ಸುಳ್ಯ: ಗುರುವಾರ ಎಲ್ಲೆಲ್ಲೂ ಲೋಕಸಭಾ ಚುನಾವಣೆ ರಿಸಲ್ಟ್ ನ ಹವಾ. ಪೂಜೆ, ಮಧುವೆ, ಗೃಹ ಪ್ರವೇಶ ಹೀಗೆ ಯಾವ ಕಾರ್ಯಕ್ರಮಕ್ಕೆ ಬಂದರೂ ಜನರ ಮನಸ್ಸು, ಕುತೂಹಲ ಚುನಾವಣಾ ಫಲಿತಾಂಶ ದೆಡೆಗೆ ಹೊರಳುತ್ತಿತ್ತು. ಎಲ್ಲಿ ಹೋದರೂ ಜನರು ಟಿ.ವಿ.ಪರದೆಯನ್ನು ಹುಡುಕುತ್ತಿದ್ದರು. ಮದುವೆ ಗೆ ಬಂದ ಜನರ ಕುತೂಹಲವನ್ನು ತಣಿಸಲು ಮಧುವೆಯ ಹಾಲ್ ನಲ್ಲಿಯೇ ದೊಡ್ಡ ಟಿವಿ ಪರದೆ ಅಳವಡಿಸಿದ ಪ್ರಸಂಗವೂ ನಡೆದಿತ್ತು. ಮದುವೆಗೆ ಬಂದವರು ಪರದೆ ನೋಡಿ ಫಲಿತಾಂಶ ತಿಳಿದು ಅಲ್ಲೆ ಚರ್ಚೆಗಳು ಗರಿಗೆದರಿತ್ತು. ಸುಳ್ಯ ಕಾಯರ್ತೋಡಿ ಮಹಾವಿಷ್ಣು ದೇವಸ್ತಾನದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಅಳವಡಿಸಿದ ಟಿವಿ ಪರದೆ ಗಮನ ಸೆಳೆಯಿತು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel