ಮತ್ತೊಂದು “ಮಹಾ”ಚಂಡಮಾರುತಕ್ಕೆ ಸಿದ್ದವಾಗುತ್ತಿದೆ ಕಡಲು..!

October 30, 2019
4:19 PM

ಮಂಗಳೂರು/ಸುಳ್ಯ: ಕ್ಯಾರ್ ಚಂಡಮಾರುತದ ಬಳಿಕ ಶಾಂತವಾಗಿದ್ದ ಅರಬೀ ಸಮುದ್ರ  ಈಗ ಮತ್ತೆ ಇನ್ನೊಂದು ಚಂಡಮಾರುತಕ್ಕೆ ಸಿದ್ಧವಾಗುತ್ತಿದೆ. ಇದು “ಮಹಾ” ಚಂಡಮಾರುತ.  ಇದು ಅರಬೀ ಸಮುದ್ರದಲ್ಲಿ  ಏಳುತ್ತಿರುವ 4 ನೇ ಚಂಡಮಾರುತ.

ಸದ್ಯ ಅರಬೀ ಸಮುದ್ರದ ಮಧ್ಯ ಭಾಗದಲ್ಲಿ ವಾಯು ಭಾರ ಕುಸಿತ ಕಂಡುಬಂದಿದೆ. ಇಂದು ಸಂಜೆಯ ವೇಳೆಗೆ ಇದರ ತೀವ್ರತೆ ತಿಳಿಯಲಿದೆ. ಈಗಿನ ನಿರೀಕ್ಷೆ ಪ್ರಕಾರ ಲಕ್ಷದ್ವೀಪದ ಕಡೆಗೆ ಈ ಚಂಡಮಾರುತ ಸಾಗುವ ಲಕ್ಷಣ ಇದೆ. ಈ ಹಿಂದೆ ಉಂಟಾದ ಚಂಡಮಾರುತವು  ಕರಾವಳಿ ತೀರದಲ್ಲಿ ಭಾರೀ ಮಳೆಗೆ ಕಾರಣವಾಗಿತ್ತು. ಅದೇ ಸಂದರ್ಭ ಬಂಗಾಳ ಕೊಲ್ಲಿಯಲ್ಲಿ  ಉಂಟಾದ  ವಾಯುಭಾರ ಕುಸಿತದ ಕಾರಣದಿಂದ ಕರಾವಳಿ ತೀರವು ಅಪಾಯದಿಂದ ಪಾರಾಗಿತ್ತು. ಆದರೆ ಒಳನಾಡು ಪ್ರದೇಶದಲ್ಲಿ ಭಾರೀ ಮಳೆಯಾಯಿತು. ಇದೀಗ ಮತ್ತೆ ಅರಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಮುಂದಿನ 48 ಗಂಟೆಗಳಲ್ಲಿ  ‘ಮಹಾ’ ಚಂಡಮಾರುತ ತೀವ್ರಗೊಳ್ಳುವ ನಿರೀಕ್ಷೆ ಇದೆ.  ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು ಕರ್ನಾಟಕ, ಮತ್ತು ಕೇರಳಗಳಲ್ಲಿ ಮಳೆಯಾಗಲಿದೆ. ತಮಿಳುನಾಡು, ಕೇರಳ, ಮತ್ತು ಕರ್ನಾಟಕ ಕರಾವಳಿಯುದ್ದಕ್ಕೂ ಸಮುದ್ರದಲ್ಲಿ ಅಬ್ಬರ ಕಾಣಬಹುದು ಎಂದು ಹವಾಮಾನ ವಿಶ್ಲೇಷಣೆಯಲ್ಲಿ ನಿರೀಕ್ಷಿಸಲಾಗಿದೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಹಾನಿಕಾರಕವಲ್ಲ – ಅಧ್ಯಯನ ಪ್ರಗತಿಯಲ್ಲಿ | ಹಾಳೆತಟ್ಟೆ ಹಾನಿಕಾರಕವಲ್ಲ
March 17, 2026
10:47 PM
by: ದ ರೂರಲ್ ಮಿರರ್.ಕಾಂ
ಗಿರಿಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ | ಮುಳ್ಳಯ್ಯನಗಿರಿ–ಸೀತಾಳಯ್ಯಗಿರಿಯಲ್ಲಿ ಜಾಗೃತಿ ಕಾರ್ಯ
March 17, 2026
9:35 PM
by: ದ ರೂರಲ್ ಮಿರರ್.ಕಾಂ
ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ | ಲೀಟರ್‌ಗೆ ₹2 ಹೆಚ್ಚಳ ಘೋಷಿಸಿದ ಕೋಮುಲ್
March 17, 2026
9:28 PM
by: ಮಿರರ್‌ ಡೆಸ್ಕ್
ಅಡಿಕೆ ರೋಗಕ್ಕೆ “100% ಬಯೋ ಗ್ಯಾರಂಟಿ” ಔಷಧಿ? — ICAR ಸ್ಪಷ್ಟನೆ | ಇನ್ನೂ ಅಧ್ಯಯನವೇ ಆಗಿಲ್ಲ…!
March 17, 2026
7:58 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror