ಮಕ್ಕಳ ಪ್ರತಿಭೆಗಳು ಶಿಬಿರದಿಂದ ಅನಾವರಣಗೊಳ್ಳುವುದು-ಉದಯ್ ಕ್ರಾಸ್ತಾ“ವಾಸ್ತವವಾಗಿ ಮಕ್ಕಳ ಪ್ರತಿಭೆಗಳು ವಿಶೇಷ ಶಿಬಿರಗಳ ಮೂಲಕ ಬೆಳಕಿಗೆ ಬರುತ್ತದೆ. ಎಳೆಯ ಮಕ್ಕಳಿಗೆ ಸರಿ ಯಾದ ಮಾರ್ಗ ತೋರಿದರೆ ಪ್ರತಿಭಾ ವಂತರಾಗುತ್ತಾರೆ” ಎಂದು ಜೆಸಿಐ ವಲಯ ಉಪಾಧ್ಯಕ್ಷ ರಾಯನ್ ಉದಯ್ ಕ್ರಾಸ್ತಾ ಹೇಳಿದರು.
ಬೆಳ್ಳಾರೆಯ ಹಿದಾಯ ಪಬಿಕ್ ಶಾಲೆಯಲ್ಲಿ ನಡೆಯುವ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಟಿ.ವಿ, ಮೊಬೈಲ್ ಗಳಲ್ಲಿ ಕಾಲಹರಣ ಮಾಡುವ ಬದಲು ಬೇಸಿಗೆ ಶಿಬಿರದಲ್ಲಿ ತೊಡಗಿಸಿಕೊ ಳ್ಳಬೇಕು ಎಂದರು. ವೇದಿಕೆಯಲ್ಲಿ ಜೆಸಿ ಐ ವಲಯ ತರಬೇತುದಾರ ಹೇಮಲ ತಾ ಪ್ರದೀಪ್, ಮರಿಯಾ ರಾಯನ್ ರಾಡ್ರಿಗಸ್, ಝಕರಿಯಾ ಜುಮಾ ಮಸೀದಿ ಉಪಾಧ್ಯಕ್ಷ ಅಬೂಬಕ್ಕರ್ ಯು.ಹೆಚ್, ಖಜಾಂಜಿ ಹಾಜಿ ಕೆ. ಮಮ್ಮಾಲಿ, ಶಾಲಾ ಸಂಚಾಲಕ ಬಶೀ ರ್ ಬಿ.ಎ, ಎಸ್‍ಡಿ ಎಂಸಿ ಅಧ್ಯಕ್ಷ ಅಬ್ದು ಲ್ ರಹೀಮಾನ್, ಸುಳ್ಯ ಜೆಸಿಐ ಪಯ ಸ್ವಿನಿ ಉಪಾಧ್ಯಕ್ಷೆ ಮರಿಯಾ ರಾಯನ್, ಮುಖ್ಯೋಪಾಧ್ಯಾಯಿನಿ ಸುನೈನಾ ಉಪಸ್ಥಿತರಿದ್ದರು. ನಿಶ್ಮಾ ಕಾರ್ಯಕ್ರಮ ನಿರೂಪಿಸಿದರು. ಬಶೀರ್ ಯು.ಪಿ ಕಾರ್ಯಕ್ರಮ ಸಂಯೋಜಿಸಿದರು.
ಮಕ್ಕಳ ಪ್ರತಿಭೆಗಳು ವಿಶೇಷ ಶಿಬಿರಗಳ ಮೂಲಕ ಬೆಳಕಿಗೆ ಬರುತ್ತದೆ

Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement
Be the first to comment on "ಮಕ್ಕಳ ಪ್ರತಿಭೆಗಳು ವಿಶೇಷ ಶಿಬಿರಗಳ ಮೂಲಕ ಬೆಳಕಿಗೆ ಬರುತ್ತದೆ"