ನಿನ್ನ ಗರ್ಭದಿಂದ ನಾನಂದು ಹೊರಬಂದೆ, ನನ್ನ ಕಂಡೆ ನೀ ಮಗಳಂತೆ
ಸಾಗರದಲ್ಲಿಯ ನೀರಿನಂತೆ, ಭುವಿಯಲ್ಲಿ ಕಲ್ಲು ನೆರೆದಂತೆ
ನಿನ್ನ ಪ್ರೀತಿಯ ಚುಂಬನ,ನನಗದುವೇ ಅಮೃತ ಸಿಂಚನ
ಅಮ್ಮಾ ನಿನ್ನ ಮಡಿಲು,ನನಗದುವೇ ತೂಗುವ ತೊಟ್ಟಿಲು
ಎಡವಿ ಬಿದ್ದಾಗ, ಕೈ ಹಿಡಿದು ನಡೆಸಿದೆ ನೀನು
ನಡೆವ ಕಾಲಿಗೆ, ಗೆಜ್ಜೆ ಕಟ್ಟಿ ಕುಣಿಸಿದೆ ನೀನು
ನನ್ನ ನಗುವಲ್ಲಿ,ನೋವನ್ನೆಲ್ಲಾ ಮರೆತೆ ನೀನು
ನಿನ್ನ ಪ್ರೀತಿಯ ಸಾರೊಟಿಗೆ ಸಾರಥಿಯಾಗಲೇ ನಾನು?
ಮುಂಜಾನೆ ರವಿ ಕಾಣೋ ಮುನ್ನ ಕಾಣೋ ದೇವಿ ನೀನು
ಚಂದಿರ ಮರೆಯಾಗೋ ತನಕ ದುಡಿಯುವ ಮಾತೆ ನೀನು
ನಮಗಾಗಿಯೇ ನಿನ್ನೆಲ್ಲ ತವಕ,ಬಯಸಿದವಳಲ್ಲ ಹೊನ್ನು ಕನಕ
ನನ್ನಲ್ಲಿಹ ಆತಂಕ ಕೊನೆಯಾಗದೆ ನಿನ್ನ ಈ ಕಾಯಕ
ಸಾವಿರ ಸಾವಿರ ಕನಸುಗಳೇ ಹುದುಗಿದ್ದರೂ
ನಾನಿನ್ನ ಬಿಡಲಾರೆನು ನನ್ನಾಣೆಗೂ
ಸುಖದ ಸುಪ್ಪತ್ತಿಗೆಯೇ ನನ್ನ ಮುಂದಿದ್ದರೂ
ಈ ಜೀವ ಮುಡಿಪಾಗಿಡುವೆ ನಿನಗೆಎಂದೆಂದಿಗೂ…….
ಶಿಕ್ಷಕಿ
Be the first to comment on "ಮಡಿಲೇ ತೂಗುವ ತೊಟ್ಟಿಲು"