ನವದೆಹಲಿ: ಏಳು ಹಂತದ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ವಿವಿಧ ಮಾಧ್ಯಮಗಳು ಮತ್ತು ಏಜೆನ್ಸಿಗಳು ನಡೆಸಿದ ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶ ಹೊರ ಬಂದಿದೆ. ಹೊರ ಬಂದ ಎಲ್ಲಾ ಸಮೀಕ್ಷೆಗಳು ಕೂಡ ಬಿಜೆಪಿ ನೇತೃತ್ವದ ಎನ್.ಡಿ.ಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಸಮೀಕ್ಷೆಗಳ ಪ್ರಕಾರ ಸರಳ ಬಹುಮತಕ್ಕಿಂತಲೂ ಮುಂದೆ ಹೋಗಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್.ಡಿ.ಎ ಮುನ್ನೂರರ ಆಸುಪಾಸಿನಲ್ಲಿ ಸ್ಥಾನ ಪಡೆದು ಅಧಿಕಾರಕ್ಕೆರಲಿದೆ ಎಂದು ಹೇಳಿದೆ.
9 ಸಮೀಕ್ಷೆಗಳು ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಎಂದಿದೆ.
ಎನ್.ಡಿ.ಟಿವಿ ನಡೆಸಿದ ಸಮೀಕ್ಷೆ ಪ್ರಕಾರ ಎನ್.ಡಿ.ಎಗೆ 300 ಸ್ಥಾನ ದೊರೆಯಲಿದೆ.
ಟೈಮ್ಸ್ ನೌ ಸಮೀಕ್ಷೆ 306 ಸ್ಥಾನ ನೀಡಿದೆ. ಜನಕಿ ಬಾತ್ 305,
ರಿಪಬ್ಲಿಕ್- ಸೀ ವೋಟರ್ ಸಮೀಕ್ಷೆ 287,
ನ್ಯೂಸ್ ನೇಷನ್ 282 ,
ನ್ಯೂಸ್ ಎಕ್ಸ್ 298 ಸ್ಥಾನ ದೊರೆಯಲಿದೆ
ನ್ಯೂಸ್ 24-ಟುಡೇಯ್ಸ್ ಚಾಣಕ್ಯ ಸಮೀಕ್ಷೆ 306 ಸ್ಥಾನ ನೀಡಿದೆ
ಇಂಡಿಯಾ ಟುಡೇ 339 ಸ್ಥಾನ ಲಭ್ಯವಾಗಲಿದೆ ಎಂದಿದೆ.
ಸೀ ವೋಟರ್ಸ್ ಸಮೀಕ್ಷೆ ಎನ್.ಡಿ.ಎ ಗೆ 287 ಸ್ಥಾನ ಪಡೆಯಲಿದೆ ಎಂದಿದೆ.
ಎಲ್ಲಾ ಸಮೀಕ್ಷೆಗಳು ಯು.ಪಿ.ಎ ಗೆ 120ರಿಂದ 130 ಸ್ಥಾನ ಮತ್ತು ಇತರರು 100-120 ಸೀಟ್ ಪಡೆಯಬಹುದು ಎಂದು ಹಳಿದೆ.
ರಾಜ್ಯದಲ್ಲೂ ಬಿಜೆಪಿಗೆ 17 ರಿಂದ 20 , ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಕೂಟಕ್ಕೆ 8 ರಿಂದ 10 ಸ್ಥಾನಗಳು ಲಭ್ಯವಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮತದಾನೋತ್ತರ ಸಮೀಕ್ಷೆ : ಮತ್ತೆ “ನಮೋ” ಆಡಳಿತ ಎಂದ ಸಮೀಕ್ಷಾ ವರದಿಗಳು"