರಮಾಣ ಇಂತಿದೆ:
ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಈ ವರ್ಷದ ಎಲ್.ಕೆ.ಜಿಯಲ್ಲಿ 40 ಮಕ್ಕಳು, 1ನೇ ತರಗತಿಯ ಆಂಗ್ಲ ಮಾಧ್ಯಮಕ್ಕೆ 61, ಕನ್ನಡ ಮಾಧ್ಯಮಕ್ಕೆ 3ಮಕ್ಕಳು, 2ನೇ ತರಗತಿಯ ಆಂಗ್ಲಮಾಧ್ಯಮಕ್ಕೆ 47, 3ನೇ ತರಗತಿಗೆ 42ಮಕ್ಕಳು, 4ನೇ ತರಗತಿಗೆ 43ಮಕ್ಕಳು, 5ನೇ ತರಗತಿಯ ಕನ್ನಡ ಮಾಧ್ಯಮಕ್ಕೆ 49ಮಕ್ಕಳು, 6ನೇ ತರಗತಿಯ ಆಂಗ್ಲಮಾಧ್ಯಮಕ್ಕೆ 21 ಮತ್ತು ಕನ್ನಡ ಮಾಧ್ಯಮಕ್ಕೆ 61ಮಕ್ಕಳು ಮಕ್ಕಳು ಸೇರಿದಂತೆ ಒಟ್ಟು 362 ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ಇನ್ನಷ್ಟೂ ಮಕ್ಕಳು ದಾಖಲಾತಿ ಪಡೆದುಕೊಳ್ಳಲು ಬಾಕಿಯಿದೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕೆಲಸ ಯಾವುದಾದರೇನು, ಛಲವೊಂದಿದ್ದರೆ…. | ಜೀವನೋಪಾಯಕ್ಕೆ ಚಾಲಕ ವೃತ್ತಿ ಆಯ್ಕೆ ಮಾಡಿದ ಮಹಿಳೆ | ಕಸ ವಿಲೇವಾರಿ ವಾಹನದಲ್ಲಿ ಮಹಿಳಾ ಚಾಲಕಿ |
September 20, 2023
8:42 PM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಜೊತೆ ಉಪಬೆಳೆ ಬೇಕೇ…? | ಕ್ಯಾಂಪ್ಕೋ ನೀಡಿದ ಸಂದೇಶ ಏನು…? | ಔಷಧಿ ಬೆಳೆ, ತಾಳೆ ಬೆಳೆಯತ್ತ ಕ್ಯಾಂಪ್ಕೋ ಚಿತ್ತ |
September 11, 2023
11:48 AM
by: ಮಹೇಶ್ ಪುಚ್ಚಪ್ಪಾಡಿ
#Agriculture | ಮಲೆನಾಡಲ್ಲಿ ಅಗರ್‌ವುಡ್‌ ಕಟಾವು-ಸಂಸ್ಕರಣೆಗೆ ಆರಂಭ | ಅಡಿಕೆಯ ಉಪಬೆಳೆಯಾಗಿ ಆದಾಯ ತರಬಹುದೇ…?
September 4, 2023
9:04 PM
by: ಮಹೇಶ್ ಪುಚ್ಚಪ್ಪಾಡಿ
#CoconutShell | ತೆಂಗಿನ ಗೆರಟೆಯಿಂದ ರಕ್ಷಾಬಂಧನ | ತೆಂಗಿನ ಗೆರಟೆಯ ಮೌಲ್ಯವರ್ಧನೆ | ಪುತ್ತೂರಿನ ಕೋಡಿಂಬಾಡಿಯಲ್ಲಿ ಮಹಿಳೆಯರ ಪ್ರಯತ್ನ |
August 25, 2023
11:49 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror