ಮಂಗನ ಓಡಿಸುವ ಇನ್ನೊಂದು ಸುಲಭ ಪ್ರಯತ್ನ…..

November 8, 2019
10:29 AM

ಸುಳ್ಯ: ಮಂಗಗಳ ಕಾಟ ವಿಪರೀತವಾಗಿ ಕೃಷಿಕರು ಕಂಗಾಲಾಗಿದ್ದಾರೆ. ಸರಕಾರವು ಮಂಗನ ಪಾರ್ಕ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದರೆ ಗ್ರಾಮೀಣ ಭಾಗದ ಕೃಷಿಕರಿಗೆ ಸದ್ಯ ಮಂಗಗಳ ಕಾಟದಿಂದ ರಿಲೀಫ್ ಬೇಕಿದೆ. ಹೀಗಾಗಿ ಇನ್ನಿಲ್ಲದ ಪ್ರಯತ್ನ ನಡೆಯುತ್ತಲೇ ಇದೆ. ಇದೀಗ ಕಾಸರಗೋಡು ಜಿಲ್ಲೆಯ ಕಿನ್ನಿಂಗಾರಿನ ರಾಜಗೋಪಾಲ ಕೈಪಂಗಳ ಅವರು ಹೊಸದೊಂದು ಪ್ರಯತ್ನ ಮಾಡಿದ್ದಾರೆ. ಈ ಸುಲಭ ಉಪಕರಣದ ಮೂಲಕ ಈಗಲೂ ಕೃಷಿ ಭೂಮಿಯಲ್ಲಿ ಈ ಬಗ್ಗೆ ಪರೀಕ್ಷೆ ಮಾಡುತ್ತಿದ್ದಾರೆ. ಇತರ ಕೃಷಿಕರೂ ಈ ಸುಲಭ ವಿಧಾನದಲ್ಲಿ ಪ್ರಯತ್ನ ಮಾಡಬಹುದಾಗಿದೆ. ಇದರ ವಿಡಿಯೋ ಇಲ್ಲಿದೆ:

 

ಈ ಸುಲಭ ಉಪಕರಣದಲ್ಲಿ ಕಾರು ಅಥವಾ ಬೈಕ್ ಟ್ಯೂಬ್ ಬಳಕೆ ಮಾಡಿಕೊಂಡು ಅದಕ್ಕೆ ಗಾಳಿ ತುಂಬಿ ಪ್ಯಾನ್ಸಿ ಅಂಗಡಿಯಲ್ಲಿ  ದೊರೆಯುವ ಹಾರ್ನ್ ಮಾದರಿಯ ಆಟಿಕೆಗೆ ಪೈಪ್ ಮೂಲಕ ಗಾಳಿ ಹೋಗುವಂತೆ ಮಾಡಿ ಮಂಗಗಳ ಹಿಂಡು ಇರುವ ಕಡೆ ಈ ಸದ್ದು ಕೇಳಿಸುವುದು ಇಲ್ಲಿನ ಉಪಾಯ. ಎಲ್ಲಾ ಕೃಷಿಕರೂ ಈ ಪ್ರಯತ್ನ ಮಾಡಬಹುದು ಎನ್ನುತ್ತಾರೆ ರಾಜಗೋಪಾಲ್ ಅವರು.

ರಾಜಗೋಪಾಲ ಕೈಪಂಗಳ ಅವರು ಕೃಷಿಕರಿಗೆ ಉಪಯುಕ್ತವಾಗುವ ಇಂತಹ ಹಲವು ಉಪಕರಣ ಮಾಡಿದ್ದಾರೆ. ಅದರಲ್ಲಿ  ಆನೆ ಹಾಗೂ ಕಾಡುಪ್ರಾಣಿಗಳ ಹಾವಳಿ ತಡೆಗೆ ಸಿದ್ಧ ಮಾಡಿರುವ ಎಲ್ ಇ ಡಿ ಆಧಾರಿತ ಲೈಟ್  ಗಮನಸೆಳೆದಿದೆ. ಕೇರಳದ ಅರಣ್ಯ ಇಲಾಖೆ ಆನೆ ಹಾವಳಿ ತಡೆಗೆ ಈ ಲೈಟ್ ಉಪಯುಕ್ತವಾಗಿದೆ ಎಂದು ಹೇಳಿದೆ.

ಕೃಷಿಕನಾಗಿರುವುದರಿಂದ ಕೃಷಿಕರ ಸಂಕಷ್ಟ ಅರಿವಿದೆ. ಹೀಗಾಗಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ವಿವಿಧ ಪ್ರಯತ್ನ ಮಾಡುತ್ತಲೇ ಇದ್ದೇನೆ. ಇದು ಮಂಗಗಳನ್ನು ತೋಟದಿಂದ ಓಡಿಸಲು ಮಾಡಿರುವ ಒಂದು ಪ್ರಯತ್ನ. ಈಗ ಇದರ ಸಾಧಕ ಬಾಧಕಗಳ ಬಗ್ಗೆಯೂ ಗಮನಿಸಲಾಗುತ್ತಿದೆ. ಇತರ ಕೃಷಿಕರೂ ಈ ವಿಧಾನ ಮಾಡಿ ಪ್ರಯತ್ನ ಮಾಡಬಹುದು. – ರಾಜಗೋಪಾಲ ಕೈಪಂಗಳ

ರಾಜಗೋಪಾಲ್ ಕೈಪಂಗಳ  ಅವರ ಸಂಪರ್ಕಕ್ಕೆ : 9061674679

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ
October 15, 2026
10:10 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror