ಕೊಲ್ಲಮೊಗ್ರ: ಮಂಗಳವಾರ ಸಂಜೆ ಮಡಿಕೇರಿ ಹಾಗೂ ಕಡಮಕಲ್ ಪ್ರದೇಶದ ಕಾಡಿನಲ್ಲಿ ಮಳೆ ಸುರಿದ ಪರಿಣಾಮವಾಗಿ ಹೊಳೆಯಲ್ಲಿ ದಿಢೀರ್ ಭಾರಿ ಪ್ರಮಾಣದ ಕೆಂಪು ನೀರು ಬಂದಿದೆ. ಆದರೆ ಕೊಲ್ಲಮೊಗ್ರ ಸೇರಿದಂತೆ ಆಸುಪಾಸಿನಲ್ಲಿ ಅಷ್ಟೊಂದು ಮಳೆ ಇದ್ದಿರಲಿಲ್ಲ. ಮಂಗಳವಾರ ಸಂಜೆ ಇದ್ದಕ್ಕಿದ್ದಂತೆ ನೆರೆ ಮಾದರಿಯಲ್ಲಿ ನೀರು ಬಂದಿದೆ. ಹೀಗಾಗಿ ಜನರಿಗೆ ಅಚ್ಚರಿಗೆ ಕಾರಣವಾಯಿತು. ಕಳೆದ ವರ್ಷ ಭಾರೀ ಮಳೆಯ ಕಾರಣದಿಂದ ಕಡಮಕಲ್ ಪ್ರದೇಶದಲ್ಲಿ ಭೂಕುಸಿತ ಸೇರಿದಂತೆ ಅರಣ್ಯದ ಒಳಗೆ ಅಪಾರ ಹಾನಿಯಾಗಿತ್ತು.
ಬುಧವಾರ ಮುಂಜಾನೆ ಕೂಡಾ ತುಂತುರು ಮಳೆಯಾಗುತ್ತಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ, ವಿಶೇಷ ಲೇಖನ , ಅಂಕಣ, ವಿಶೇಷ ವರದಿಗಳು , ರಾಜಕೀಯ ವಿಶ್ಲೇಷಣೆ, ದಿನದ ಫೋಕಸ್ ಸ್ಟೋರಿ, ದಿನದ ಚಿತ್ರ, ವಾರದ ವ್ಯಕ್ತಿ , ಜಿಲ್ಲೆ, ರಾಜ್ಯ, ರಾಷ್ಟ್ರೀಯ ಪ್ರಮುಖ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕಡಮಕಲ್ ಹೊಳೆಯಲ್ಲಿ ದಿಢೀರ್ ಕೆಂಪು ನೀರು…!"