ಮಧುಮೇಹ : ಮೂಡಲಿ ಜಾಗೃತಿ…

November 14, 2019
10:40 AM

ನವೆಂಬರ್ 14 ಮಧುಮೇಹ ದಿನ.

Advertisement
Advertisement
Advertisement
Advertisement

ಹತ್ತು ವರುಷಗಳಿಂದ ನನ್ನ ಒಡನಾಡಿಯಾಗಿರುವ ಮಧುಮೇಹ ನನ್ನ ಸಂಗಾತಿಯೇ  ಆಗಿಬಿಟ್ಟಿದೆ ಎಂದು ಬಹಳ ಸಹಜವೆಂಬಂತೆ ಜಾಲತಾಣದಲ್ಲಿ ಹಂಚಿಕೊಂಡ ಹಿರಿಯರ ಬಗ್ಗೆ ನನ್ನ ಗೌರವ ಇನ್ನೂ ಹೆಚ್ಚಿತು. ಅವರು ಬಹಳಷ್ಟು ಬಾರಿ ಸಮಾರಂಭಗಳಲ್ಲಿ  ನನಗೆ ಜೊತೆಯಾದವರು. ಒಟ್ಟಿಗೆ ಊಟ ಮಾಡಿದ್ದೇವೆ.  ಬಫೆಯಲ್ಲಿ ನಿಂತು ಒಟ್ಟಿಗೆ ಮಾತನಾಡುತ್ತಾ ಬಡಿಸಿದ್ದೇವೆ.  ಆದರೆ ಒಂದೇ ಒಂದು ಬಾರಿ ಈ ವಿಷಯವನ್ನು  ಹೇಳಿಕೊಂಡಿರಲಿಲ್ಲ. ಆದರೆ ಯಾವುದೇ ಸಿಹಿತಿಂಡಿಗಳಿರಲಿ ಅಥವಾ ಜಿಡ್ಡುಯುಕ್ತ ತಿಂಡಿಗಳಾಗಿರಲಿ  ಅಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಿದ್ದರು. ನಾನೇನೋ ಅವರು ಡಯೆಟ್ ಲ್ಲಿ ಇರಬಹುದೆಂದೇನೋ ಅಂದುಕೊಂಡಿದ್ದೆ.  ಆದರೆ ಶುಗರ್ ಇರುವ ಕಾರಣ ಎಂದು ಆಮೇಲೆ ಜಾಲತಾಣದಲ್ಲಿ ಅವರು ವಿಷಯ ಹೇಳಿದ ಮೇಲೆ ತಿಳಿಯಿತಷ್ಟೇ.  ಮಧುಮೇಹವನ್ನು ಸಹಜವೆಂಬಂತೆ ತೆಗೆದುಕೊಂಡ ಅವರ ಜೀವನೋತ್ಸಾಹಕ್ಕೆ ನಾನು ಯಾವಾಗಲೂ ತಲೆಬಾಗುತ್ತೇನೆ.

Advertisement
ಡಯಾಬಿಟಿಸ್ ಬಂದಿದೆ ಎಂದರೆ ಜೀವನ ಮುಗಿಯಿತೆಂಬ ಭಾವನೆ ಜನ ಸಾಮಾನ್ಯ ಮನಸ್ಸಿನಲ್ಲಿ  ತಲೆದೋರುತ್ತದೆ. ಆದರೆ ವೈದ್ಯರು ಹೇಳುತ್ತಾರೆ , ಹಾಗಲ್ಲ. ಇದು ಜೀವನದ ಆರಂಭ. ಅಶಿಸ್ತಿನ ಜೀವನ ಶೈಲಿಗೆ ವಿದಾಯ ಹೇಳಿ ,ಶಿಸ್ತುಬದ್ಧ ಜೀವನ ಶೈಲಿಯ ಮುನ್ನುಡಿಗೆ ನಾಂದಿ. ‌ ಇಲ್ಲಿ ಆಹಾರ ಕ್ರಮವೊಂದೇ ಪ್ರಮುಖ ಪಾತ್ರ ವಹಿಸುತ್ತಿಲ್ಲ. ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ವ್ಯಾಯಾಮವೂ ಮಧುಮೇಹದ ನಿಯಂತ್ರಣ ದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಹೊತ್ತಿಗೆ ಸರಿಯಾಗಿ ಆಹಾರ  , ವ್ಯಾಯಾಮ, ನಿದ್ದೆ‌ ಎಲ್ಲವೂ ಮುಖ್ಯವೇ.   ಡಾ. ಬಿ.ಎಂ . ಹೆಗ್ಡೆಯವರು ಸಂದರ್ಶನದಲ್ಲಿ ಒಂದು ಮಾತು ಹೇಳುತ್ತಾರೆ. ಮಾವಿನ ಹಣ್ಣು ಅಮೃತ ಸಮಾನ.   ಮಧುಮೇಹವಿದ್ದವರೂ ಮಾವಿನಹಣ್ಣನ್ನು ತಿನ್ನಬಹುದು, ಆದರೆ 2 ಹೋಳು ಮಾತ್ರ. ಅದರಲ್ಲಿ ಹಲವು ಅಗತ್ಯ ಪೋಷಕಾಂಶಗಳಿವೆ. ಒಳ್ಳೆಯದೆಂದು ಹೊಟ್ಟೆ ತುಂಬಾ ಯಾವುದನ್ನೂ ತಿನ್ನಬಾರದು. ಎಳೆಯ ಹಲಸಿನಕಾಯಿ( ಗುಜ್ಜೆ) ಒಳ್ಳೆಯದು ಆದರೆ ಸಕ್ಕರೆಯ ಅಂಶ ತೀರಾ  ಕಡಿಮೆಯಾಗುತ್ತದೆ ಹಾಗಾಗಿ ಮಧುಮೇಹ ಇರುವವರು ತುಂಬಾ ಜಾಗರೂಕತೆಯಿಂದ ಆಹಾರ ಸೇವಿಸುವುದು ಬಹಳ ಅಗತ್ಯವೆಂದು ಅವರು ಸೂಚಿಸುತ್ತಾರೆ.
ಡಯಾಬಿಟಿಸ್ ನಲ್ಲಿ  ಹಲವು ನಮೂನೆಗಳು ಇವೆ. ಕೆಲವು ಅನುವಂಶೀಯವಾಗಿ ಬಂದಿರುತ್ತವೆ. ಹೀಗೆ ಬಂದ ಮಧುಮೇಹವನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವಿಲ್ಲ, ಆದರೆ   ಸರಿಯಾದ ಆಹಾರ ಕ್ರಮ   , ವ್ಯಾಯಾಮಗಳನ್ನು  ಅಳವಡಿಸಿ ಕೊಂಡಾಗ ಮಧುಮೇಹದ ಮೇಲೆ ಹಿಡಿತ ಸಾಧಿಸಬಹುದು. ಇನ್ನು ಅಶಿಸ್ತಿನ ಜೀವನ ಶೈಲಿ, ಒತ್ತಡದ ಬದುಕು,  ವ್ಯಾಯಾಮ ರಹಿತ ಜೀವನ ಕ್ರಮ, ಕೆಲವು ಔಷಧಗಳ ಅಡ್ಡ ಪರಿಣಾಮಗಳಿಂದಲೂ ಮಧುಮೇಹ  ಬರುವ ಸಾಧ್ಯತೆಗಳಿವೆ.
ನಮ್ಮ ಗ್ರಾಮ್ಯ ಭಾಷೆ ತುಳುವಿನಲ್ಲಿ ಡಯಾಬಿಟಿಸ್ ಹಾಗೂ ಬಿ. ಪಿ . ಯ ಕುರಿತು ಒಂದು ಮಾತಿದೆ. ‘ ಶುಗರ್ ಲ, ಬಿ. ಬಿ.ಪಿ . ಲ ನಂಕ ಬತ್ತಂಡ ಕುಕ್ಕತ ಮರಕ್ಕ ಬಂದಣಿಕೆ ಬತ್ತಿ ಲೆಕ್ಕ. (ಬಿ.ಪಿ. ಮತ್ತು ಶುಗರ್ ನಮಗುಂಟು ಅಂದರೆ ಮಾವಿನ ಮರಕ್ಕೆ  ಬಂದಣಿಕೆ ಬಂದಂತೆ. ಅದು ನಿಧಾನಕ್ಕೆ ಇಡೀ ಮರವನ್ನ ಆಪೋಷಣ ತೆಗೆದು ಕೊಳ್ಳುವಂತೆ ಬಿ.ಪಿ. ಶುಗರ್  ದೇಹದ ಮೇಲೆ ತನ್ನ ಪರಿಣಾಮ ವನ್ನು ಬೀರುತ್ತದೆ. )
ಜನಸಾಮಾನ್ಯರಲ್ಲಿ   ಮಧುಮೇಹದ ಬಗ್ಗೆ  ಇರುವ ತಪ್ಪು ಕಲ್ಪನೆ ಗಳನ್ನು ದೂರ ಮಾಡ ಬೇಕಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡ ಬೇಕಾಗಿದೆ. ಶುಗರ್ ಬಂತೆಂದು ಮಾನಸಿಕವಾಗಿ ಕುಗ್ಗ ಬೇಕಾಗಿಲ್ಲ. ಸರಿಯಾದ ಆಹಾರ ಕ್ರಮ , ದಿನನಿತ್ಯ ವ್ಯಾಯಾಮಗಳನ್ನು ಮಾಡುತ್ತಾ ಶಿಸ್ತು ಬದ್ಧ ಜೀವನ ಕ್ರಮವನ್ನು ಅನುಸರಿಸಿದಾಗ ಸಾಮಾನ್ಯ ಆರೋಗ್ಯವಂತರಂತೆ ಜೀವನ ಸಾಗಿಸ ಬಹುದು.
ಬರಹ: ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು
February 20, 2025
7:14 AM
by: ಡಾ.ಚಂದ್ರಶೇಖರ ದಾಮ್ಲೆ
ಸೀತೆ ಪುನೀತೆ | ಅಪೂರ್ಣ ರಾಮಾಯಣ
February 12, 2025
9:44 PM
by: ಡಾ.ಚಂದ್ರಶೇಖರ ದಾಮ್ಲೆ
ದೆಹಲಿ ಚುನಾವಣೆ “ರಾಜಕೀಯ ಅಹಂಕಾರ”ಕ್ಕೆ ಉತ್ತರ | ರಚನಾತ್ಮಕ ವಿಪಕ್ಷವಾಗಿ ಕೆಲಸ ಮಾಡಬಹುದೇ ಎಎಪಿ..?
February 8, 2025
9:29 PM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆಯ ಹಳದಿ ಎಲೆ ರೋಗದ ಖಾಯಂ ನಿವಾರಣೆಗಾಗಿ ಯೋಜನೆ ಅನುಷ್ಟಾನಗೊಳ್ಳುತ್ತದೆ ಎಂಬ ಭರವಸೆ ಇರಲಿ
February 7, 2025
12:15 AM
by: ರಮೇಶ್‌ ದೇಲಂಪಾಡಿ

You cannot copy content of this page - Copyright -The Rural Mirror