ಸುಳ್ಯ: ಮಹಾತ್ಮಾಗಾಂಧಿಗೆ ಸರಿಸಾಟಿಯಾವರು ದೇಶದಲ್ಲಿ ಮಾತ್ರವಲ್ಲ ಈ ಜಗತ್ತಿನಲ್ಲಿಯೇ ಯಾರೂ ಇಲ್ಲ. ಆದುದರಿಂದ ಗಾಂಧೀಜಿಯವರ ತತ್ವ, ಆದರ್ಶ ಮತ್ತು ಚಿಂತನೆಗಳು ಎಲ್ಲೆಡೆ ಪಸರಿಸಬೇಕು ಎಂಬ ಉದ್ದೇಶದಿಂದ ಅ.ಎರಡರಂದು ಕಾಂಗ್ರೆಸ್ ವತಿಯಿಂದ ಮಂಗಳೂರಿನಲ್ಲಿ ಗಾಂಧಿನಡಿಗೆ ಹಮ್ಮಿಕೊಳ್ಳಲಾಗಿದೆ. ಇದರ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗು ವಿಧಾನಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಹೇಳಿದ್ದಾರೆ.
ಗಾಂಧಿನಡಿಗೆ ಕುರಿತು ಚರ್ಚಿಸಲು ಸುಳ್ಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಅ.2 ರಂದು ಅಪರಾಹ್ನ.2.30ಕ್ಕೆ ಮಂಗಳಾ ಕ್ರೀಡಾಂಗಣದಿಂದ ಆರಂಭಗೊಂಡು ಪುರಭವನದವರೆಗೆ ನಗರದಲ್ಲಿ ಬೃಹತ್ ಗಾಂಧಿನಡಿಗೆ ಆಯೋಜಿಸಲಾಗಿದೆ. ಎಲ್ಲರೂ ಶ್ವೇತ ವಸ್ತ್ರ ಧರಿಸಿ ನಡಿಗೆಯಲ್ಲಿ ಭಾಗವಹಿಸಬೇಕು. ಒಂದರ ಹಿಂದೆ ಒಂದರಂತೆ ಪ್ರತಿ ಬ್ಲಾಕ್ ಗಳ ನಾಯಕರು ಕಾರ್ಯಕರ್ತರು ನಡಿಗೆಯಲ್ಲಿ ಭಾಗವಹಿಸಬೇಕು. ಆರನೆಯದಾಗಿ ಸುಳ್ಯ ಬ್ಲಾಕ್ ಭಾಗವಹಿಸಬೇಕು ಎಂದು ಸೂಚನೆ ನೀಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ, ಎಂ.ವೆಂಕಪ್ಪ ಗೌಡ, ದಿವ್ಯಪ್ರಭಾ ಚಿಲ್ತಡ್ಕ, ಡಾ.ಬಿ.ರಘು, ರಾಜೀವಿ ರೈ, ಎಸ್.ಸಂಶುದ್ದೀನ್, ಚಂದ್ರಶೇಖರ ಕಾಮತ್, ಪಿ.ಸಿ.ಜಯರಾಮ, ಮಹಮ್ಮದ್ ಆಲಿ, ವಿಜಯಕುಮಾರ್ ರೈ, ಕಳಂಜ ವಿಶ್ವನಾಥ ರೈ, ಪಿ.ಎಸ್.ಗಂಗಾಧರ, ಅಶೋಕ್ ನೆಕ್ರಾಜೆ, ತೀರ್ಥರಾಮ ಜಾಲ್ಸೂರು, ಕೆ.ಎಂ.ಮುಸ್ತಪಾ, ಅನುಸೂಯ, ಲೀಲಾ ಮನಮೋಹನ್, ಲಕ್ಷ್ಮಿ ಸುಬ್ರಹ್ಮಣ್ಯ, ಬೀರಾಮೊಯ್ದೀನ್, ಸಿದ್ದಿಕ್ ಸುಳ್ಯ, ಶಾಫಿ ಕುತ್ತಮೊಟ್ಟೆ, ಭವಾನಿಶಂಕರ ಕಲ್ಮಡ್ಕ, ಲಕ್ಷ್ಮಣ ಶೆಣೈ, ಸುಧೀರ್ ರೈ ಮೇನಾಲ, ಪ್ರವೀಣಾ ಮರುವಂಜ, ಶ್ರೀಲತಾ ಪ್ರಸನ್ನ, ಸುಜಯಾ ಕೃಷ್ಣ, ಅನಿಲ್ ರೈ, ಸಚಿನ್ ರಾಜ್ ಶೆಟ್ಟಿ, ಶ್ರೀಹರಿ ಕುಕ್ಕುಡೇಲು, ನಂದರಾಜ ಸಂಕೇಶ, ಮತ್ತಿತರರು ಉಪಸ್ಥಿತರಿದ್ದರು.
ಸುಳ್ಯ ಬ್ಲಾಕ್ ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಗಾಂಧಿನಡಿಗೆಯಲ್ಲಿ ಭಾಗವಹಿಸಲು ನಿರ್ಧರಿಸಲಾಯಿತು.