ಬೆಳ್ಳಾರೆ: ಮಳೆಯೇ ಬಾ…. ಬಾ ಮಳೆಯೇ ಬಾ…. ಈ ಪ್ರಾರ್ಥನೆ ಒಂದು ಕಡೆಯಾದರೆ , ನಾಡಿನಲ್ಲಿ ಸಮೃದ್ಧ ಮಳೆಯಾಗಲಿ, ಕೃಷಿ ಉಳಿಯಲಿ, ಕುಡಿಯುವ ನೀರು ಬರಲಿ…!. ಈಗ ಎಲ್ಲೆಡೆಯೂ ಇದೇ ಪ್ರಾರ್ಥನೆ.
ಹೀಗಾಗಿ ಸಾಮಾಜಿಕ ಹಿತದೃಷ್ಠಿಯಿಂದ, ನಾಡಿನ ನೆಮ್ಮದಿಗಾಗಿ ಊರ ಭಕ್ತರು ಹಾಗು ಪೆರುವಾಜೆಯ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಜಲದುರ್ಗಾ ದೇವಿಗೆ 108 ಸೀಯಾಳ ಅಭಿಷೇಕ ನಡೆಯಿತು.ಪೂಜಾ ನೇತೃತ್ವವನ್ನು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ವಹಸಿದ್ದರು.
ಪೂಜಾ ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಭೋಜರಾಜ ಶೆಟ್ಟಿ, ಕರುಣಾಕರ ಗೌಡ ಪೆರುವಾಜೆಗುತ್ತು, ಸಚಿನ್ರಾಜ್ ಶೆಟ್ಟಿ, ಶಶಿಕಾಂತ್ ರಾವ್, ಕಸ್ತೂರಿನಾಥ ಶೆಟ್ಟಿ ಪೆರುವಾಜೆಗುತ್ತು, ಮೋನಪ್ಪ ಪೂಜಾರಿ, ದೇವರಾಜ್ ಆಳ್ವ, ಮಹಾಬಲ ರೈ, ವಸಂತ ಆಚಾರ್ಯ, ಸುಂದರ ಗೌಡ ಕೊಡಿಯಾಲ ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel