ನವದೆಹಲಿ : ಲೋಕಸಭಾ ಚುನಾವಣಾ ಫಲಿತಾಂಶ ಕೆಲವೇ ಹೊತ್ತಲ್ಲಿ ಸಂಪೂರ್ಣವಾಗಿ ಹೊರಬೀಳಲಿದೆ. ಈಗಾಗಲೇ ಲಭ್ಯವಾಗುವ ಮುನ್ಸೂಚನೆಯ ಪ್ರಕಾರ ಮತ್ತೆ ಎನ್ ಡಿ ಎ ಅಧಿಕಾರಕ್ಕೇರುವುದು ಹತ್ತಿರವಾಗಿದೆ. ಕೇವಲ ಬಿಜೆಪಿ ಮಾತ್ರವೇ 290 ಸ್ಥಾನಗಳಲ್ಲಿ ಮುನ್ನಡೆ ಹೊಂಡಿದ್ದು ಮೈತ್ರಿಕೂಟಗಳು ಸೇರಿದಂತೆ 341 ಸ್ಥಾನಗಳಲ್ಲಿ ಈಗ ಮುನ್ನಡೆ ಹೊಂದಿದೆ. ಹೀಗಾಗಿ ಈಗಿನ ಸೂಚನೆ ಪ್ರಕಾರ “ನಮೋ” ಆಡಳಿತ ಮತ್ತೆ ಪಡೆಯುವುದು ಸ್ಪಷ್ಟವಾಗುತ್ತಿದೆ.
ಆದರೆ ಕಾಂಗ್ರೆಸ್ 63 ಸ್ಥಾನಗಳಲ್ಲಿ ಮಾತ್ರವೇ ಮುನ್ನಡೆ ಸಾಧಿಸಿದ್ದು ಮೈತ್ರಿಕೂಟ ಪಕ್ಷಗಳು ಸೇರಿಸಿ 96 ಸ್ಥಾನಗಳಲ್ಲಿ ಮಾತ್ರವೇ ಮುನ್ನಡೆ ಸಾಧಿಸಿರುವುದು ಕಂಡುಬಂದಿದೆ.
ಚುನಾವಣೋತ್ತರ ಸಮೀಕ್ಷೆಗಳು ಸರಿಯಾಗಿತ್ತು ಎಂಬುದನ್ನು ಸಾಬೀತುಪಡಿಸಿ ಬಿಜೆಪಿ ನೇತೃತ್ವದ ಎನ್.ಡಿ.ಎ ಅಧಿಕಾರದತ್ತ ಮುನ್ನಡೆದಿದೆ. ಮತ ಎಣಿಕೆ ಆರಂಭಗೊಂಡು ಎರಡು ಗಂಟೆಯಲ್ಲಿಯೇ ಎನ್.ಡಿ.ಎ ಸ್ಪಷ್ಟ ಬಹುಮತದತ್ತ ಮುನ್ನಡೆದಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಎನ್.ಡಿ.ಎ ಭಾರೀ ಮುನ್ನಡೆ ಪಡೆದಿದೆ. ಕೇರಳದಲ್ಲಿ ಮಾತ್ರ ಯುಪಿಎಗೆ ಮುನ್ನಡೆ ಇದೆ. ಕೇರಳದ 20 ಕ್ಷೇತ್ರಗಳಲ್ಲಿ ಕಾಸರಗೋಡು ಸೇರಿ 19 ಕಡೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮುನ್ನಡೆಯಲ್ಲಿದೆ. ಒಟ್ಟಿನಲ್ಲಿ ಮೊದಲ ಎರಡು ಗಂಟೆಗಳ ಟ್ರೆಂಡ್ ಗಮನಿಸಿದರೆ ದೇಶದಲ್ಲಿ 350 ಕ್ಕೂ ಹೆಚ್ಚು ಸ್ಥಾನ ಪಡೆದು ಎನ್.ಡಿ.ಎ ಅಧಿಕಾರಕ್ಕೆ ಬರುವ ಸ್ಪಷ್ಟ ಸೂಚನೆ ನೀಡಿದೆ. ಬಿಜೆಪಿ ಮಾತ್ರ ಮ್ಯಾಜಿಕ್ ಸಂಖ್ಯೆ 272ಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.