ಬೆಳ್ಳಾರೆ: ಹಾಲಿ ಆರೋಗ್ಯ ಸಚಿವ ಶ್ರೀರಾಮುಲು ಕಳೆದ ಬಿಜೆಪಿ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿಯೇ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲು ಅನುಷ್ಠಾನಗೊಂಡಿತ್ತು. ಆದರೆ ಇಂದಿಗೂ ಅದು ಜಾರಿಗೊಂಡಿಲ್ಲ. ಶುಕ್ರವಾರ ಸನ್ಮಾನ ಸ್ವೀಕರಿಸಲು ಹುಟ್ಟೂರಿಗೆ ಆಗಮಿಸಿದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್‍ಗೆ ಬೆಳ್ಳಾರೆ ಮುಖಂಡರಿಂದ ಅನುಷ್ಠಾನಗೊಳಿಸಲು ಮತ್ತೊಮ್ಮೆ ಮನವಿಯನ್ನು ನೀಡಲಾಯಿತು.
ಬೆಳ್ಳಾರೆ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಗಂಗಾಧರ್ ರೈ ಪುಡ್ಕಜೆ, ಜಿಲ್ಲಾ ಪಂಚಾಯತ್ ಸದಸ್ಯ ಎಸ್‍ಎನ್ ಮನ್ಮಥ, ಬೆಳ್ಳಾರೆ ವರ್ತಕರ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು, ನೆಟ್ಟಾರು ಹಾಲು ಉತ್ಪಾಕರ ಸಂಘದ ಅಧ್ಯಕ್ಷ ವೈಪಳ ರಾಮಣ್ಣ ರೈ, ಮುಕ್ಕೂರು ಹಾಲು ಉತ್ಪಾಕರ ಸಂಘದ ಅಧ್ಯಕ್ಷ ದಯಾಕರ ಆಳ್ವ, ಬಿಜೆಪಿ ಮುಖಂಡ ಪ್ರೇಮಚಂದ್ರ ಬೆಳ್ಳಾರೆ, ಶಕ್ತಿ ಕೇಂದ್ರ ಅಧ್ಯಕ್ಷ ಶ್ರೀನಾಥ್ ಬಾಳಿಲ, ಬಿಜೆಪಿ ಯುವ ಮೋರ್ಚ ತಾಲೂಕು ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಮಹಿಳಾ ಮೋರ್ಚೆ ಸದಸ್ಯೆ ಗೀತಾ ಪ್ರೇಮ್, ದ.ಕ ಜಿಲ್ಲಾ ಜೇನು ವ್ಯವಸಾಯ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಐವರ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ದೇವರಕಾನ, ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಉಮೇಶ್ ಕೂರೋಡಿ, ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸುರೇಶ್ ಪನ್ನೆಗುತ್ತು, ಬಿಜೆಪಿ ಮುಖಂಡರಾದ ಪ್ರೀತಮ್ ರೈ ಬೆಳ್ಳಾರೆ, ಸಾಯಿ ಗಿರಿಧರ್ ರೈ ಪನ್ನೆ, ಮಡ್ತಿಲ ಶೇಖರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾದ ಯತೀಶ್ ನಾಗಮಜಲು, ಸಂತೋಷ್ ಕೊಡಿಯಾಲ ಉಪಸ್ಥಿತರಿದ್ದರು.