ಸುಳ್ಯ: ಸುಳ್ಯ ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಸಮರ್ಪಕ ರೀತಿಯಲ್ಲಿ ಸೇವೆ ಸಿಗದಿರುವ ಬಗ್ಗೆ ಜನ ಜಾಗೃತಿ ಮೂಡಿಸಿ ಹಕ್ಕೊತ್ತಾಯ ಸಭೆ ನಡೆಸಲು ಮಲೆನಾಡ ಜಂಟಿ ಕ್ರಿಯಾ ಸಮಿತಿ ಸುಳ್ಯ ನಿರ್ಧರಿಸಿದೆ. ಮತ್ತೊಮ್ಮೆ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ಸೆ.1೦ ರಂದು ಇದನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಮಲೆನಾಡ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಕೆ.ಎಲ್.ಪ್ರದೀಪ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುಳ್ಯ ತಾಲೂಕಿನಲ್ಲಿ ಇರುವ ಹಲವಾರು ಸರ್ಕಾರಿ ಕಚೇರಿಗಳಲ್ಲಿ 2೦೦೦ಗಳಸ್ಟು ಸರ್ಕಾರಿ ನೌಕರರಿದ್ದಾರೆ ಅವರುಗಳೆಲ್ಲ ಸಮರ್ಪಕವಾಗಿ ಸೇವೆ ನೀಡುತ್ತಿದ್ದಾರೆಯೇ ಅಥವಾ ಅವರಿಂದ ಸಮರ್ಪಕವಾಗಿ ಸೇವೆ ಪಡೆಯಲು ಸಾದ್ಯವಾಗುತ್ತಿದೆಯೇ ಎಂಬ ವಿಮರ್ಶೆ ಮಾಡಬೇಕಾಗಿದೆ. ಶಾಸಕಾಂಗ ಮತ್ತು ಕಾರ್ಯಾಂಗ ಸೇರಿ ಇದನ್ನು ಸರಿ ಮಾಡಬೇಕಾಗಿತ್ತು. ಅವು ವಿಫಲವಾಗಿರುವ ಕಾರಣ ಎಚ್ಚರಿಸುವ ಕೆಲಸ ಜನರೇ ಮಾಡಬೇಕು ಅದಕ್ಕಾಗಿ ಸೆ10 ರಂದು ಹಕ್ಕೊತ್ತಾಯ ಪ್ರತಿಭಟನಾ ಸಭೆಯನ್ನು ಆಯೋಜಿಸಿದ್ದೇವೆ. ಸಮಾಜದ ಎಲ್ಲ ವರ್ಗದ ಜನರೂ ಸಭೆಯಲ್ಲಿ ಭಾಗವಹಿಸಿ ಆಡಳಿತ ಯಂತ್ರ ಸರಿಪಡಿಸಲು ಕಾರಣರಾಗಬೇಕು ಎಂದು ಪ್ರದೀಪ್ ಕುಮಾರ್ ಹೇಳಿದರು.
ಅಶೋಕ್ ಎಡಮಲೆ, ದೀಕ್ಷಿತ್ ಜಯನಗರ, ಸುಳ್ಯಕೋಡಿ ಮಾಧವ ಗೌಡ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.