ಭಾರತೀಯ ಸಂಸ್ಕೃತಿಗೆ ನೃತ್ಯರೂಪಕದ ಕೊಡುಗೆ ಅಪಾರ : ಸುಬ್ರಾಯ ಚೊಕ್ಕಾಡಿ

Advertisement

ಬೆಳ್ಳಾರೆ: ರೂಪಕವು ಒಂದು ದೃಶ್ಯಕಾವ್ಯ. ಈ ಕಾವ್ಯದ ಮೂಲಕ ಭಾರತೀಯ ಪರಂಪರೆಯ ಸತ್ವವನ್ನು ಪ್ರಸ್ತುತಪಡಿಸಲಾಗುತ್ತಿದೆ.  ಭಾರತೀಯ ಸಂಸ್ಕೃತಿಗೆ ನೃತ್ಯರೂಪಕದ ಕೊಡುಗೆ ಅಪಾರ ಎಂದು ಕವಿ ಸುಬ್ರಾಯ ಚೊಕ್ಕಾಡಿ ಹೇಳಿದರು.

Advertisement

ಅವರು ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆದ ವೈಷ್ಣವಿ ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಅಶ್ವಿನಿ ಕೋಡಿಬೈಲು ಅವರಿಂದ ರಚಿತವಾದ “ಶಬರಿಮಲೆ ಸ್ವಾಮಿ ಅಯ್ಯಪ್ಪ” ನೃತ್ಯರೂಪಕ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಯಾವತ್ತೂ
ಬರವಣಿಗೆ ಸತ್ಯವನ್ನು ಶೋಧಿಸುವ ದಾರಿಯಾಗಿದೆ. ಸಾಹಿತ್ಯವು ರಂಗದ ಮೇಲೆ ಪ್ರದರ್ಶನಗೊಂಡಾಗ ಮಾತ್ರ ಜನಮನ ಗೆದ್ದು ಸಾರ್ಥಕತೆ ಪಡೆದುಕೊಳ್ಳುತ್ತದೆ. ಹೀಗಾಗಿ ನೃತ್ಯರೂಪಕಗಳು ಜನರು ಕಾಣುವಂತಾಗಬೇಕು ಎಂದರು.

Advertisement
Advertisement

ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ಕೃತಿ ಪರಿಚಯಿಸಿದರು. ಕಾರ್ಯಕ್ರಮ ಉದ್ಘಾಟಿಸುವುದರೊಂದಿಗೆ ಅಧ್ಯಕ್ಷತೆಯನ್ನು ಇನ್ಸ್ಟಿಟ್ಯೂಟ್ ಆಫ್ ಆಟ್ರ್ಸ್ ಆಂಡ್ ಕಲ್ಚರ್ ಸಂಸ್ಥೆಯ ನೃತ್ಯಗುರು ನಯನ ವಿ.ರೈ ವಹಿಸಿದ್ದರು. ವೇದಿಕೆಯಲ್ಲಿ ಕವಯತ್ರಿ ಅಶ್ವಿನಿ ಕೋಡಿಬೈಲು ಉಪಸ್ಥಿತರಿದ್ದರು.

ವೈಷ್ಣವಿ ನಾಟ್ಯಾಲಯ ನಿರ್ದೇಶಕಿ ಯೋಗೀಶ್ವರಿ ಜಯಪ್ರಕಾಶ್ ಸ್ವಾಗತಸಿ ಪ್ರಸ್ತಾವನೆಗೈದರು. ಸ್ವಾತಿ ಕುರುಂಬುಡೆಲು ವಂದಿಸಿದರು. ಪ್ರದೀಪ್‍ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಸಿದರು.

Advertisement

ಸಭಾಕಾರ್ಯಕ್ರಮದ ನಂತರ ವಿವಿಧ ಶೈಲಿಯ ಭರತನಾಟ್ಯ ನೃತ್ಯ ಪ್ರರ್ಶನಗೊಂಡಿತು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಭಾರತೀಯ ಸಂಸ್ಕೃತಿಗೆ ನೃತ್ಯರೂಪಕದ ಕೊಡುಗೆ ಅಪಾರ : ಸುಬ್ರಾಯ ಚೊಕ್ಕಾಡಿ"

Leave a comment

Your email address will not be published.


*