ಆಲಂಕಾರು : ಇಲ್ಲೊಂದು ಕಾಮಗಾರಿ ನಡೆದಿದೆ… ಆದರೆ ಕಾಮಗಾರಿ ಹೆಸರು , ಊರಿನ ಹೆಸರು ಮಾತ್ರಾ ಬೇರೆ…!
ಪುತ್ತೂರು ತಾಲ್ಲೂಕಿನ ಕೊಯಿಲ ಗ್ರಾಮದ ಕುದ್ಲೂರು ಅಂಗನವಾಡಿ ಕೇಂದ್ರದ ಬಳಿ ಕೆಲ ಸಮಯದ ಹಿಂದೆ ಕಾಂಕ್ರೀಟ್ ರಸ್ತೆ ಯಾಗಿತ್ತು. ಈ ಕಾಮಗಾರಿಗೆ 2 ವರ್ಷ ಕಳೆಯಿತು. ಆದರೆ ಬೋರ್ಡ್ ಹಾಕಿದವರು ಮಾತ್ರಾ ಈ ಕಾಮಗಾರಿ ಪ್ರದೇಶ ಗಮನಿಸಲಿಲ್ಲ. ಊರಿನವರು ಯಾರು ಗಮನಿಸಲಿಲ್ಲ. ಇದರಲ್ಲಿ ಕಾಮಗಾರಿ ಫಲಕ ಮಾತ್ರಾ ಬದಲಾಗಿದೆ.
ಈ ಗ್ರಾಮದ ಹೆಸರು ಕೊಯಿಲ , ಆದರೆ ಫಲಕದಲ್ಲಿ ಕೋಡಿಂಬಳ ಹೆಸರು ಇದೆ…!. ಊರಿನ ಹೆಸರು ಕುದ್ಲೂರು. ಆದರೆ ಈ ಫಲಕದಲ್ಲಿ ಮಾಲೇಶ್ವರ ಅಂತ ಇದೆ…!. ಇದು ಹೇಗಾಯಿತು ಎನ್ನುವುದು ಪ್ರಶ್ನೆಯಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಇದನ್ನು ಗಮನಿಸಲಿಲ್ಲವೇ ? ಶಾಸಕ ಎಸ್.ಅಂಗಾರ ಗಮನಕ್ಕೂ ಇದು ಬರಲಿಲ್ಲವೇ ? ಅಧಿಕಾರಿಗಳು ನೋಡಲಿಲ್ಲವೇ ಎಂಬಿತ್ಯಾದಿ ಪ್ರಶ್ನೆಗೆ ಉತ್ತರವಿಲ್ಲ. ಕಾಮಗಾರಿಗೆ ಫಲಕ ಏಕೆ ಅವಶ್ಯ ಎಂಬ ಪ್ರಶ್ನೆಗೆ, ಕಾಮಗಾರಿ ನಡೆಸಿದ ಬಗ್ಗೆ ಊರ ಜನರಿಗೆ ಸರಿಯಾದ ಮಾಹಿತಿ ಬೇಕು ಎಂಬುದಷ್ಟೇ ಉದ್ದೇಶ.
ಫಲಕ ಬದಲಾಗಿ ಅನೇಕ ಸಮಯವಾದರೂ ಯಾರೂ ಗಮನಿಸದೇ ಇರುವುದು ಅಚ್ಚರಿ ಮೂಡಿಸಿದೆ. ಅಧಿಕಾರಿಗಳು , ಜನಪ್ರತಿನಿಧಿಗಳು ಸರಿಯಾದ ಫಲಕ ಅಳವಡಿಸಬೇಕು ಎಂದು ಸ್ಥಳೀಯರಾದ ಜೀಯಾ ಝೀಯಾ ಆತೂರು ಸುಳ್ಯನ್ಯೂಸ್.ಕಾಂ ಗೆ ಹೇಳುತ್ತಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಬೋರ್ಡ್ ಬೇರೆ……. ಕಾಮಗಾರಿ ಬೇರೆ….!"