ಮಂಗಳೂರಿನಲ್ಲಿ ನರೇಂದ್ರ ಮೋದಿ ಅವರಿಂದ ಪ್ರಚಾರ ಸಭೆ ಮೀನುಗಾರರ ರಕ್ಷಣೆಗೆ ವಿಶೇಷ ಯೋಜನೆ

Advertisement
ಮಂಗಳೂರು: ಕರಾವಳಿ ಜಿಲ್ಲೆಯ ಮೀನುಗಾರರ ರಕ್ಷಣೆ ಹಾಗೂ ಅವರ ಬದುಕಿಗೆ ಭದ್ರತೆ ನೀಡಲು ನಮ್ಮ ಸರಕಾರ ಬದ್ಧವಾಗಿದೆ. ಇದಕ್ಕಾಗಿ ಮುಂದೆ ನಮ್ಮ ಸರಕಾರ ಬಂದರೆ ಸಚಿವಾಲಯವನ್ನೂ ತೆರೆಯಲು ಯೋಜನೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಂಗಳೂರಿನಲ್ಲಿ ಶನಿವಾರ ನಡೆದ ಬಿಜೆಪಿ ಅಭ್ಯರ್ಥಿಗಳ ಪರವಾದ ಪ್ರಚಾರ ಸಭೆಯಲ್ಲಿ ಸುಮಾರು 1 ಲಕ್ಷ ಬಿಜೆಪಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮೀನುಗಾರಿಕೆ ಕರಾವಳಿ ಜಿಲ್ಲೆಯ ಪ್ರಮುಖ ಆರ್ಥಿಕ ವಹಿವಾಟಿನ ಉದ್ಯಮವೂ ಆಗಿದೆ. ಹಲವಾರು ಕುಟುಂಬಗಳ ಆಸರೆಯೂ ಆಗಿದೆ. ಹೀಗಾಗಿ ಆಳ ಮೀನುಗಾರಿಕೆ ಮತ್ತು  ಮೀನುಗಾರಿಕೆ ಪ್ರೋತ್ಸಾಹಿಸಲು ವಿಶೇಷವಾಗಿ ಸಚಿವಾಲಯವನ್ನೂ ತೆರೆಯಲಾಗುವುದು ಎಂದರು. ಕರಾವಳಿ ಜಿಲ್ಲೆಯು ಬ್ಯಾಂಕಿಂಗ್ ವ್ಯವಹಾರದಲ್ಲಿ ಅಗ್ರ ಸ್ಥಾನ ಪಡೆದಿದೆ. ಆದರೆ ಕಾಂಗ್ರೆಸ್ ಮುಖಂಡರು ಕೆಲವರು ಬ್ಯಾಂಕ್ ಮುಳುಗಿಸುವ ವ್ಯವಸ್ಥೆಗೆ ಮುಂದಾಗಿದ್ದರು, ಹೀಗಾಗಿ ಚೌಕೀದಾರ ಈ ಅವ್ಯಹಾರ ತಡೆದರೆ ಕೆಲವರಿಗೆ ಸಿಟ್ಟು ಬರುತ್ತದೆ ಎಂದರು. ಕೃಷಿ ವಲಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದೀಗ ರಾಜಕೀಯ ಕಾರಣಕ್ಕೆ ಕಾಂಗ್ರೆಸ್ -ಜೆಡಿಎಸ್ ಸರಕಾರವೂ ಕೆಲವು ಯೋಜನೆಗಳನ್ನು  ಮಾಡಿ ರೈತರನ್ನು  ದಾರಿ ತಪ್ಪಿಸುತ್ತಿದೆ ಎಂದರು.
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement
Advertisement

Be the first to comment on "ಮಂಗಳೂರಿನಲ್ಲಿ ನರೇಂದ್ರ ಮೋದಿ ಅವರಿಂದ ಪ್ರಚಾರ ಸಭೆ ಮೀನುಗಾರರ ರಕ್ಷಣೆಗೆ ವಿಶೇಷ ಯೋಜನೆ"

Leave a comment

Your email address will not be published.


*