Advertisement
ಅಮರಪಡ್ನೂರು: ಚೊಕ್ಕಾಡಿ ಚಾರಿಟೇಬಲ್ ಟ್ರಸ್ಟ್ ಮತ್ತು ಮಂಗಳೂರು ಸಮರ್ಪಣಾ ಧ್ಯಾನ ಸೆಂಟರ್‍ನ ಸುಳ್ಯ ಶಾಖೆಯ ಸಹಯೋಗದಲ್ಲಿ ಆಯೋಜಿಸಲಾದ ಒಂದು ದಿನದ ಧ್ಯಾನ ತರಬೇತಿ ಶಿಬಿರ ಅಮರಪಡ್ನೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಶಿಬಿರವನ್ನು ನಾರಾಯಣ ಭಟ್ ಪೈಲೂರು ದೀಪ ಬೆಳಗಿಸಿ, ಮನುಷ್ಯನಲ್ಲಿರುವ ಋಣಾತ್ಮಕ ಅಂಶವನ್ನು ಕಳೆಯಲು ಧ್ಯಾನವು ಅತೀ ಉತ್ತಮ. ಹಸಿ ಮಣ್ಣಿನ ರೂಪದಂತಿರುವ ಪುಟಾಣಿಗಳಲ್ಲಿ ಅಡಗಿರುವ ಪ್ರತಿಭೆ ಹಾಗೂ ಸೃಜನಶೀಲ ಚಟುವಟಿಕೆಗಳು ಬೆಳಕಿಗೆ ಬರುವಲ್ಲಿ ಧ್ಯಾನ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಆನೆಕಾರ ಗಣಪಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಶಿವಕುಮಾರ್ ಮತ್ತು ಅಧ್ಯಾಪಕ ವೃಂದದವರು ಪಾಲ್ಗೊಂಡಿದ್ದರು. ಅರ್ಚನಾ ಪ್ರಾರ್ಥಿಸಿದರು. ಶಿವಕುಮಾರ್ ಸ್ವಾಗತಿಸಿ, ವಂದಿಸಿದರು. ಪಾರ್ವತಿ ನೇಣಾರು ಕಾರ್ಯಕ್ರಮ ನಿರೂಪಿಸಿದರು.
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement
Be the first to comment on "ಅಮರಪಡ್ನೂರು: ಧ್ಯಾನ ತರಬೇತಿ ಶಿಬಿರ"