Advertisement
ಮಂಡೆಕೋಲು: ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಶುಕ್ರವಾರ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮ ಹಾಗೂ ಉಳ್ಳಾಕುಲು ದೈವದ ಅಡ್ಡಣ ಪೆಟ್ಟು ನಡೆಯಿತು.
ಬೆಳಗ್ಗೆ ದೇವಸ್ಥಾನಕ್ಕೆ ಸಂಬಂಧಪಟ್ಟ ನಾಲ್ಕೂರಿನ ಪ್ರತಿನಿಧಿಗಳು ಉಳ್ಳಾಕುಲು ದೈವದ ಜೊತೆಯಲ್ಲಿ ದೇವಸ್ಥಾನದ ಸಮೀಪದ ಕಟ್ಟೆಗೆ ತೆರಳಿದ ಬಳಿಕ ಅಡ್ಡಣ ಹೊಡೆತ ನಡೆಯಿತು. ಬಳಿಕ ಇರುವೆರ್ ಉಳ್ಳಾಕುಲು ದೈವದ ನೇಮ ನಡೆಯಿತು. ಸಾವಿರಾರು ಮಂದಿ ಭಕ್ತಾಧಿಗಳು ಅಡ್ಡಣ ಪೆಟ್ಟಿನ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಂಡರು.
ಮಧ್ಯಾಹ್ನ ಉದ್ರಾಂಡಿ ಹಾಗೂ ಉಪ ದೈವಗಳ ಕೋಲ ನಡೆದು ಜಾತ್ರೋತ್ಸವ ಸಂಪನ್ನಗೊಂಡಿತು.
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮಂಡೆಕೋಲು ದೇವಸ್ಥಾನದಲ್ಲಿ ಉಳ್ಳಾಕುಲು ನೇಮ , ಅಡ್ಡಣ ಪೆಟ್ಟು"