ಮನಸು ಬದಲಾಗಿದೆ, ಕನಸು ಕೈ ಹಿಡಿದಿದೆ

Advertisement
Advertisement
Advertisement

ಇಂದಿನ ಮಗಳು ಬದಲಾಗಿದ್ದಾಳೆ  . ಅವಳ ಬದುಕು ಮೊದಲಿನಂತಿಲ್ಲ,  ಅವಳೇ ಹಾಗೆ ,ಅವಳ ಸ್ಟೈಲೇ ಹಾಗೆ. ಇದ್ದೂ ಇಲ್ಲದಂತೆ. ಮಾಡಿಯೂ ಮಾಡದಂತೆ, ಕಂಡು ಕಾಣದಂತೆ ಬದುಕುವುದು ಅಭ್ಯಾಸವಾಗಿಬಿಟ್ಟಿದೆ. ಆಕೆಯನ್ನು ಕೆಸುವಿನೆಲೆಯ ಮೇಲಿನ ನೀರಿಗೆ ಹೋಲಿಸಿ ಬಿಡಬಹುದು. ಅದಕ್ಕೂ ಪ್ರತಿಕ್ರಿಯಿಸುವುದಿಲ್ಲ. ಯಾರು ಏನೇ ಹೇಳಿದರು ನಾನು ಇರುವುದೇ ಹೀಗೆ ಎಂದು, ತಮಗೆ ಅನ್ನಿಸಿದಂತೆ ಬದುಕುವ ಛಾತಿ ಕೆಲವರಿಗೆ ಮಾತ್ರ ಸಾಧ್ಯ.

