ಮಳೆಗಾಲದ ಆರಂಭ ಖುಷಿಯಲ್ಲಿ ಮೈಮರೆಯಬಾರದು , ಇರಬೇಕು ಮುಂಜಾಗ್ರತೆ

Advertisement

ಸುಳ್ಯ: ವಿಳಂಬವಾಗಿ ಮುಂಗಾರು ಆರಂಭವಾಯಿತು. ಮಳೆ ಬರುವ ನಿರೀಕ್ಷೆ, ಕಾತರ , ಹಂಬಲ ಎಲ್ಲವೂ ಇತ್ತು. ಕೊನೆಗೂ ಮಳೆ ಬಂತು. ಖುಷಿಯಾಯ್ತು. ಇದೇ ಖುಷಿಯಲ್ಲಿ  ಇನ್ನೀಗ ಮುಂಜಾಗ್ರತೆಯೂ ಅಗತ್ಯವಾಗಿದೆ. ಬಂಟ್ವಾಳದಲ್ಲಿ ವಿದ್ಯುತ್ ಶಾಕ್ ಗೆ ಇಬ್ಬರು ಬಲಿಯಾದರು, ಸುಬ್ರಹ್ಮಣ್ಯದಲ್ಲಿ ಮರದ ಗೆಲ್ಲು ಬಿದ್ದು ವ್ಯಕ್ತಿಯೊಬ್ಬರಿಗೆ ಗಾಯವಾಗಿದೆ. ಮಡಿಕೇರಿ ಬಳಿ ಬೈಕ್ ಸ್ಕಿಡ್ ಆಗಿ ಯುವಕನಿಗೆ ಗಾಯವಾಗಿದೆ. ಹೀಗಾಗಿ ಮಳೆಗಾಲ ಮುಂಜಾಗ್ರತೆ ಹೆಚ್ಚಾಗಿ ಬೇಕಾಗಿದೆ.

Advertisement

ಮಡಿಕೇರಿಯಲ್ಲಿ  ಜಿಲ್ಲಾಡಳಿತವು ಮುಂಜಾಗ್ರತಾ ಸಭೆ  ನಡೆಸಿದೆ. ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹವಾಮಾನದ ಬದಲಾವಣೆ ಕುರಿತು ನಿರಂತರ ನಿಗಾವಹಿಸಿದ್ದು, ಭಾರೀ ಮಳೆ ಅಥವಾ ನೈಸರ್ಗಿಕ ವಿಕೋಪದ ಮನ್ಸೂಚನೆ ಇದ್ದಲ್ಲಿ ಜಿಲ್ಲಾಡಳಿತ ಅಧಿಕೃತವಾಗಿ ಮಾಹಿತಿ ನೀಡಲಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಟ್ಟು ಆತಂಕಕ್ಕೆ ಒಳಗಾಗಬಾರದೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್  ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Advertisement
Advertisement

ಮಡಿಕೇರಿಯಲ್ಲಿ  ಜೂ.13ರವರೆಗೆ ಭಾರೀ ಮಳೆ ಮತ್ತು ಗಾಳಿ ಇರಲಿದೆಯೆಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ. ಜೂ.14 ರಿಂದ 20ರವರೆಗೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆಯಾದರು, ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಜೂ.20 ರ ನಂತರ ಜಿಲ್ಲೆಯಲ್ಲಿ ಮತ್ತೆ ಮುಂಗಾರುಮಳೆ ಚುರುಕುಗೊಳ್ಳಲಿದ್ದು, ಸಾರ್ವಜನಿಕರು ಯಾವುದೇ ಪ್ರಾಕೃತಿ ವಿಕೋಪ ಸಮಸ್ಯೆಗಳು ಎದುರಾದಲ್ಲಿ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ- ಕಂಟ್ರೋಲ್ ರೂಂ 1077, ವಾಟ್ಸ್ ಅಪ್ ನಂಬರ್ 8550001077.

ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಮಲೆನಾಡು, ಕರಾವಳಿ ಭಾಗಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ  ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ಸೂಚನೆ ನೀಡಿದ್ದಾರೆ.ಕಳೆದ ವರ್ಷ ಮಳೆಗಾಲದಲ್ಲಿ ಕೊಡಗು ಸೇರಿದಂತೆ ಮಲೆನಾಡು, ಕರಾವಳಿ ಭಾಗಗಳಲ್ಲಿ ಭಾರೀ ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲಿ ಈ ಬಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚಿನೆ ನೀಡಿದರು.

Advertisement

 

ಮಳೆಗಾಲದ ಆರೋಗ್ಯದ ಮೇಲಿರಲಿ ನಿಗಾ :

Advertisement

ಮಳೆಗಾಲದಲ್ಲಿ ಪ್ರತೀ ವರ್ಷ ಮಲೇರಿಯಾ, ಚಿಕೂನ್‌ಗುನ್ಯಾ, ಹೆಪಟೈಟೀಸ್ ಎ, ಡೆಂಗ್ಯು  ಸೇರಿದಂತೆ ವೈರಲ್ ಫಿವರ್ ಸಾಮಾನ್ಯವಾಗಿರುತ್ತದೆ. ಹೀಗಾಗಿ ಯಾವುದೇ ಆರೋಗ್ಯದ ಸಮಸ್ಯೆ ಬಗ್ಗೆಯೂ ತಕ್ಷಣ ಮುಂಜಾಗ್ರತೆ ಅಗತ್ಯವಾಗಿದೆ. 2-3 ದಿನ ಜ್ವರ ಇದ್ದರೆ ತಕ್ಷಣವೇ ರಕ್ತ ಪರೀಕ್ಷೆ ಮಾಡಿದಿ ಖಚಿತ ಪಡಿಸಿಕೊಳ್ಳುವುದು  ಉತ್ತಮ. ಆರೋಗ್ಯ ಇಲಾಖೆಯೂ ಈ ಬಗ್ಗೆ ಕಾಳಜಿ ವಹಿಸಿದೆ. ಮಳೆಗಾಲದಲ್ಲಿ ಬರುವ ಕಾಯಿಲೆಗಳ ಮೂಲ ನೀರು. ಮುಂಗಾರಿನ ಆರಂಭ ಸೊಳ್ಳೆಗಳ ಸಂತಾನಾಭಿವೃದ್ಧಿಯ ಪರ್ವ ಕಾಲ. ಸಾಮಾನ್ಯವಾಗಿ ನಿಂತ ನೀರಲ್ಲಿ ಸೊಳ್ಳೆಗಳು ವೃದ್ಧಿಯಾಗುತ್ತವೆ. ಇದರಿಂದ ಮಲೇರಿಯಾ, ಡೆಂಗ್ಯು ಚಿಕೂನ್‌ಗುನ್ಯಾದಂತಹ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತದೆ. ಇದರ ಜೊತೆಗೆ  ನೆಗಡಿ, ಜ್ವರ ಕಾಣಿಸಿಕೊಳ್ಳುತ್ತದೆ.

ಅನಾಫಿಲೀಸ್ ಸೊಳ್ಳೆಯಿಂದ ಮಲೇರಿಯಾ ಬರುತ್ತದೆ. ಚಳಿಜ್ವರ, ರಕ್ತಹೀನತೆ, ಸುಸ್ತು, ತಲೆನೋವು, ವಾಂತಿ ಮಲೇರಿಯಾದ ಲಕ್ಷಣಗಳು.

Advertisement

ಡೆಂಗ್ಯು ಈಡೀಸ್ ಸೊಳ್ಳೆಯಿಂದ ಬರುತ್ತದೆ. ಮೈಕೈ ನೋವು, ಕೀಲು ನೋವು, ವಾಂತಿ, ತೀವ್ರ ಜ್ವರ ಇತ್ಯಾದಿ ಲಕ್ಷಣಗಳು.

 

Advertisement

 

 

Advertisement

 

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಮಳೆಗಾಲದ ಆರಂಭ ಖುಷಿಯಲ್ಲಿ ಮೈಮರೆಯಬಾರದು , ಇರಬೇಕು ಮುಂಜಾಗ್ರತೆ"

Leave a comment

Your email address will not be published.


*