ಮಂಗಳೂರು ಬಾಂಬ್ ಪ್ರಕರಣ : ಸೀಎಂಗಿಂತಲೂ ಮಾಜಿ ಸೀಎಂ ಹೆಚ್ಚು ಪವರ್ ಫುಲ್ ಹೇಗೆ…..?

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ  ಬಾಂಬ್ ಪತ್ತೆಯಾಯಿತು. ಸರಕಾರದಿಂದ ತೊಡಗಿ ಎಲ್ಲಾ ಜನಪ್ರತಿನಿಧಿಗಳು  ವಿವಿಧ  ಹೇಳಿಕೆ ನೀಡಿದರು. ಮಾಧ್ಯಮಗಳು ನಿರ್ಧಾರ ನೀಡುವ ಹಂತಕ್ಕೆ ಬಂದಿದ್ದರು. ಸರ್ಕಾರ ಗೃಹ ಸಚಿವರು ತನಿಖೆ ತನಿಖೆ ಎಂದರು. ಮುಖ್ಯಮಂತ್ರಿಗಳು ಸಮಗ್ರ ತನಿಖೆ ಎಂದರು. ಆದರೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇದೊಂದು ಠುಸ್ ಪಟಾಕಿ ಎಂದರು.

Advertisement

ಹಾಗಿದ್ದರೆ ಮಾಜಿ ಮುಖ್ಯಮಂತ್ರಿಗಳು ಅಷ್ಟು ಬೇಗನೆ ಮಾಹಿತಿ ಕಲೆ ಹಾಕಿದ್ದು ಹೇಗೆ ? ಪೊಲೀಸ್ ಇಲಾಖೆಯಲ್ಲಿ  ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡುವ ಆಪ್ತರು ಯಾರು ಇತ್ಯಾದಿ ಪ್ರಶ್ನೆಗಳು ಕುತೂಹಲಕಾರಿ…!. ಅಷ್ಟೇ ಅಲ್ಲ, ಅಷ್ಟೊಂದು ಪವರ್ ಫುಲ್ ಹೇಗೆ ?.

Advertisement

ಮಾಜಿಯಾಗಿದ್ದರೂ ಎಲ್ಲಾ ಇಲಾಖೆಗಳಿಂದಲೂ ತಕ್ಷಣವೇ ಮಾಹಿತಿ ಪಡೆದುಕೊಳ್ಳುವ ಚಾಕಚಕ್ಯತೆ ಇರುವ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳೂರು ಬಾಂಬ್ ಪ್ರಕರಣದಲ್ಲೂ ತಕ್ಷಣ ಮಾಹಿತಿ ಪಡೆದರೆ ಪೊಲೀಸ್ ಇಲಾಖೆಯ ವೈಫಲ್ಯಗಳು ಹಾಗೂ ಮಾಹಿತಿ ಸೋರಿಕೆ ಬಗ್ಗೆಯೂ ಈ ಘಟನೆ ಸಾಕ್ಷಿಯಾಗಿದೆ. ಗುಪ್ತಚರ ಇಲಾಖೆ ಇದ್ದರೂ ಸರಕಾರಕ್ಕಿಂತಲೂ ಹೆಚ್ಚು ನಿಖರವಾದ ಮಾಹಿತಿಯನ್ನು ಎಚ್ ಡಿ ಕುಮಾರಸ್ವಾಮಿ ಹೇಗೆ ಪಡೆದರು ಎಂಬುದು ಗಮನಾರ್ಹವಾಗಿದೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಇದೊಂದು ಎಚ್ಚರಿಕೆಯ ಪಾಠವೂ ಆಗಿದೆ.

ಈ ನಡುವೆ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಅಣುಕು ಪ್ರದರ್ಶನ ಎಂದಿದ್ದಾರೆ. ನಾಲಿಗೆ ಇದೆ ಎಂದು ಎನು ಬೇಕಾದರೂ ಮಾತನಾಡಬಹುದು  ಎಂಬ ಭಾವನೆ ಇರಬಾರದು ಆಡುವ ಮಾತಿನ ಮೇಲೆ ಎಚ್ಚರಿಕೆ ಇರಬೇಕು ಮಾಹಿತಿ ತಿಳಿದು ಕುಮಾರಸ್ವಾಮಿ ಮಾತನಾಡಲಿ ಎಂದು ಹೇಳಿದ್ದಾರೆ.

Advertisement

ಒಟ್ಟಿನಲ್ಲಿ  ಮಂಗಳೂರು ಬಾಂಬ್ ಪ್ರಕರಣವು ಜನಪ್ರತಿನಿಧಿಗಳ, ಪೊಲೀಸ್ ಇಲಾಖೆಯ, ಗುಪ್ತಚರ ಇಲಾಖೆಯ, ಮಾಧ್ಯಮಗಳ, ನೂತನ ಆವಿಷ್ಕಾರಗಳ ಮುಖವನ್ನು ಅನಾವರಣ ಮಾಡಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಮಂಗಳೂರು ಬಾಂಬ್ ಪ್ರಕರಣ : ಸೀಎಂಗಿಂತಲೂ ಮಾಜಿ ಸೀಎಂ ಹೆಚ್ಚು ಪವರ್ ಫುಲ್ ಹೇಗೆ…..?"

Leave a comment

Your email address will not be published.


*