Advertisement
ಅವಳು ಯಾವುದನ್ನೂ ಹಾಳು ಮಾಡುವ ಜಾಯಮಾನದವಳಲ್ಲ, ಸಮಯವನ್ನೂ ಕೂಡ. ಹೇಗೆ ಹೇಳುವಳೋ ಹಾಗೇ ನಡೆಯುವಳು. ಓದಿ ಬರೆಯುವುದನ್ನು ಸಮಯಕ್ಕೆ ಸರಿಯಾಗಿ ಮಾಡುತ್ತ  ಇತರ ಕೆಲಸಗಳನ್ನು ಪೂರೈಸಲು ಸಜ್ಜಾಗುವಳು. ಬದುಕಿನ ಆವಶ್ಯಕತೆಯ ಬಗ್ಗೆ ಸ್ಪಷ್ಟವಾಗಿ ಯೋಚಿಸಿ ಯೋಜನೆಯಂತೆ ನಡೆಯಬಲ್ಲಳು. ಎಲ್ಲಿ ಯಾವಾಗ ಹೇಗೆ ಪ್ರತಿಕ್ರಿಯಿಸಬೇಕೆಂಬ ಕನಿಷ್ಟ ಜ್ಞಾನ ಆಕೆಗಿದೆ.
ಒಳ್ಳೆಯ ಗುಣವನ್ನು ಯಾರಿಂದಲೂ ಕಲಿಯಬಹುದು.  ಆದರ್ಶ ಗುಣಗಳು ಯಾರಲ್ಲೂ ಇರಬಹುದು. ಅದಕ್ಕೆ ದೊಡ್ಡ ಸಣ್ಣವರೆಂದೇನಿಲ್ಲ. ಕೆಲವೊಮ್ಮೆ ಪುಟ್ಟ ಮಕ್ಕಳೂ ದೊಡ್ಡವರಿಗೆ ಬುದ್ಧಿ ಕಲಿಸುತ್ತಾರೆ. ಯಾರು ಕಲಿಸಿದರೇನು ಕಲಿಯಲು ಮನಸ್ಸು ಬೇಕಷ್ಟೇ ಎಂಬ  ಜಾಯಮಾನದವಳಿವಳು.
ಬದುಕು ಸುಲಲಿತವಾಗಿರಬೇಕಾದರೆ ಎಲ್ಲಾವನ್ನೂ ತಿಳಿದಿರಬೇಕು. ಮನೆಯ ಒಳಗಿನ ಕೆಲಸವನ್ನು ಹೇಗೆ ಸರಾಗವಾಗಿ ನಿಭಾಯಿಸುತ್ತೇವೆಯೋ ಹೊರ ಪ್ರಪಂಚವನ್ನು ಅಷ್ಟೇ ಚೆನ್ನಾಗಿ ನಿರ್ವಹಿಸುವ ತಾಕತ್ತು ಇದ್ದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ಜಾಣ್ಮೆ ಇದ್ದಲ್ಲಿ ಯಾರಿಗೂ ಹೆದರಬೇಕಾದ್ದಿಲ್ಲ ಎಂಬುದನ್ನು ಗಾಢವಾಗಿ ನಂಬುವವಳು ಇಂದಿನ ಹೆಣ್ಣುಮಗಳು.
ಕನಸು ಯಾರಿಗಿಲ್ಲ ಹೇಳಿ, ಹುಟ್ಟಿದ ಮಗುವೂ ನಿದ್ದೆಯಲ್ಲಿ ನಗುತ್ತದೆ. ತೊದಲು ನುಡಿಯುವ ಮಗುವೂ ಹಿರಿಯರ ಮಾತನ್ನು ಅನುಕರಣೆ‌ ಮಾಡುತ್ತದೆ, ನಡೆಯುವುದರ ನೋಡಿ ತಾನು ಹೆಜ್ಜೆ ಯ ಮೇಲೆ ಹೆಜ್ಜೆ ಇಡುತ್ತದೆ. ವೈದ್ಯರನ್ನು ನೋಡಿ ಅಪ್ಪನ ಬಿಳಿ ಶರ್ಟ್ ನ್ನು ಹಾಕಿ ಡಾಕ್ಟರಂತೆ ಅಭಿನಯಿಸಿ ಖುಷಿಪಡೆಯುತ್ತದೆ. ಅಮ್ಮನ ಸೀರೆಯುಟ್ಟು ಟೀಚರಂತೆ ಪಾಠ ಮಾಡಲಾರಂಭಿಸಿ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಪಾತ್ರೆಗಳನ್ನೆಲ್ಲಾ ತನ್ನ ಸುಪರ್ದಿಗೆ ತೆಗೆದುಕೊಂಡು ಅಮ್ಮ ನಂತೆ ಅಡುಗೆ ಮಾಡುವ ಮಗಳು, ಅಚ್ಚರಿಗೆ ಕಾರಣವಾಗುತ್ತಾಳೆ. ಆಕಾಶದಲ್ಲಿ ಹಾರುವ ವಿಮಾನ ಗಳ ನಿಯಂತ್ರಣ ನನ್ನ ಕೈಯಲ್ಲಿ ಇದ್ದರೆ ಹೇಗೆ ಎಂಬ ಯೋಚನೆಗಳು ಬದುಕಿನ ಬದಲಾದ ಅವಕಾಶವನ್ನು ತೋರಿಸುತ್ತದೆ. ಇಂದಿನ ಮಕ್ಕಳು ಆದರ್ಶವಾಗಿ ತೆಗೆದುಕೊಳ್ಳುವುದು ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್, ಸೈನಾ ನೆಹವಾಲ್, ಸಿಂಧು ,ಸಿನಿಮಾ ‌ ನಟಿಯರನ್ನು ಆದರ್ಶ ವಾಗಿ ತೆಗೆದುಕೊಳ್ಳುವ ಕಾಲ ದೂರವಾಗಿ ಬದುಕಿನ ರಿಯಲ್ ಹೀರೋಗಳ ಜೀವನ ಚರಿತ್ರೆ ಗಳನ್ನು ಅನುಸರಿಸಲಾಗುತ್ತಿರುವುದು ಸಮಾಜದ ಒಳ್ಳೆಯ ಬದಲಾವಣೆ. ಇಂದು ಕಂಡ ಕನಸು ನನಸು ಮಾಡಲು ಅವಕಾಶಗಳು ಹಲವು. ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವುದು ದೂರದ ಮಾತಲ್ಲ. ಹಿಂದೆ ಅಲ್ಲಿ ಇಲ್ಲಿ ಸಾಲ ಮಾಡಿ ಸಮಯಕ್ಕೆ ಕಟ್ಟಲಾಗದೆ ಸೂರು ಕಳೆದುಕೊಂಡವರೆಷ್ಟೋ. ಆದರೆ ಈಗ ಸರಿಯಾಗಿ ಪ್ಲಾನ್ ಮಾಡಿ ,ಮುಂದಾಲೋಚನೆಯಿಂದ ಮುನ್ನಡೆಯುವವರಿಗೆ  ಹಲವು ಬಗೆಯ ಅವಕಾಶ ಗಳಿವೆ. ಇಂದು ಸರಕಾರವು ಸ್ವಯಂ ಉದ್ಯೋಗ ಕ್ಕೆ ಉತ್ತೇಜನ ಕೊಡುವ ಹಲವು ಯೋಜನೆ ಗಳನ್ನು ಹಮ್ಮಿಕೊಂಡು ನಿರುದ್ಯೋಗ ಸಮಸ್ಯೆ ನಿವಾರಿಸುವತ್ತ ಹೆಜ್ಜೆಯಿರಿಸಿದೆ. ಹಾಗಾಗಿ ಹಲವರ ಕನಸುಗಳು ನನಸಾಗಿವೆ.
ಬದುಕು ನಾವೆಣಿಸಿದಂತೆ ನಡೆಯುತ್ತಿದೆ ಎಂದುಕೊಳ್ಳುತ್ತಿದ್ದಂತೆ ಮಗ್ಗುಲು ಬದಲಿಸಿ ಇನ್ನಯ್ಯಾವುದೋ ಮಾರ್ಗ ಹಿಡಿಯುತ್ತದೆ.   ಗೆಲುವೆಂಬುದು ಕೈಗೆಟುಕದೇನೋ  ಎಂದು ಮನಸು ಅಳುತ್ತಿರುತ್ತದೆ .ಆಸೆ ಮನಸ ಲಿರುತ್ತದೆ. ನನಸಾಗುವ ಯಾವ ಲಕ್ಷಣಗಳು ಗೋಚರಿಸುವುದಿಲ್ಲ. ಕೆಲವೊಮ್ಮೆ ಧಿಡೀರ್ ಬದಲಾವಣೆ ಗಳು ಮನಸಿನ ಕನಸನ್ನು ದಿಟವಾಗಿಸುತ್ತದೆ. ಮನಸು ಗಟ್ಟಿಯಾಗಿದ್ದು ಗುರಿಯೊಂದೇ ಮುಖ್ಯ ವಾದಾಗ ಬೇರೆಲ್ಲಾ ವಿಷಯಗಳು ಗೌಣವಾಗಿ ಮುನ್ನಡೆದಾಗ ಕನಸು ಕೈಹಿಡಿಯುತ್ತದೆ.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಮನಸು ಬದಲಾಗಿದೆ, ಕನಸು ಕೈ ಹಿಡಿದಿದೆ"

Leave a comment

Your email address will not be published.


*