ಧರ್ಮಸ್ಥಳ: ಖ್ಯಾತ ನಾಟಕ ಕಲಾವಿದ ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ.
ಮಾಸ್ಟರ್ ಹಿರಣ್ಣಯ್ಯ ತಮ್ಮ ನಾಟಕಗಳಲ್ಲಿ ಧಾರ್ಮಿಕ ಮುಖಂಡರು, ಪೊಲೀಸ್ ಇಲಾಖೆ, ರಾಜಕಾರಣಿಗಳು – ಎಲ್ಲರನ್ನೂ ತಮ್ಮ ಕಟು ಮಾತುಗಳಿಂದ ಚುಚ್ಚುತ್ತಿದ್ದರು. ಕೇಳುವಾಗ ಹಾಸ್ಯದೊಂದಿಗೆ ಸ್ವಲ್ಪ ಕಠಿಣವಾಗಿ ಕಂಡರೂ ಅದರಲ್ಲಿ ಎಚ್ಚರಿಕೆಯ ಸಂದೇಶವಿತ್ತು. ಅವರ ನಿಧನದಿಂದ ಒಬ್ಬ ಒಳ್ಳೆಯ ಕಲಾವಿದ ಹಾಗೂ ಸಮಾಜ ಸುಧಾರಕನನ್ನು ಕಳೆದುಕೊಂಡಂತಾಗಿದೆ. ತನ್ನ ತಂದೆ ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರು ಬೆಂಗಳೂರಿಗೆ ಹೋದಾಗ ಮಾಸ್ಟರ್ ಹಿರಣ್ಣಯ್ಯನವರ ನಾಟಕ ನೋಡದೆ ಹಿಂದೆ ಬರುತ್ತಿರಲಿಲ್ಲ ಎಂದು ಹೆಗ್ಗಡೆಯವರು ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel