ಮಂಡೆಕೋಲಿನಲ್ಲಿ ಕೊರೋನಾ ಪಾಸಿಟಿವ್ ಶಂಕೆ ? | ಸೂಕ್ತ ಮಾಹಿತಿ ಇಲ್ಲದೆ ಜನರಲ್ಲಿ ಆತಂಕ |

July 17, 2020
11:33 AM

ಮಂಡೆಕೋಲು: ದ ಕ ಜಿಲ್ಲೆಯ ವಿವಿದೆಡೆ ಕೊರೋನಾ ಪಾಸಿಟಿವ್‌ ಕಂಡುಬಂದಿದೆ. ಸುಳ್ಯ ತಾಲೂಕಿನಲ್ಲಿ ಕೂಡಾ ವಿವಿದೆಡೆ ಕೊರೋನಾ ಪಾಸಿಟಿವ್‌ ಕಂಡುಬಂದಿದೆ. ಕಳೆದ 3 ದಿನಗಳಿಂದ ಮಂಡೆಕೋಲಿನಲ್ಲೂ ಕೊರೋನಾ ಪಾಸಿಟಿವ್‌ ಬಂದಿರುವ ಬಗ್ಗೆ ಇದೀಗ ಜನರಿಗೆ ಆತಂಕವಿದೆ. ಆದರೆ ಯಾವುದೇ ಮಾಹಿತಿ ಇಲ್ಲದೆ ಜನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಮಂಡೆಕೋಲು ನಿವಾಸಿಗಳು ತಿಳಿಸಿದ್ದಾರೆ.

ಮಂಡೆಕೋಲು ಗ್ರಾಮದ ಒಬ್ಬರಿಗೆ ಕೊರೋನಾ ಪಾಸಿಟಿವ್‌ ಕಂಡುಬಂದಿದ್ದು ಅವರ ಸಂಪರ್ಕ ಹೊಂದಿದವರು ಹೋಂ ಕ್ವಾರೆಂಟೈನ್‌ ಆಗಬೇಕು ಎಂದು  ಆಶಾ ಕಾರ್ಯಕರ್ತೆಯರು ಕೆಲವು ಮನೆಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಆರೋಗ್ಯ ಇಲಾಖೆ, ಸ್ಥಳೀಯ ಆಡಳಿತವು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಹೀಗಾಗಿ ಮತ್ತಷ್ಟು ಆತಂಕವಾಗುತ್ತಿದೆ ಎಂದು ಮಂಡೆಕೋಲು ನಿವಾಸಿಗಳು ತಮ್ಮ ಅಳಲನ್ನು  ತೋಡಿಕೊಂಡಿದ್ದಾರೆ. ತಕ್ಷಣವೇ ಮಂಡೆಕೋಲು ಪಂಚಾಯತ್‌ ಹಾಗೂ ಆರೋಗ್ಯ ಇಲಾಖೆ ಸ್ಥಳೀಯಾಡಳಿತ ಈ ಬಗ್ಗೆ ಸೂಕ್ತ  ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇರಳ ಬಜೆಟ್‌ನಲ್ಲಿ ರಬ್ಬರ್‌ ಬೆಳೆಗಾರರಿಗೆ ಬಂಪರ್‌ ಸಿಹಿ ಸುದ್ದಿ- ಬೆಂಬಲ ಬೆಲೆ ₹250ಕ್ಕೆ ಏರಿಕೆ
June 22, 2026
7:20 AM
by: ದ ರೂರಲ್ ಮಿರರ್.ಕಾಂ
ಮೂರು ವರ್ಷಗಳಲ್ಲಿ 28 ಲಕ್ಷಕ್ಕೂ ಅಧಿಕ ಮರ ಕಡಿಯಲು ಅನುಮತಿ…! ಪರಿಸರದ ಮೇಲೆ ಹೆಚ್ಚುತ್ತಿರುವ ಒತ್ತಡ
June 21, 2026
10:16 PM
by: ದ ರೂರಲ್ ಮಿರರ್.ಕಾಂ
ಜೂನ್ 30ರೊಳಗೆ LPG e-KYC ಮಾಡಿಸದಿದ್ದರೆ ಗ್ಯಾಸ್ ಸಬ್ಸಿಡಿ ಸ್ಥಗಿತ ? ಗ್ರಾಹಕರಿಗೆ ಮಹತ್ವದ ಎಚ್ಚರಿಕೆ
June 21, 2026
10:09 PM
by: ದ ರೂರಲ್ ಮಿರರ್.ಕಾಂ
ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಾಟಕ್ಕೆ ಸಂಕಷ್ಟ..? ಇದು ಅಡಿಕೆ ಉದ್ಯಮಕ್ಕೆ ಹೊಸ ಸಂಕಷ್ಟವೇ?
June 21, 2026
8:45 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror