ಭಾರತೀಯ ಕೋಸ್ಟ್‌ಗಾರ್ಡ್‌ ನಾವಿಕ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ: ಡೌನ್‌ಲೋಡ್‌ ಮಾಡಲು ಇಲ್ಲಿದೆ ಮಾಹಿತಿ

Advertisement

ಹೊಸದಿಲ್ಲಿ: ಭಾರತೀಯ ಕೋಸ್ಟ್‌ ಗಾರ್ಡ್‌ನ ಹುದ್ದೆಯ ಪರೀಕ್ಷೆ ಏಪ್ರಿಲ್ 12ರಿಂದ ಮೇ 10ರವರೆಗೆ ನಡೆಯಲಿದ್ದು, ವಾರಾಣಸಿ, ನೋಯ್ಡಾ, ಕೋಲ್ಕತ, ಭೋಪಾಲ್‌ ಹಾಗೂ ಜೋಧಪುರ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರಿಗೆ ಪ್ರವೇಶ ಪತ್ರವನ್ನು ಕೋಸ್ಟ್‌ಗಾರ್ಡ್ ಬಿಡುಗಡೆ ಮಾಡಿದೆ.

Advertisement

ನಿರ್ದಿಷ್ಟ ಪರೀಕ್ಷಾ ಕೇಂದ್ರದಲ್ಲಿ ಹೆಚ್ಚು ಶೇಕಡಾವಾರು ಅಂಕಗಳನ್ನು ಪಡೆದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಪಾಸಾದವರು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಗಾಗಬೇಕಿದೆ. ಈ ಪರೀಜ್ಷಾ ವಿಧಾನಕ್ಕೆ ಎರಡು ದಿನಗಳನ್ನು ತೆಗೆದುಕೊಳ್ಳಬಹುದು

Advertisement
Advertisement

ದೈಹಿಕ ಸಾಮರ್ಥ್ಯ ಪರೀಕ್ಷೆ ( ಫಿಸಿಕಲ್‌ ಫಿಟ್ನೆಸ್‌ ಟೆಸ್ಟ್‌ ) (PFT)
ಲಿಖಿತ ಪರೀಕ್ಷೆಯಲ್ಲಿ ಪಾಸಾದ ಎಲ್ಲ ಅಭ್ಯರ್ಥಿಗಳು ಸಹ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಗಾಗಬೇಕಿದೆ. ಇದಕ್ಕೆ ಅಭ್ಯರ್ಥಿಗಳು ಶೂ, ಟಿ – ಶರ್ಟ್, ಪ್ಯಾಂಟ್‌ ಮುಂತಾದ ಕ್ರೀಡಾ ಉಡುಪಿನಲ್ಲಿರಬೇಕು ಎಂದು ಭಾರತೀಯ ಕೋಸ್ಟ್‌ ಗಾರ್ಡ್‌ ಸಲಹೆ ನೀಡುತ್ತದೆ.

ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಏನೇನಿರುತ್ತೆ?

(i) 7 ನಿಮಿಷಗಳಲ್ಲಿ 1.6 ಕಿ.ಮೀ ಓಡಬೇಕಿದೆ
(ii) 20 ಸ್ಕ್ವಾಟ್‌ ಅಪ್ಸ್ ( ಉಠಕ್ ಬೈಠಕ್‌ )
(iii)10 ಫುಷಪ್‌ಗಳನ್ನು ಮಾಡಬೇಕಿದೆ

ಇನ್ನು, ಜನವರಿ 21 ರಿಂದ 31ರವರೆಗೆ ಆನ್‌ಲೈನ್‌ನಲ್ಲಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರು ತಮ್ಮ ಭಾರತೀಯ ಕೋಸ್ಟ್‌ ಗಾರ್ಡ್ ಪ್ರವೇಶ ಪರೀಕ್ಷೆಯನ್ನು ಡೌನ್ಲೋಡ್‌ ಮಾಡಬಹುದು. ಭಾರತೀಯ ಕೋಸ್ಟ್‌ ಗಾರ್ಡ್‌ನ ಅಧಿಕೃತ ವೆಬ್‌ಸೈಟ್‌ ನಲ್ಲಿ ಪ್ರವೇಶ ಪತ್ರವನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.

Advertisement

ಭಾರತೀಯ ಕೋಸ್ಟ್‌ ಗಾರ್ಡ್ ಪ್ರವೇಶ ಪತ್ರ 2019: ಡೌನ್‌ಲೋಡ್‌ ಮಾಡುವ ವಿಧಾನ

1)ಭಾರತೀಯ ಕೋಸ್ಟ್‌ ಗಾರ್ಡ್ ವೆಬ್‌ಸೈಟ್ -ಅನ್ನು ಲಾಗ್‌ ಆನ್‌ ಮಾಡಿ
2) ಹೋಮ್‌ಪೇಜ್‌ನಲ್ಲಿ ಎಡ ಭಾಗದ ಟಾಪ್‌ನಲ್ಲಿ ಇ – ಪ್ರವೇಶ ಪತ್ರವನ್ನು ಪ್ರಿಂಟ್‌ ಮಾಡಿಕೊಳ್ಳುವ ಲಿಂಕ್ ಅನ್ನು ನೀಡಲಾಗಿದೆ.
3)ಆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ ನಿಮ್ಮ ಸ್ಕ್ರೀನ್‌ ಮೇಲೆ ಹೊಸ ಪುಟ ತೆರೆದುಕೊಳ್ಳುತ್ತದೆ
4)ನಿಮ್ಮ ರಿಜಿಸ್ಟರ್ಡ್‌ ಇ – ಮೇಲ್‌ ಐಡಿ ಅಥವಾ ಅಪ್ಲಿಕೇಷನ್‌ ನಂಬರ್‌ ಅನ್ನು ಹಾಕಿ ಮಾಹಿತಿಗಾಗಿ ಕ್ಲಿಕ್‌ ಮಾಡಿ
5)ಸ್ಕ್ರೀನ್‌ ಮೇಲೆ ನಿಮ್ಮ ಪ್ರವೇಶ ಪತ್ರ ದೊರೆಯಲಿದೆ
6) ಬಳಿಕ ಪ್ರವೇಶ ಪತ್ರ ಡೌನ್ಲೋಡ್‌ ಮಾಡಿಕೊಂಡ ಬಳಿಕ ಅದರ ಪ್ರಿಂಟ್‌ ಔಟ್‌ ತೆಗೆದುಕೊಳ್ಳಬಹುದು

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಭಾರತೀಯ ಕೋಸ್ಟ್‌ಗಾರ್ಡ್‌ ನಾವಿಕ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ: ಡೌನ್‌ಲೋಡ್‌ ಮಾಡಲು ಇಲ್ಲಿದೆ ಮಾಹಿತಿ"

Leave a comment

Your email address will not be published.


*