ಭಾರತವು ವಿಶ್ವಗುರುವಾಗಲು 4ಜಿ ಬಲಿಷ್ಠವಾಗಬೇಕು

February 9, 2020
4:00 PM
ಮಂಗಳೂರು: ಭಾರತವು ಅನಾದಿ ಕಾಲದಲ್ಲಿ ವಿಶ್ವಗುರುವಾಗಿತ್ತು‌.ಆಗ ಗೋವು, ಗ್ರಾಮ, ಗುರುಕುಲ,ಗಂಗೆ ಎಂಬ 4ಜಿ ಬಲಿಷ್ಠವಾಗಿತ್ತು. ಪ್ರತಿಯೊಂದು ಗ್ರಾಮವು ಸ್ವಾವಲಂಬಿಯಾಗಿತ್ತು ಮತ್ತು ಜನರು ಸುಖೀಗಳಾಗಿದ್ದರು‌.ಗಂಗೆ ಶುಧ್ದವಾಗಿತ್ತು, ಗುರುಕುಲ ವ್ಯವಸ್ಥೆಯಿಂದ ಉಚ್ಛ ಮಟ್ಟದ ಶಿಕ್ಷಣ ನೀಡಲಾಗುತ್ತಿತ್ತು, ಅಸಂಖ್ಯಾತ ಗೋವುಗಳಿದ್ದು ಸಂಪತ್ತು ಸಮೃದ್ಧವಾಗಿತ್ತು‌, ಆದರೆ ಇಂದು ಗೋ ಹತ್ಯೆಯಿಂದಾಗಿ ಗೋ ಸಂತತಿ ನಾಶವಾಗುತ್ತಿದೆ. ಮತ್ತೊಮ್ಮೆ ಭಾರತ ವಿಶ್ವಗುರುವಾಗಬೇಕಾದರೆ ಈ 4ಜಿ ಅಂಶಗಳು ಬಲಿಷ್ಠವಾಗಬೇಕು” ಎಂದು ನ್ಯಾಯವಾದಿ ಚಂದ್ರಶೇಖರ್ ರಾವ್ ಹೇಳಿದರು.
ಅವರು ಮಂಗಳೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಶ್ರಯದಲ್ಲಿ  ನಡೆಯುತ್ತಿರುವ  ಹಿಂದೂ ರಾಷ್ಟ್ರಅಧಿವೇಶನದ ಮೊದಲ ದಿನದ ಗೋಷ್ಟಿಯಲ್ಲಿ ಮಾತನಾಡಿದರು.
 ಶ್ರೀ ರಾಮಚಂದ್ರಾಪುರ ಮಠದ ವಿದ್ಯಾಲಕ್ಮೀ ಮಾತನಾಡಿ ಸನಾತನ ಹಿಂದೂ ಧರ್ಮವೆಂದರೆ ಅವಿನಾಶಿ ಮತ್ತು ಅಜರಾಮರವೇ ಆಗಿದೆ. ಹಿಂದೂ ಧರ್ಮವು ಜೀವನದ ಅಂಗವಾಗಿದೆ.ಹಿಂದೂ ಧರ್ಮವು ಎಲ್ಲಾ ಜೀವಿಗಳಲ್ಲಿಯೂ ದೇವರನ್ನು ಕಾಣುವ ಅತ್ಯಂತ ಶ್ರೇಷ್ಠ ಧರ್ಮವಾಗಿದೆ‌.ಇಂದು ಇಂದಿನ ಪೀಳಿಗೆಗೆ ಧರ್ಮಶಿಕ್ಷಣವನ್ನು ನೀಡಬೇಕಾಗಿದೆ ಉಡುಪುಗಳಾಗಿರಲಿ, ಉತ್ಸವಗಳಾಗಿರಲಿ ಪಾಶ್ಚಾತ್ಯರಂತೆ ಅಲ್ಲ ಹಿಂದೂ ಧರ್ಮದಂತೆ ಆಚರಿಸಿ ಧರ್ಮದ ರಕ್ಷಣೆಯನ್ನು ಮಾಡಬೇಕಾಗಿದೆ ಎಂದರು.
ಬಂಟರ ಸಂಘದ ಆಶಾಜ್ಯೋತಿ ರೈ ಮಾತನಾಡಿ  ಪ್ರಸ್ತುತ ಹಿಂದೂ ಧರ್ಮವು ಜಾತಿ ಎಂದು ವಿಭಜನೆ ಹೊಂದಿದೆ.ಆದರೆ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕಾದರೆ ಜಾತಿ ಎಂಬ ಬಂಧನವನ್ನು ತೆಗೆದು ಕೇವಲ ‘ಹಿಂದೂ’ ಎಂದು ಒಂದಾಗಬೇಕಾಗಿದೆ..ಹಿಂದೂ ಐಕ್ಯತೆ ಹೊಂದಬೇಕಾಗಿದೆ ಎಂದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮನೆಯಲ್ಲಿ ಯಾವ ಬಣ್ಣದ ಗೋಡೆಗಳು ಗ್ರಹಗಳ ಶಕ್ತಿಯನ್ನು ಸಂತೋಲನಗೊಳಿಸಿ ಯಶಸ್ಸನ್ನು ತರುತ್ತವೆ?
July 19, 2025
7:15 AM
by: The Rural Mirror ಸುದ್ದಿಜಾಲ
ನಿರಂತರತೆಗೆ ಇರುವ ಶಕ್ತಿ ಅಪಾರ: ರಾಘವೇಶ್ವರ ಶ್ರೀ
July 18, 2025
10:31 PM
by: The Rural Mirror ಸುದ್ದಿಜಾಲ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಸುಚನ್ಯ
July 18, 2025
10:15 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಪೃಥ್ವಿ ಜಿ ಎಂ
July 18, 2025
10:06 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group