ಮಳೆಹಾನಿ ಪರಿಹಾರ : ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಸಂತ್ರಸ್ತರು, ಬಿಜೆಪಿ ಪ್ರಮುಖರು

Advertisement

ಮಡಿಕೇರಿ : ಪಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಅದೇ ಗ್ರಾಮ ವ್ಯಾಪ್ತಿಯಲ್ಲಿ ಮನೆಗಳನ್ನು ನಿರ್ಮಿಸಿ ಕೊಡಬೇಕು ಮತ್ತು ಸಂತ್ರಸ್ತರ ಖರ್ಚು, ವೆಚ್ಚವನ್ನು ಸಧ್ಯದ ಮಟ್ಟಿಗೆ ಸರಕಾರವೇ ಭರಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಪ್ರಮುಖರು ಹಾಗೂ ಕೊಡಗು ಪ್ರಕೃತಿ ವಿಕೋಪ ಸಂತ್ರಸ್ತರ ಹೊರಾಟ ಸಮಿತಿಯ ಅನೇಕರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂತ್ರಸ್ತರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಜಿಲ್ಲಾ ಬಿಜೆಪಿ ಹಾಗೂ ಕೊಡಗು ಪ್ರಕೃತಿ ಹೊರಾಟ ಸಮಿತಿ ಮಳೆಗಾಲ ಆರಂಭಕ್ಕೂ ಮೊದಲು ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸುವಂತೆ ಒತ್ತಾಯಿಸಿದರು. ಮಹಾಮಳೆಯಿಂದ ಸಂತ್ರಸ್ತರಾದವರಿಗೆ ಸಮರ್ಪಕವಾಗಿ ಯಾವುದೇ ಪರಿಹಾರ ವ್ಯವಸ್ಥೆಯನ್ನು ಕಲ್ಪಿಸಿಲ್ಲ ಎಂದು ಆರೋಪಿಸಿದ ಬಿಜೆಪಿ ಪ್ರಮುಖರು ತೀವ್ರ ಹಾನಿಗೊಳಗಾದ 8 ಗ್ರಾ.ಪಂ ವ್ಯಾಪ್ತಿಯ ಸಂತ್ರಸ್ತರ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿದರು.ಸರಕಾತಕ್ಷಣ 8 ಪಂಚಾಯತ್ ವ್ಯಾಪ್ತಿಗೆ ಒಳಪಡುವ ಸಂತ್ರಸ್ತರ ಬೆಳೆಸಾಲ, ಕೃಷಿ ಅಭಿವೃದ್ಧಿ ಸಾಲ, ಯಂತ್ರೋಪಕರಣಗಳ ಮೇಲಿನ ಸಾಲ, ವಿದ್ಯಾಭ್ಯಾಸ ಸಾಲ, ತೋಟದ ಮನೆ ನಿರ್ಮಾಣದ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಕೆಲವು ಸಂತ್ರಸ್ತರು ಅಪಾಯದ ವಲಯದಲ್ಲಿ ವಾಸಿಸುತ್ತಿದ್ದು, ಬೇರೆಡೆಗೆ ಸ್ಥಳಾಂತರಗೊಳ್ಳಲು ಹಾಗೂ ಬೇರೆಡೆ ಬಾಡಿಗೆ ಮನೆ ಪಡೆಯಲು ಬೇಕಾದ ಮುಂಗಡ ಗಣ ಮತ್ತು ಪ್ರತಿ ತಿಂಗಳ ಬಾಡಿಗೆ ಮೊತ್ತವನ್ನು ಸರಕಾರ ನೀಡಬೇಕೆಂದು ಮನವಿ ಮಾಡಿದರು.

Advertisement
Advertisement

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಂತ್ರಸ್ತರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದೆ. ಮಳೆಗಾಲಕ್ಕೆ ಮೊದಲೇ ಮನೆಗಳನ್ನು ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಸುರಕ್ಷತೆಯ ದೃಷ್ಟಿಯಿಂದ ಗುಣಮಟ್ಟದ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಜಿಲ್ಲಾಡಳಿತ ಸೂಚಿಸುವ ಸ್ಥಳದಲ್ಲಿ ಮನೆಗಳನ್ನು ಪಡೆದುಕೊಳ್ಳುವುದು ಸೂಕ್ತವೆಂದು ಸಂತ್ರಸ್ತರ ಮನವೊಲಿಸುವ ಪ್ರಯತ್ನ ಮಾಡಿದರು.

ಹೋರಾಟ ಸಮಿತಿಯ ಮುಖಂಡ ಎಂ.ಬಿ.ದೇವಯ್ಯ, ಜಿಲ್ಲಾ ಬಿಜೆಪಿ ವಕ್ತಾರ ನಾಪಂಡ ರವಿಕಾಳಪ್ಪ, ಪ್ರಧಾನ ಕಾರ್ಯದರ್ಶಿಗಳಾದ ರವಿಕುಶಾಲಪ್ಪ, ಕಾಂತಿಸತೀಶ್, ವಿ.ಕೆ.ಲೋಕೇಶ್, ಗಾಳಿಬೀಡು ಪಂಚಾಯತ್ ಅಧ್ಯಕ್ಷ ಸುಭಾಷ್ ನಾಣಯ್ಯ ಹಾಗೂ ಸಂತ್ರಸ್ತರು ಹಾಜರಿದ್ದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಮಳೆಹಾನಿ ಪರಿಹಾರ : ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಸಂತ್ರಸ್ತರು, ಬಿಜೆಪಿ ಪ್ರಮುಖರು"

Leave a comment

Your email address will not be published.


*