ಮಂಗಳೂರು : ಬಾಂಬ್ ಸ್ಫೋಟಿಸಿ ಸಜೀವ ಬಾಂಬ್ ನಿಷ್ಕ್ರಿಯ ಮಾಡಿದ ಬಾಂಬ್ ನಿಷ್ಕ್ರಿಯ ತಂಡ : ಆತಂಕ ನಿವಾರಣೆ

January 20, 2020
5:45 PM

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಪತ್ತೆಯಾದ ಸಜೀವ ಬಾಂಬ್ ಸತತ ಕಾರ್ಯಾಚರಣೆ ಮೂಲಕ ಪೊಲೀಸರು ಹಾಗೂ ಭದ್ರತಾ ಸಿಬಂದಿಗಳು  ಸ್ಫೋಟಿಸುವ ಮೂಲಕ ಬಾಂಬ್ ನಿಷ್ಕ್ರಿಯ ಮಾಡುತ್ತಿದ್ದಾರೆ. ಯೋಧ ಗಂಗಯ್ಯ ಅವರು ತೀವ್ರವಾದ ಸವಾಲುಗಳನ್ನು  ತೆಗೆದುಕೊಂಡು ಮಣ್ಣಿನ ಆಳದಲ್ಲಿ  ಬಾಂಬ್ ಇರಿಸಿ  ಮರಳು ಮೂಟೆಗಳನ್ನು ಸುತ್ತಲೂ ಇಟ್ಟು ವೈಯರ್ ಹಾಗೂ ರಿಮೋಟ್ ಬಳಸಿ ಬಾಂಬ್ ಅನ್ನು ದೂರದಿಂದಲೇ   ಸ್ಫೋಟಿಸುವ ಕಾರ್ಯ ನಡೆಸಿದ್ದಾರೆ. ಸ್ಫೋಟದ ವೇಳೆ ಅಲ್ಪ ಪ್ರಮಾಣದ ಬೆಂಕಿ ಹಾಗೂ ಹೊಗೆ ಕಾಣಿಸಿಕೊಂಡಿತು. ಈ ಮೂಲಕ ಭಾರೀ ಪ್ರಮಾಣದ ದುರಂತವೊಂದು ತಪ್ಪಿದಂತಾಗಿದೆ.  ಹೀಗಾಗಿ ಇದೀಗ ಆತಂಕ ದೂರವಾಗಿದೆ. ತನಿಖೆ ಮುಂದುವರಿದಿದೆ.

ಈ ನಡುವೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರಬಹುದಾದ ಶಂಕಿತ ವ್ಯಕ್ತಿಯ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಶಂಕಿತ ವ್ಯಕ್ತಿ ಮತ್ತು ಆತ ವಿಮಾನ ನಿಲ್ದಾಣಕ್ಕೆ ಬಂದ ಮತ್ತು ಹೋಗಲು ಬಳಸಿದ ಆಟೋದ ಚಿತ್ರವನ್ನೂ ಸಹ ಪೊಲೀಸರು ಬಿಡುಗಡೆ ಮಾಡಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದಲ್ಲಿ ಬಯೋ-ಕಾಂಪೋಸಿಟ್ ಕ್ರಾಂತಿ – ಅರಣ್ಯ ನಾಶವಿಲ್ಲದೇ ಕಟ್ಟಡ ನಿರ್ಮಾಣಕ್ಕೆ ಹೊಸ ದಾರಿ
June 9, 2026
11:38 AM
by: ದ ರೂರಲ್ ಮಿರರ್.ಕಾಂ
ಅಡಿಕೆಯಿಂದ ಸಾಂಸ್ಕೃತಿಕ ಉದ್ಯಮದವರೆಗೆ – ವಿಯೆಟ್ನಾಂನ ಹೊಸ ಪ್ರಯೋಗ ರೈತರಿಗೆ ಮಾದರಿಯಾಗಬಹುದೇ..?
June 9, 2026
7:36 AM
by: ದ ರೂರಲ್ ಮಿರರ್.ಕಾಂ
ಝಾರ್ಖಂಡ್‌ನ ಮಹಿಳಾ ರೈತರಿಂದ ಬೆಳೆದ ಮಾವು ಈಗ ಲಂಡನ್‌ಗೆ…! ಬ್ರಿಟನ್‌ಗೆ ಮೊದಲ ಬಾರಿಗೆ ರಫ್ತು
June 8, 2026
8:48 PM
by: ದ ರೂರಲ್ ಮಿರರ್.ಕಾಂ
ಕರ್ನಾಟಕದಲ್ಲಿ ಮುಂದಿನ 3-4 ದಿನ ಭಾರೀ ಮಳೆ ಸಾಧ್ಯತೆ..! ಜೂನ್ 8-11ರ ನಡುವೆ ಭಾರೀ ಮಳೆ ಸಾಧ್ಯತೆ | ರೈತರಿಗೆ ಹವಾಮಾನ ಇಲಾಖೆ ಎಚ್ಚರಿಕೆ
June 8, 2026
8:20 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror