ಮಿಡತೆಗಳು ಸೃಷ್ಟಿಸಿದ ಆತಂಕ | ಕೃಷಿ ಜೊತೆಯೇ ಇದ್ದ ಮಿಡತೆಗಳೂ ಈಗ ಸಂದೇಹ….! | ಕರಾವಳಿಯಲ್ಲಿ ಮಿಡತೆ ಭಯ |

May 31, 2020
1:11 PM
ದೂರದ ಎಲ್ಲೋ ಕೃಷಿಗೆ ಮಿಡತೆ ದಾಳಿ ಮಾಡಿದೆ ಎನ್ನುವುದೂ ಈಗ ಎಲ್ಲಾ ಕಡೆಯ ಕೃಷಿಕರಿಗೆ ಆತಂಕಕ್ಕೆ ಕಾರಣವಾಗಿದೆ. ಕೊರೊನಾ ವೈರಸ್ ಎಲ್ಲೋ ಚೀನಾದಲ್ಲಿ ಕಂಡುಬಂದಿದೆ ಎನ್ನುತ್ತಲೇ ನಮ್ಮ ಸಮೀಪದ ಊರಿನಲ್ಲೂ ಈಗ ಕೊರೊನಾ ವೈರಸ್ ಕಂಡುಬಂದಿದೆ. ಹೀಗಾಗಿ ಜನರಿಗೆ , ಕೃಷಿಕರಿಗೆ ಆತಂಕ ಇದ್ದೇ ಇದೆ.  ಕರಾವಳಿ ಜಿಲ್ಲೆಗಳಲ್ಲೂ ಈಗಾಗಲೇ ಕೆಲವು ಪ್ರಬೇಧದ ಮಿಡತೆಗಳು ಕೃಷಿ ಸ್ನೇಹಿಯಾಗಿ ಬದುಕುತ್ತಿವೆ. ಈಗ ಅವುಗಳ ಮೇಲೂ ಸಂದೇಹ ಬರುವಂತಾಗಿದೆ. ಹೀಗಾಗಿ ಈ ಬಗ್ಗೆ ಸ್ಪಷ್ಟವಾದ ಅಭಿಪ್ರಾಯಗಳು, ಸೂಚನೆಗಳು ಸಂಬಂಧಿತ ಇಲಾಖೆಗಳಿಂದ ಅಗತ್ಯವಾಗಿದೆ. ಇಲ್ಲದೇ ಇದ್ದರೆ ಕೃಷಿ ಸ್ನೇಹಿ, ಪರಿಸರ ಸ್ನೇಹಿ ಮಿಡತೆಗಳಿಗೂ ಹಾನಿಯಾಗುವ ಸಂಭವ ಇದೆ. ಇದನ್ನು ತಪ್ಪಿಸಬೇಕಿದೆ. ಅಷ್ಟಕ್ಕೂ ಉತ್ತರ ಭಾರತದಲ್ಲಿ ಕಂಡುಬಂದ ಮಿಡತೆ ದಾಳಿಯ ಸ್ಟೋರಿ ಇಲ್ಲಿದೆ…..

Advertisement

ಮಂಗಳೂರು: ಅನೇಕ ವರ್ಷಗಳಿಂದ ಕೃಷಿ ಜೊತೆಯೇ ಬದುಕುತ್ತಿದ್ದ ಮಿಡತೆಗಳೂ ಈಗ ಭಯ ಹುಟ್ಟಿಸಿದೆ. ಪ್ರತೀ ವರ್ಷ ಸಹಜವಾಗಿಯೇ ಕಾಣುತ್ತಿದ್ದ ಮಿಡತೆಗಳೂ ಈಗ ಆತಂಕ ಸೃಷ್ಟಿಸಿವೆ. ಉತ್ತರ ಭಾರತದಲ್ಲಿ ಹಾವಳಿಯಾಗಿರುವ ಮಿಡಿತೆ ರಾಜ್ಯದ ಕಡೆಗೂ ಬಾರದಂತೆ ಎಚ್ಚರ ವಹಿಸಲಾಗುತ್ತಿದೆ. ಈಗಾಗಲೇ ರಾಜಸ್ಥಾನದಿಂದ, ಮಿಡತೆ ಹಿಂಡುಗಳು ಸುಮಾರು 1,000 ಕಿ.ಮೀ ದೂರವನ್ನು ಆಕ್ರಮಿಸಿದೆ.

ಅಂಫಾನ್ ಚಂಡಮಾರುತದ ಪರಿಣಾಮ ಗಾಳಿಯ ದಿಕ್ಕು ಬದಲಾದ ಹಿನ್ನೆಲೆ ಪಾಕಿಸ್ತಾನಕ್ಕೆ ಹತ್ತಿರ ಇರುವ ಗುಜರಾತ್, ರಾಜಸ್ತಾನ, ಪಂಬಾಜ್ ಮತ್ತು ಮಧ್ಯಪ್ರದೇಶಗಳ ಮೇಲೆ ಮಿಡತೆಗಳು ದಾಳಿ ಮಾಡಿವೆ ಈಗಾಗಲೇ ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ  ಬೆಳೆ ನಾಶ ಮಾಡಿರುವ ಮಿಡತೆ  ಮಹಾರಾಷ್ಟ್ರ ಮೂಲಕ ಕರ್ನಾಟಕಕ್ಕೂ ಪ್ರವೇಶ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ರಾಜ್ಯ ಸರಕಾರ ಮಿಡತೆ ಹಾವಳಿ ತಡೆಯಲು ಕ್ರಮಕೈಗೊಳ್ಳಲು ಸಭೆ ನಡೆಸಿದೆ.  ಮಹಾರಾಷ್ಟ್ರ ಗಡಿಭಾಗದಲ್ಲಿರುವ ರಾಜ್ಯದ ಜಿಲ್ಲೆಗಳಾದ ಕೊಪ್ಪಳ, ವಿಜಯಪುರ, ಬೀದರ್ ಹಾಗೂ ಯಾದಗಿರಿಗೆ ಕಟ್ಟೆಚ್ಚರದಿಂದಿರುವಂತೆ ಸೂಚಿಸಲಾಗಿದೆ.

ಎಲ್ಲೋ ಇದ್ದ ಆತಂಕ ಎನ್ನಲು ಈಗ ಸಾಧ್ಯವಿಲ್ಲ. ಕೊರೊನಾ ವೈರಸ್ ಚೀನಾದಲ್ಲಿ ಕಂಡುಬಂದರೂ ರಾಜ್ಯದ ಎಲ್ಲಾ ಹಳ್ಳಿಗಳಲ್ಲೂ ಕೆಲವೇ ಸಮಯದಲ್ಲಿ  ಕಂಡುಬಂದಿದೆ. ಇದೀಗ ಮಿಡಿತೆಯೂ ಅದೇ ಹಾದಿಯಲ್ಲಿದೆ. ಅಂಫಾನ್ ಚಂಡಮಾರುತದ ಕಾರಣದಿಂದ ಗಾಳಿಯ ದಿಕ್ಕು ಬದಲಾದ ಕಾರಣದಿಂದ ಪಾಕಿಸ್ತಾನದಿಂದ ದೇಶದ ಕೆಲವು ರಾಜ್ಯಗಳಲ್ಲಿ  ಕಂಡುಬಂದಿದೆ. ರಾಜಸ್ಥಾನದಿಂದ ಮಿಡತೆ ಹಿಂಡುಗಳು ಕೆಲವೇ ದಿನದಲ್ಲಿ ಸುಮಾರು 1,000 ಕಿ.ಮೀ ದೂರವನ್ನು ಕ್ರಮಿಸಿದೆ.

ಸದ್ಯ 3 ರಾಜ್ಯದಲ್ಲಿ  ಮಿಡತೆ ಆತಂಕ ಇದೆ. ಪಾಕಿಸ್ತಾನದ ಮಿಡತೆ ಹಿಂಡುಗಳು ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಮಧ್ಯಪ್ರದೇಶವನ್ನು ಪ್ರವೇಶಿಸಿದ್ದು, ಬೆಳದು ನಿಂತಿರುವ ಹತ್ತಿ ಬೆಳೆಗಳು ಮತ್ತು ತರಕಾರಿಗಳಿಗೆ ದೊಡ್ಡ ಹಾನಿಯಾಗುವ ಅಪಾಯವಿದೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಆದರೆ  ಇದುವರೆಗೆ ಭಾರೀ ಪ್ರಮಾಣದ ಹಾನಿ ಕಂಡುಬಂದಿಲ್ಲ. ಆದರೆ ಪರಿಣಾಮ ಏನೂ ಎಂಬುದೂ ಇದುವರೆಗೆ ಮಾಹಿತಿ ಇಲ್ಲ. ಹೀಗಾಗಿ  ಮಿಡತೆ ಹಿಂಡುಗಳ ದಾಳಿಯನ್ನು ತಡೆಗಟ್ಟಲು ಪಟಾಕಿಗಳನ್ನು ಸಿಡಿಸಲು ಮತ್ತು ಡ್ರಮ್ ಗಳನ್ನು ಹೊಡೆಯಲು, ಟೈರ್‌ಗಳನ್ನು ಸುಡುವ ಹೊಗೆ ಹಾಕಲು  ಮಹಾರಾಷ್ಟ್ರ ಗೃಹ ಸಚಿವ ಜನರನ್ನು ಕೇಳಿದ್ದಾರೆ.

Advertisement

ಈ ಮಿಡತೆಗಳ ಬಗ್ಗೆ ಇತ್ತೀಚಿನ ಸಂಶೋಧನೆ ಇಲ್ಲ:

ಈಗ ಕಂಡುಬಂದಿರುವ ಮಿಡತೆಗಳು ಮರುಭೂಮಿ ಪ್ರಬೇಧದ ಮಿಡತೆ ಎಂದು ಹೇಳಲಾಗುತ್ತದೆ. 1990 ರ ನಂತರ  ದೇಶದಲ್ಲಿ ಮರುಭೂಮಿ ಮಿಡತೆಗಳ ಬಗ್ಗೆ ಹೆಚ್ಚು ವ್ಯವಸ್ಥಿತ ಸಂಶೋಧನೆ ನಡೆದಿಲ್ಲ. ಈಗ ಮತ್ತೊಮ್ಮೆ ಸಂಶೋಧನೆಗೆ ಎಚ್ಚರಿಕೆ ನೀಡಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಡೈರೆಕ್ಟರ್ ಜನರಲ್ ತ್ರಿಲೋಚನ್ ಮೊಹಾಪಾತ್ರ  ಮಾಧ್ಯಮಗಳಿಗೆ ತಿಳಿಸಿದ್ದಾರೆ.1990 ರ ಮೊದಲು ಆಗಾಗ ಮಿಡತೆ ದಾಳಿ ನಡೆಯುತ್ತಿತ್ತು. 1997 ರ ನಂತರ ಮಿಡತೆ ದಾಳಿ ಕಡಿಮೆಯಾದ ಹಿನ್ನೆಲೆಯಲ್ಲಿ ಆ ಕಡೆಗೆ ಗಮನ ಕಡಿಮೆಯಾಗಿದೆ.  ಇದೀಗ ಈ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಾಗಿದೆ. ಏಕೆಂದರೆ ನೈರುತ್ಯ ಮುಂಗಾರು ಮೊದಲು ಹಾಗೂ ನಂತರ ಇಂತಹ ಮಿಡತೆಗಳು ವಲಸೆ ಹೋಗುವುದು  ಅಥವಾ ಗಾಳಿಯ ಜೊತೆ ಹೋಗುವ ಅಪಾಯ ಇದೆ. ಈ ಕಾರಣದಿಂದ ಅಧ್ಯಯನ ಅಗತ್ಯವಾಗಿದೆ.

ಪ್ರಧಾನಿಗಳಿಂದ ಭರವಸೆ :

ಮಿಡತೆ ದಾಳಿಯಿಂದ ಹಾನಿಗೊಳಗಾದ ಎಲ್ಲಾ ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಪ್ರಧಾನಿಗಳು ದೇಶದ ಹಲವು ಭಾಗಗಳಲ್ಲಿ ಮಿಡತೆ ದಾಳಿ ನಡೆಯುತ್ತಿದೆ. ಈ ಸಣ್ಣ ಕೀಟವು ಎಷ್ಟು ಹಾನಿಯನ್ನುಂಟು ಮಾಡುತ್ತದೆ ಎಂಬುದನ್ನು ಹಿಂದಿನ ದಾಳಿಗಳು ನಮಗೆ ನೆನಪಿಸಿವೆ. ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದರಿಂದ, ಕೃಷಿ ವಲಯದಲ್ಲಿನ ಈ ಬಿಕ್ಕಟ್ಟನ್ನು ಎದುರಿಸಲು ನಮಗೆ ಸಾಧ್ಯವಾಗುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದರು.

Advertisement

ಕರಾವಳಿಯಲ್ಲಿ ಮಿಡತೆ ಭಯ :

ಇದೀಗ ಕರಾವಳಿ ಜಿಲ್ಲೆಯಲ್ಲೂ ಮಿಡತೆ ಭಯ ಶುರುವಾಗಿದೆ.  ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಕಡಬ ತಾಲೂಕಿನ ಕೆಲವೆಡೆ ಮಿಡತೆ ಹಾವಳಿ ಕಂಡು ಬಂದಿದೆ. ಆದರೆ ಈ ಪ್ರಬೇಧದ ಮಿಡತೆ ಜಿಲ್ಲೆಯಲ್ಲಿ  ಈ ಹಿಂದೆಯೇ ಇತ್ತು , ಯಾವುದೇ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ ಎನ್ನುವುದೂ ಕೃಷಿಕರ ಅಭಿಪ್ರಾಯ. ಮಿಡತೆಗಳು ಯಾವ ರೀತಿಯಲ್ಲಿ  ಹಾನಿ ಮಾಡುತ್ತವೆ ಎಂಬುದು ಅರಿಯದ ಹಿನ್ನೆಲೆಯಲ್ಲಿ  ಕೃಷಿಕರಿಗೆ ಭಯ ಉಂಟಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಧನ ಧಾನ್ಯ ಕೃಷಿ ಯೋಜನೆ ಘೋಷಣೆ | ಯೋಜನೆಗೆ  ರೈತಾಪಿ ವರ್ಗದಿಂದ ಸ್ವಾಗತ
July 19, 2025
9:22 PM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿ – 43 ಸಾವಿರ ಕೋ. ರೂ. ವೆಚ್ಚದಲ್ಲಿ ಶೀಘ್ರ ಪೂರ್ಣ
July 19, 2025
9:09 PM
by: ದ ರೂರಲ್ ಮಿರರ್.ಕಾಂ
ಗದಗ | ಈರುಳ್ಳಿ ಮತ್ತು ಕೆಂಪುಮೆಣಸಿನಕಾಯಿ ಬೆಳೆಗಳಿಗೆ ವಿಮಾ ಸೌಲಭ್ಯ ಅಧಿಸೂಚನೆ
July 19, 2025
8:56 PM
by: ದ ರೂರಲ್ ಮಿರರ್.ಕಾಂ
ಉತ್ತರಕನ್ನಡ ಜಿಲ್ಲೆಯಲ್ಲಿ ನಿಯಮಬಾಹಿರವಾಗಿ ವಾಸ್ತವ್ಯ ಹೂಡಿರುವ ವಿದೇಶಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ
July 19, 2025
8:48 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group