ಬೆಳ್ಳಾರೆ: ಮಾಡಾವು ಸನ್ ಸ್ಟೇಶನ್ ಕಾಂಗಾರಿ ಚುರುಕಾಗಲು ವಿದ್ಯುತ್ ತಂತಿ ಎಳೆಯುವ ಕಾರ್ಯ ನಡೆಯಬೇಕಿದೆ. ಇದಕ್ಕಾಗಿ ಕೆಲವೊಂದು ಮರಗಳ ತೆರವಿಗೆ ಅರಣ್ಯ ಇಲಾಖೆ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಪುತ್ತೂರು ಅರಣ್ಯ ಇಲಾಖೆಗೆ ಜೂ.6 ರಂದು ವಿದ್ಯುತ್ ಬಳಕೆದಾರರು ಭೇಟಿ ನೀಡಲಿದ್ದಾರೆ.
ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಸರಬರಾಜು ಶೋಚನೀಯ ಸ್ಥಿತಿಯಲ್ಲಿದೆ. ಬಂಟ್ವಾಳ, ಪುತ್ತೂರು ತಾಲೂಕಿಡೀ 24 ಗಂಟೆ ಗುಣಮಟ್ಟದ ವಿದ್ಯುತ್ ಇದೆ.
ಸುಳ್ಯದಲ್ಲಿ ತೀರಾ ಕಮ್ಮಿ ವೋಲ್ಟೇಜ್ ನ ವಿದ್ಯುತ್ ಸರಬರಾಜಾಗುತ್ತಿದೆ. ನೀರಿದ್ದರೂ ತೋಟಕ್ಕೆ ನೀರು ಹಾಕಲಾಗದ ಅಸಹಾಯಕ ಸ್ಥಿತಿ . ಇದು ಪರಿಹಾರವಾಗಬೇಕಾದರೆ ಮಾಡಾವಿನಲ್ಲಿ ಸಬ್ ಸ್ಟೇಷನ್ ನಿರ್ಮಾಣವಾಗಬೇಕಿದೆ. ಈ ಸಬ್ ಸ್ಟೇಷನ್ ಗೆ ನೆಟ್ಲ ಮುಡ್ನೂರ್ ಸ್ಟೇಷನ್ ನಿಂದ ವಿದ್ಯುತ್ ಲೈನ್ ಬರಬೇಕಿರುವ ಮಾರ್ಗವಿಡೀ ಮರಗಳನ್ನು ಕಡಿಯಬೇಕಿದ್ದು ,ಅರಣ್ಯ ಇಲಾಖೆಯ ಅನುಮತಿ ಬೇಕಿದೆ. ಇದಕ್ಕಾಗಿ ಪುತ್ತೂರು ಉಪವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳನ್ನು ಒತ್ತಾಯಿಸಲು ವಿದ್ಯುತ್ ಬಳಕೆದಾರರು ಭಾಗವಹಿಸಲಿದ್ದಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮಾಡಾವು ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿ ಚುರುಕಿಗೆ ಒತ್ತಾಯ"