ಮುಂಡೂರಿನಲ್ಲಿ ಪ್ಲಾಸ್ಟಿಕ್ ಸೌಧ ಇದ್ದರೂ ಅದರೊಳಗೆ ಸೇರದ ಪ್ಲಾಸ್ಟಿಕ್….!

Advertisement

ಸವಣೂರು:  ಅಭಿವೃದ್ದಿ ಹೊಂದುತ್ತಿರುವ ಗ್ರಾಮಗಳ ಪೈಕಿ ಪುತ್ತೂರು ತಾಲೂಕಿನ ಮುಂಡೂರು ಗ್ರಾಮವೂ ಸೇರಿಕೊಂಡಿದೆ. ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ ಪ್ಲಾಸ್ಟಿಕನ್ನು ಭೂಮಿಯ ಮೇಲೆ ಹಾಕಬೇಡಿ ಪರಿಸರವನ್ನು ಕಾಪಾಡಿ ಎಂದು ಗ್ರಾಮಸ್ಥರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಪ್ರಾರಂಭದಿಂದಲೇ ಮಾಡಿಕೊಂಡು ಬರುತ್ತಿದೆ . ಮುಂಡೂರು ಗ್ರಾಪಂ ಅಥವಾ ಪೇಟೆಯ ಸುತ್ತ ಮುತ್ತಲ ಅಂಗಡಿಗಳು, ಮನೆಗಳಿಂದ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ದಾಸ್ತಾನಿರಿಸಲು ಗ್ರಾಪಂ ವತಿಯಿಂದ ಗ್ರಾಪಂ ಕಚೇರಿ ಎದುರು ಪ್ಲಾಸ್ಟಿಕ್ ಸೌಧವನ್ನೇ ನಿರ್ಮಿಸಿದೆ ಆದರೆ ಸೌಧಕ್ಕೆ ಪ್ಲಾಸ್ಟಿಕ್ ಮಾತ್ರಾ ಅದರೊಳಗೆ ಸೇರುವುದೇ ಇಲ್ಲ…!

Advertisement

ಅಚ್ಚುಕಟ್ಟಾದ ವ್ಯವಸ್ಥೆ
ಗ್ರಾಪಂ ವತಿಯಿಂದ ನಿರ್ಮಿಸಲಾದ ಪ್ಲಾಸ್ಟಿಕ್ ಸೌಧ ಒಂದು ಅಚ್ಚುಕಟ್ಟಾದ ವ್ಯವಸ್ಥೆಯಾಗಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಬದಲಾಗಿ ಸೌಧದೊಳಗೆ ತಂದು ಹಾಕಿ ಅದನ್ನು ನಾವು ಬೇರೆ ಕಡೆ ಸಾಗಾಟ ಮಾಡುತ್ತೇವೆ ಎಂದು ಗ್ರಾಪಂ ಮನವಿಯನ್ನು ಮಾಡುವ ಮೂಲಕ ಹೊಸ ವ್ಯವಸ್ಥೆಯನ್ನು ಪ್ರಾರಂಭ ಮಾಡಿತ್ತು. ಕಳೆದ ಐದು ವರ್ಷಗಳ ಹಿಂದೆ ನಿರ್ಮಾಣ ಗೊಂಡ ಈ ಸೇವೆಯನ್ನು ಮೊದಲ ಬಾರಿಗೆ ಜನ ಉಪಯೋಗಿಸುತ್ತಿದ್ದರು. ಆ ಬಳಿಕ ಬಳಕೆ ಮಾಡುವುದನ್ನೇ ನಿಲ್ಲಿಸಿದ್ದಾರೆ. ಈಗ ಸೌಧದೊಳಗೆ ಕಸವನ್ನು ಹಾಕುವುದೇ ಇಲ್ಲ. ಇದರಿಂದ ಗ್ರಾಪಂ ಸ್ವಚ್ಛತೆಯ ಕುರಿತು ಇದ್ದ ಕನಸು ನನಸಾಗಲು ಸಾಧ್ಯವಾಗಲೇ ಇಲ್ಲ.

Advertisement
Advertisement

ರಸ್ತೆ ಬದಿಯಲ್ಲೇ ಎಸೆಯುತ್ತಾರೆ
ಮುಂಡೂರು ಗ್ರಾ.ಪಂ.ನ ಎದುರಿನ ರಸ್ತೆಯ ಪಕ್ಕದಲ್ಲೇ ಪ್ಲಾಸ್ಟಿಕ್ ಸೌಧ ಇದ್ದರೂ ಅದಕ್ಕೆ ಕಸ ಹಾಕುವುದು ಕಡಿಮೆ. ಕಸ ರಸ್ತೆಯ ಬದಿಯಲ್ಲಿ ಇಂದಿಗೂ ಕಸ ಬೀಳುತ್ತಲೇ ಇದೆ.ಕೂಡುರಸ್ತೆ -ಮುಂಡೂರು ರಸ್ತೆಯ ಬದಿಯಲ್ಲೂ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಎಸೆದ ಕಸಗಳು ಕಾಣಸಿಗುತ್ತದೆ. ಪರಿಸರವನ್ನು ಹಾಳು ಮಾಡುವ ಷಡ್ಯಂತ್ರ ಇದರ ಹಿಂದೆ ಎನ್ನುತ್ತಾರೆ ಗ್ರಾಮಸ್ಥರು. ಕಸ ಹಾಕಲು ವ್ಯವಸ್ಥೆ ಇದ್ದರೂ ಕಸ ಹಾಕುತ್ತಿಲ್ಲ, ಆದರೆ ರಾತ್ರಿ ವೇಳೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ಕಸವನ್ನು ರಸ್ತೆ ಬದಿ ಎಸೆಯುತ್ತಾರೆ. ಕಸವನ್ನು ಯಾರು ಎಸೆಯುತ್ತಾರೆ ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ.

ಸತ್ತ ಕೋಳಿ ವಿಲೇ : ಕಾನೂನು ಕ್ರಮ
ಇತ್ತೀಚೆಗೆ ಸ್ಥಳೀಯ ವ್ಯಕ್ತಿಯೋರ್ವರು ಸುಮಾರು 500 ರಷ್ಟು ಸತ್ತಕೋಳಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಹಾಕಿದ್ದನ್ನು ಪತ್ತೆಹಚ್ಚಿ ಗ್ರಾ.ಪಂ.ಗೆ ದೂರು ನೀಡಿದ್ದರು.ಬಳಿಕ ಗ್ರಾ.ಪಂ.ನಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

Advertisement

ಜಾಗೃತಿ ಮುಖ್ಯ
ಮನೆಯಲ್ಲಿ ಉತ್ಪತ್ತಿಯಾದ ಕಸವನ್ನು ಗ್ರಾಮಸ್ಥರು ಮನೆಯಲ್ಲೇ ಬಳಕೆ ಮಾಡುತ್ತಾರೆ. ಆದರೆ ಪ್ಲಾಸ್ಟಿಕ್ ವಸ್ತುಗಳನ್ನು ಏನು ಮಾಡಬೇಕು , ಏನು ಮಾಡಬಹುದು ಎಂಬ ಪರಿಜ್ಞಾನ ಕೆಲವರಿಗೆ ಇರುವುದಿಲ್ಲ. ಪ್ಲಾಸ್ಟಿಕ್ ಚೀಲಗಳನ್ನು ಮರು ಬಳಕೆ ಮಾಡುತ್ತಾರೆ ಎಂಬ ವಿಚಾರ ಗ್ರಾಮೀಣ ಜನರಿಗೆ ಮಾಹಿತಿ ಇರುವುದಿಲ್ಲ.
ಪ್ಲಾಸ್ಟಿಕ್ ವಸ್ತುಗಳನ್ನು ಸ್ವಚ್ಛವಾಗಿಟ್ಟು ಒಣಗಿಸಿ ಅದನ್ನು ಸ್ಥಳೀಯ ಅಂಗನವಾಗಿಗೆ ನೀಡಿದರೆ ಅಲ್ಲಿಂದ ಬೇರೆ ಕಡೆ ರವಾನೆಯಾಗುತ್ತದೆ ಪ್ಲಾಸ್ಟಿಕ್ ಚೀಲಗಳನ್ನು ಕ್ರೋಡೀಕರಿಸಿ ಎಂದು ಸರಕಾರವೇ ಮನೆ ಮನೆಗೆ ಮಾಹಿತಿ ನೀಡಿದೆ ಆದರೆ ಪ್ರಯೋಜನ ಮಾತ್ರ ಶೂನ್ಯ. ಯಾವ ಅಂಗನವಾಡಿಗೂ ಪ್ಲಾಸ್ಟಿಕ್ ಬರಲೇ ಇಲ್ಲ. ಪ್ಲಾಸ್ಟಿಕ್ ವಸ್ತುಗಳಿಂದ ಆಗುತ್ತಿರುವ ತೊಂದರೆಗಳ ಕುರಿತು ಜಾಗೃತಿ ಮೂಡಿಸುವುದೊಂದೇ ಇದಕ್ಕೆ ಪರಿಹಾರ ಎಂಬಂತಿದೆ.

ಗ್ರಾಮ ಸ್ವಚ್ಛ ಗ್ರಾಮವಾಗಬೇಕು, ಪ್ಲಾಸ್ಟಿಕ್ ವಸ್ತುಗಳ ಬಳಕೆ ಕಡಿಮೆ ಮಾಡಿ ಜನ ಬಟ್ಟೆ ಚೀಲಗಳನ್ನೇ ಬಳಕೆ ಮಾಡಬೇಕು ಎಂಬ ಉದ್ದೇಶದಿಂದ ನಾವು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿ ಸರ್ವೆ ಷಣ್ಮುಖ ಯುವಕ ಮಂಡಲವು ರಾಜ್ಯದಲ್ಲಿ 2ನೇ ಸ್ಥಾನ, ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು.ಈ ಯುವಕ ಮಂಡಲ ಸರ್ವೆ ಗ್ರಾಮಾದಾದ್ಯಂತ ಸ್ವಚ್ಛತೆ ಕುರಿತಂತೆ ಶಾಶ್ವತ ಯೋಜನೆ ಸೇರಿದಂತೆ ಜಾಗೃತಿ ಕಾರ್ಯವನ್ನೂ ನಡೆಸಿ ಮಾದರಿಯಾಗಿದೆ.

Advertisement

ಸಾರ್ವಜನಿಕರ ಸಹಕಾರ ಇದ್ದಲ್ಲಿ ಮಾತ್ರ ಯಾವುದೇ ಸಾರ್ವಜನಿಕ ಕೆಲಸ ಯಶಸ್ವಿ ಕಾಣಲು ಸಾದ್ಯವಾಗುತ್ತದೆ. ಸ್ವಚ್ಛತೆಯ ಕಡೆಗಣಿಸಿ ಸಮಸ್ಯೆ ಉಂಟುಮಾಡುವವರ ವಿರುದ್ದ ಗ್ರಾಪಂ ಕಾನೂನು ಕ್ರಮಕೈಗೊಳ್ಳಲಿದೆ. ಸ್ವಚ್ಛ ಗ್ರಾಮವಾಗಿಡಲು ಎಲ್ಲರೂ ಸಹಕರಿಸಬೇಕು ಎನ್ನುತ್ತಾರೆ ಮುಂಡೂರು ಗ್ರಾಪಂ ಅಧ್ಯಕ್ಷ ಎಸ್. ಡಿ ವಸಂತ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಮುಂಡೂರಿನಲ್ಲಿ ಪ್ಲಾಸ್ಟಿಕ್ ಸೌಧ ಇದ್ದರೂ ಅದರೊಳಗೆ ಸೇರದ ಪ್ಲಾಸ್ಟಿಕ್….!"

Leave a comment

Your email address will not be published.


*