ಕಳೆದ 3 ದಿನಗಳಿಂದ ಮಹಾಮಳೆ. ದಕ್ಷಿಣ ಕನ್ನಡ ಸೇರಿದಂತೆ ಕೊಡಗು, ಉಡುಪಿ ಜಿಲ್ಲೆಗಳಲ್ಲಿ ಸಣ್ಣಪುಟ್ಟ ಸಂಕಷ್ಟ ಎದುರಾಯಿತು. ಜಿಲ್ಲಾಡಳಿತ, ತಾಲೂಕು ಆಡಳಿತ ತಕ್ಷಣವೇ ಕಾರ್ಯಪ್ರವೃತ್ತವಾಯಿತು. ಆಡಳಿತದ ಜೊತೆ ವಿವಿಧ ಸಂಘಸಂಸ್ಥೆಗಳೂ ಕೈಜೋಡಿಸಿದವು. ಸುಳ್ಯದಲ್ಲಿ ಯುವಬ್ರಿಗೆಡ್ , ವಿಶ್ವಹಿಂದೂ ಪರಿಷದ್ , ವಿಖಾಯ ತಂಡ, ಎಸ್ ಎಸ್ ಎಫ್, ಸೇರಿದಂತೆ ವಿವಿಧ ಸಂಘಟನೆಗಳು ತುರ್ತು ಸೇವೆಗಾಗಿ ಸಿದ್ಧರಾದರು. ಕರೆದಲ್ಲಿಗೆ ಬರುವುದಾಗಿ ಹೇಳಿದರು. ಅದಕ್ಕೆ ಬೇಕಾದ ತಂಡವನ್ನೂ ಸಿದ್ಧ ಮಾಡಿದ್ದರು. ಈ ಕಡೆಗೆ ನಮ್ಮ ಬೆಳಕು…
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಗಾಳಿ ಸಹಿತ ಬುಧವಾರ ಮಳೆ ಇದೆ. ಬೆಳಗ್ಗಿನಿಂದಲೇ ಮಳೆಯಾಗುತ್ತಿದೆ. ಈ ನಡುವೆ ಸುಳ್ಯ ತಾಲೂಕು ಆಡಳಿತ ಮಳೆ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದೆ. ಬುಧವಾರ ಸಾರ್ವಜನಿಕರ ಸಭೆ ಕೂಡಾ ನಡೆಯಲಿದೆ. ಈ ನಡುವೆ ಸುಳ್ಯ ತಾಲೂಕಿನ ವಿವಿಧ ಸಂಘಟನೆಗಳೂ ತಾಲೂಕು ಆಡಳಿತದ ಜೊತೆ ಕೈಜೋಡಿಸಲಿದೆ. ಶಾಸಕ ಅಂಗಾರ ವಿವಿದೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಳ್ಯದ ಯುವಬ್ರಿಗೆಡ್ ಸದಾ ಸಮಾಜಮುಖಿ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇವರ ತಂಡದ 22 ಯುವಕರು ಸರ್ವ ರೀತಿಯಿಂದಲೂ ಸಿದ್ಧವಾಗಿದ್ದು ಯಾವುದೇ ಸಂದರ್ಭದಲ್ಲಿ ತುರ್ತು ಕಾರ್ಯಕ್ಕೆ ಸಿದ್ಧರಾಗಿದ್ದೇವೆ ಎಂದು ಯುವಬ್ರಿಗೆಡ್ ಮುಖಂಡ ಶರತ್ ಪರಿವಾರ್ ಹೇಳಿದ್ದಾರೆ. ಯುವಬ್ರಿಗೆಡ ಗ್ರೂಪ್ ಮೂಲಕ ತಾಲೂಕು ಪರಿಸ್ಥಿತಿಯನ್ನು ಗಮನಿಸುತ್ತಿದೆ. ತಂಡದ ಸದಸ್ಯರು ಸ್ಥಳಿಯವಾಗಿ ಮಾಡಬಹುದಾದ ಕೆಲಸಗಳಿದ್ದರೆ, ಸಾರ್ವಜನಿಕರಿಗೆ ನೆರವು ನೀಡಬಹುದಾದರೇ ಅವರೇ ಮಾಡುತ್ತಾರೆ ಅಗತ್ಯ ಬಿದ್ದರೆ 22 ಮಂದಿಯೂ ಸೇರಿಕೊಳ್ಳಲಿದ್ದಾರೆ.
ತುರ್ತು ಸಹಾಯಕ್ಕಾಗಿ ಯುವಬ್ರಿಗೆಡ್ ಸಂಪರ್ಕ ಮಾಡಬಹುದು – ಶರತ್- 9686893808
ಮಳೆಯ ಪರಿಸ್ಥಿತಿ ಎದುರಿಸಲು ತಾಲೂಕು ಆಡಳಿತ ಸಿದ್ಧ: