ಮುಂಗಾರಿನ ಸಿಂಚನಕ್ಕೆ “ಥಂಡರ್ ಲಿಲ್ಲಿ”

Advertisement
ಪೆರ್ನಾಜೆ : ಮುಂಗಾರಿನ ಅಭಿಷೇಕಕ್ಕೆ ಮೆದುವಾಯಿತು ನೆಲವು ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು ಎಂದು ಕವಿಪುಂಗವರು ಹಾಡಿದ್ದೇನೊ ನಿಜ .
ಮೊದಲ ಮಳೆಯ ಹೂವಿದು ರಕ್ತ ಕೆಂಪು ಬಣ್ಣದ ಈ ಹೂವು ಬಲಿತಂತೆ ಗುಲಾಬಿ ಬಣ್ಣಕ್ಕೆ ತಿರುಗಿ ಅನಂತರ ಹಸಿರು ಬಣ್ಣಕ್ಕೆ ತಿರುಗುವ ಪ್ರಕ್ರಿಯೆ ನೋಡಲು ಆಹ್ಲಾದಕರ ಕೊನೆಗೆ ಅದರ ದಂಟಿನಂತೆಯೇ ಹೂಗಳು ಉದುರಿ ಹಸಿರಾಗಿ ಅದರಲ್ಲಿ ಹಳದಿ ಬಣ್ಣದ ಹಣ್ಣುಗಳಾಗುತ್ತವೆ.  ನೆಲದಡಿಯಲ್ಲಿ ಗೌಪ್ಯವಾಗಿ ಹುದುಗಿದ್ದ ಮಳೆ ಬಂದೊಡನೆ ಹೊರಬಂದು ನಗುವ ಈ ಹೂವಿನ ಸಸ್ಯಶಾಸ್ತ್ರ ಹೆಸರು ಹೆಕ್ಮಂಥಸ್ ಕೊಕ್ಸೀನಿಯಸ್  ಇದು ದಕ್ಷಿಣ ಆಫ್ರಿಕಾದಿಂದ ಬಂದ ಹೂವು.
ಈ ಅಪರೂಪದ ಹೂವಿಗೆ ಬ್ಲಡ್ ಲಿಲ್ಲಿ, ಗರುಡ ಲಿಲ್ಲಿ, ವಾಟರ್ ಲಿಲ್ಲಿ, ಸಿಡಿಲಮರಿ, ಥಂಡರ್ ಲಿಲ್ಲಿ, ತಿಂಗಳ ರಾಣಿ, ಮ್ಯಾಗ್ಮಿಲಿಯಾ, ಗದಾಪುಷ್ಪ ಎಂದು ಇದಕ್ಕೆ ಹಲವಾರು ನಾಮದೇಯಗಳು ಹೂಗಳಿಂದ ತುಂಬಿದ ಗೋಲಾಕಾರದ ಬೆಡಗಿ ಲಾವಣ್ಯವತಿಯಾಗಿ ರಸಿಕರ ಕಣ್ಮನಗಳಿಗೆ ಹರ್ಷೋಲ್ಲಾಸ ತುಂಬುತ್ತದೆ.
ವರ್ಷದಲ್ಲಿ ಒಮ್ಮೆ ಮಾತ್ರ ಅರಳುವ ಅಪರೂಪದ ಅತಿಥಿ ಸೌಂದರ್ಯ ಕಂಡರೆ ಅಸ್ತಿತ್ವ ಸಾರ್ಥಕವೆನಿಸುತ್ತದೆ ಇದು ಒಂದು ಸಂಯುಕ್ತ ಹೂವು ಪ್ರತಿ ಹೂವಿನಲ್ಲಿ ಸೂಜಿಯಾಕಾರದ ಏಳು ದಳಗಳಿರುತ್ತವೆ ಅದರ ತಳಭಾಗದಲ್ಲಿ ಆರು ತೆಳ್ಳಗಿನ ದಳಗಳಂತೆ ಇರುವ ಪುಷ್ಪಪಾತ್ರೆ ಇರುತ್ತದೆ ಈ ರೀತಿಯ ಹೂವುಗಳು ಒಂದೇ ಮುಷ್ಟಿಯಲ್ಲಿ ಅದುಮಿ ಹಿಡಿದಂತೆ ಗೋಲಾಕಾರವಾಗಿ ಇರುತ್ತವೆ ಮೊದಲ ಮಳೆಗೆ ಬಟ್ಟಬಯಲಲ್ಲಿ  ಭೂಮಿಯನ್ನು ಸೀಳಿ ಬಂದಂತೆ ಬಾಣದಂತಿರುವ ಮೊಗ್ಗು ಹೊರಚಿಮ್ಮಿ  ನಿಧಾನವಾಗಿ ಹೂವು ಅರಳುತ್ತದೆ ತದನಂತರ ಹೂವು ಬಾಡಿ ದಪ್ಪ ಎಲೆಯ ಹಸಿರು ಬಣ್ಣದಾಗಿದ್ದು ಬೇಸಿಗೆ ಕಾಲದಲ್ಲಿ ಹಳದಿ ಬಣ್ಣಕ್ಕೆ ತಿರುಗಿ ಗಿಡ ನಶಿಸುತ್ತದೆ (ಸಾಯುತ್ತದೆ) ನೆಲದಾಳದಲ್ಲಿ ಗಡ್ಡೆ ಇದ್ದು ಬಿಳಿ ಈರುಳ್ಳಿಯಂತೆ ಅಡಗಿರುತ್ತದೆ ವರ್ಷಗಳು ಕಳೆದಂತೆ ಗಡ್ಡೆಗಳ ಗಾತ್ರ ದೊಡ್ಡದಾಗುತ್ತದೆ. ಅಂತಹ ಗಿಡದ ಹೂವು ದೊಡ್ಡದಾಗಿರುತ್ತವೆ ಗಡ್ಡೆಯ ಸುತ್ತಲೂ ಮರಿ ಗಡ್ಡೆಗಳು ಗಡ್ಡೆಗಳಾಗುತ್ತದೆ.
ಗೊಂಚಲು ಗೊಂಚಲು ಹೂವುಗಳು ಅರಳಿ ನಿಂತಾಗ ಗಂಧರ್ವಲೋಕದ ಅಪ್ಸರೆಯನ್ನು ಕಂಡಂತಾಗುತ್ತದೆ ಇಂತಹ ಹೂವಿನ ಗಡ್ಡೆಗಳಿಗೆ ಬೇಸಿಗೆಯಲ್ಲಿ ನೀರಿನ ಅಗತ್ಯವೇ ಇರುವುದಿಲ್ಲ ದೇವರ ಆರಾಧನೆಗೂ ಬಳಸುವ ಹೆಣ್ಣಿನ ಮುಡಿಯನ್ನು ಅಲಂಕರಿಸುವ ಈ ಹೂವುಗಳಿಗೆ ಬೇಡಿಕೆ ಇಲ್ಲದ ದಿನವಿಲ್ಲ ಅಲಂಕಾರಿಕವಾಗಿಯೂ ಈ ಹೂಗಳನ್ನು ಬಳಸುತ್ತಾರೆ ಅನೇಕ ದಿನಗಳವರೆಗೆ ಬಾಡದಂತೆ ಆಗತಾನೆ ಗಿಡದಿಂದ ಕಿತ್ತಂತೆ ಕೆಲದಿನಗಳ ಕಾಲ ಇದನ್ನು ಕಾಯ್ದಿಡಲು ಸಾಧ್ಯ ಈಗೀಗ ಈ ಹೂವಿನ ಗಿಡಗಳು ಕಣ್ಮರೆಯಾಗುತ್ತಿವೆ ಬರಹಗಾರ ಕುಮಾರ್ ಪೆರ್ನಾಜೆ ಅವರ ಮನೆಯ ಸುತ್ತಲೂ ಅರಳಿ ನಗುವ ವಿಶಿಷ್ಟ ಹೂವನ್ನು ಹೆಚ್ಚಾಗಿ ಬೆಳೆಸಿ ರಕ್ಷಿಸುವತ್ತ ಗಮನ ಕೊಡಬೇಕಾಗಿದೆ.
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement
Advertisement

Be the first to comment on "ಮುಂಗಾರಿನ ಸಿಂಚನಕ್ಕೆ “ಥಂಡರ್ ಲಿಲ್ಲಿ”"

Leave a comment

Your email address will not be published.


*