ನವದೆಹಲಿ: ದೇಹದ ನೋವು ಮತ್ತು ಜ್ವರದ ಚಿಕಿತ್ಸೆಗೆ ಸಂಬಂಧಿಸಿ ಸಾಮಾನ್ಯವಾಗಿ ಬಳಸುವ ಪ್ಯಾರಸಿಟಮಾಲ್ ನ ಸುಮಾರು 1000 ಟನ್ ಕಚ್ಚಾ ವಸ್ತುಗಳನ್ನು ಭಾರತದಿಂದ ಯುರೋಪ್ ಬಯಸಿದೆ ಎಂದು ಫಾರ್ಮಾಸ್ಯುಟಿಕಲ್ ರಫ್ತು ಮಂಡಳಿ (ಫಾರ್ಮೆಕ್ಸಿಲ್) ಅಧ್ಯಕ್ಷ ದಿನೇಶ್ ದುವಾ ಹೇಳಿದ್ದಾರೆ.
Advertisement
ಇದರ ಅನುಮೋದನೆ ಪ್ರಕ್ರಿಯೆ ಬಗ್ಗೆ ಚರ್ಚಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ರಾಷ್ಟ್ರೀಯ ಔಷಧೀಯ ಪ್ರಾಧಿಕಾರವು ಅನುಮೋದನೆ ನೀಡಬೇಕಿದೆ ಎಂದು ಅವರು ಹೇಳಿದ್ದಾರೆ.
Advertisement
ಯುರೋಪ್ಗೆ ತಿಂಗಳಿಗೆ ಸರಾಸರಿ 1,000 ಟನ್ಗಳಷ್ಟು ಪ್ಯಾರಸಿಟಮಾಲ್ ನ ಕಚ್ಚಾ ವಸ್ತು ಬೇಕಾಗುತ್ತದೆ. ಭಾರತವು ಈ ಹಿಂದೆ ಒಂದು ತಿಂಗಳಲ್ಲಿ ಸುಮಾರು 1,400 ಟನ್ಗಳನ್ನು ರಫ್ತು ಮಾಡಿದೆ. ದೇಶದಲ್ಲಿ ಈ ಕಚ್ಚಾ ವಸ್ತುಗಳ ಲಭ್ಯತೆಯಿದೆ, ಏಕೆಂದರೆ ಭಾರತದಲ್ಲಿ ತಿಂಗಳಿಗೆ ಸುಮಾರು 2,000 ಟನ್ ಮಾತ್ರ ಬಳಸುತ್ತೇವೆ ಮತ್ತು ನಮ್ಮ ಉತ್ಪಾದನಾ ಸಾಮರ್ಥ್ಯವು ತಿಂಗಳಿಗೆ ಸುಮಾರು 6,200 ಟನ್ ಆಗಿದೆ ಎಂದು ಅವರು ಹೇಳಿದರು.
(ಪಿಟಿಐ)
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement