ಬೆಂಗಳೂರು: ಕರ್ನಾಟಕದ ಉಪಸಮರ ಮುಗಿದಿದ್ದು ಸಿ ವೋಟರ್ ಸಮೀಕ್ಷೆ ಬಿಜೆಪಿಗೆ ಮುನ್ನಡೆ ನೀಡಿದೆ. ಬಿಜೆಪಿ 9 ರಿಂದ 12 ಸ್ಥಾನದಲ್ಲಿ ಜಯ ಸಾಧಿಸಲಿದೆ ಎಂದು ಹೇಳಿದ್ದರೆ ಕಾಂಗ್ರೆಸ್ ಗೆ 3 ರಿಂದ 6 ಸ್ಥಾನ ದೊರೆಯಲಿದೆ ಎಂದು ಹೇಳಿದೆ.
ಜೆಡಿಎಸ್ 1 ಸ್ಥಾನದಲ್ಲಿ ಗೆಲ್ಲುವ ಸಾಧ್ಯತೆ ಇದೆ, ಪಕ್ಷೇತರ ಶೂನ್ಯ ಫಲಿತಾಂಶ ಬರಲಿದೆ ಎಂದು ಸಿ -ವೋಟರ್ ಸಮೀಕ್ಷೆ ಹೇಳಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜಡಿಎಸ್ ಪಕ್ಷಗಳು ಆಂತರಿಕವಾಗಿ ತಮ್ಮ ತಮ್ಮ ಸಮೀಕ್ಷೆ ಮಾಡಿವೆ. ಆಯಾ ಪಕ್ಷಗಳು ತಮ್ಮ ಕಾರ್ಯಕರ್ತರ ಮಾಹಿತಿ ಆಧಾರದ ಮೇಲೆ ಇಂತಿಷ್ಟು ಸ್ಥಾನ ಬರುವುದು ಎಂಬ ಲೆಕ್ಕಾಚಾರ ಮಾಡಿಕೊಂಡಿವೆ.
15 ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಡಿ.5ರಂದು ಮುಗಿದಿದೆ. ಡಿಸೆಂಬರ್ 9 ರಂದು ಫಲಿತಾಂಶ ಹೊರಬೀಳಲಿದ್ದು ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಅಳಿವು-ಉಳಿವು ಆ ಫಲಿತಾಂಶದ ಮೇಲೆ ನಿಂತಿದೆ.
ಉಪಚುನಾವಣೆ ನಡೆದಿರುವ ಕ್ಷೇತ್ರಗಳು :
1.ಗೋಕಾಕ್, 2.ಅಥಣಿ, 3.ಕಾಗವಾಡ (ಬೆಳಗಾವಿ), 4. ರಾಣೇಬೆನ್ನೂರು, 5. ಹಿರೇಕೆರೂರು (ಹಾವೇರಿ), 6. ಕೆ.ಆರ್.ಪುರಂ, 7.ಯಶವಂತಪುರ, 8. ಶಿವಾಜಿನಗರ, 9. ಮಾಹಾಲಕ್ಷ್ಮೀ ಲೇಔಟ್ (ಬೆಂಗಳೂರು), 10.ಯಲ್ಲಾಪುರ (ಉತ್ತರ ಕನ್ನಡ), 11. ಕೆ.ಆರ್.ಪೇಟೆ (ಮಂಡ್ಯ), 12. ಹುಣಸೂರು (ಮೈಸೂರು), 13. ಚಿಕ್ಕಬಳ್ಳಾಪುರ, 14. ಹೊಸಕೋಟೆ (ಬೆಂಗಳೂರು ಗ್ರಾಮಾಂತರ) ಹಾಗೂ 15. ವಿಜಯನಗರ (ಬಳ್ಳಾರಿ)